ಹಿರಿಯರೇ ಮಕ್ಕಳಿಗೆ ಅತ್ಯುತ್ತಮ ಮಾರ್ಗದರ್ಶಕರು: ಶಾಸಕರಾದ ಎಚ್. ಆರ್.ಗವಿಯಪ್ಪ

0

Get real time updates directly on you device, subscribe now.


ಹೊಸಪೇಟೆ (ವಿಜಯನಗರ)
ಹಿರಿಯ ನಾಗರಿಕರು ಮಕ್ಕಳು ಮತ್ತು ಕುಟುಂಬದ ಜೊತೆಗೆಯೇ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳೊಂದಿಗೆ ಮಾತನಾಡವೇಕು. ಮಕ್ಕಳಿಗೆ ಹಿರಿಯರೇ ಅತ್ಯುತ್ತಮ ಮಾರ್ಗದರ್ಶಕರು ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್ ಆರ್ ಗವಿಯಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ‌ ಹಾಗೂ ವಿಶೇಷ ಚೇತನರು ಹಾಗೂ‌‌ ಹಿರಿಯ ನಾಗರಿಕರ ಸಬಲೀಕರಣ‌ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ
ಸೆಪ್ಟೆಂಬರ್ 9ರಂದು ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು‌ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ
ಪಾರಿವಾಳ ಹಾರಿ ಬಿಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯರಾದವರು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಜೊತೆಗಿದ್ದಾಗ ಮಕ್ಕಳಂತಿರುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಿರಲಿ, ಮೊಮ್ಮಕ್ಕಳಿರಲಿ ಯಾರಾದರು ಸಿಡಿಮಿಡಿಗೊಂಡಾಗ ಆ ವೇಳೆ ಹಿರಿಯರು ಮೌನ ವಹಿಸಬೇಕು. ಮಾತಿಗೆ ಮಾತು ಬೆಳೆಸಬಾರದು. ಶಾಂತರಾಗಿದ್ದು, ವಾತಾವರಣ ತಿಳಿಯಾದಾಗ ಕಿರಿಯರಿಗೆ ತಿಳಿ ಹೇಳಬೇಕು. ಕುಟುಂಬ ನಡೆಸುವ ಮಹತ್ವದ ಜವಾಬ್ದಾರಿಯ ಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಏನಾದರು ಅವಘಡಗಳಾದಾಗ ಅದನ್ನು ಎದುರಿಸಿ ಬಾಳಲು ಅವರಿಗೆ ಧೈರ್ಯ ಹೇಳಬೇಕು ಎಂದು ಶಾಸಕರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ ಅವರು ಮಾತನಾಡಿ,
ಈ ಹಿಂದೆ ಹಿರಿಯ ನಾಗರಿಕರು ಬಹುತೇಕ ತಮ್ಮ ಸಮಯವನ್ನು ಮನೆಯಲ್ಲಿ ಮಕ್ಕಳ ಜೊತೆಗೆ ಕಳೆಯುತ್ತಿದ್ದರು. ಈಗ ಈ ವಾತಾವರಣ ಕಾಣುತ್ತಿಲ್ಲ.‌ ಹಿರಿಯರಾದವರು ಆಸ್ತಿ ಹಣದ ಬೆನ್ನು ಹತ್ತಿ ಹೋಗಬಾರದು. ಭ್ರಮೆಗಳಿಂದ ಹೊರಬರಬೇಕು. ಚಿಂತೆಗಳನ್ನು ಕೈಬಿಡಬೇಕು ಎಂದರು.
ಹಿರಿಯರೇ ಕುಟುಂಬದ ಗುರು ಮತ್ತು ನಾಯಕ ಇದ್ದಂತೆ. ಹಿರಿಯರು ನಿತ್ಯ ವಾಯುವಿಹಾರದಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸಲು ಮತ್ತು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಸರ್ಕಾರದಿಂದಲೇ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ಸ್ಪರ್ದೇಗಳು:
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಪುರುಷರ ವಿಭಾಗದಲ್ಲಿ ನಡಿಗೆ ಸ್ಪರ್ಧೆ, ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಗೆ ಗಾಯನ ಸ್ಪರ್ಧೆ ಮತ್ತು ಏಕಪಾತ್ರ ಅಭಿನಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳಾದ ಅವಿನಾಶ ಎಸ್ ಗೋಟಖಿಂಡಿ, ಹರಪನಹಳ್ಳಿಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶೇಖರಗೌಡ ಪಾಟೀಲ್, ಹೊಸಪೇಟೆ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ರಾಮಪ್ಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ಎಂ ಆರ್ ಡಬ್ಲ್ಯೂ, ಯು ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ ಹಾಗೂ ಹಿರಿಯ ನಾಗರಿಕರು ಮತ್ತು ಕುಟುಂಬದವರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: