26 ರಂದು 27 ರಂದು ಶ್ರೀ ಕೃಷ್ಣ ಜಯಂತಿ
ಕೊಪ್ಪಳ, 24- ನಗರದ ಪ್ರಶಾಂತ ಬಡಾಣೆಯಲ್ಲಿ ಇದೇ ಅಗಷ್ಟನಲ್ಲಿ 26 ಮತ್ತು 27ರಂದು ಎರಡು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ 23 ಶುಕ್ರವಾರ ದಿಂದ 27 ಮಂಗಳವಾರದ ವರೆಗೆ ವಿವಿಧ ದಾರ್ಮಿಕ ಕಾರ್ಯಕ್ರಮಗಲು ಜರುಗಲಿವೆ.
ಅಗಷ್ಟ 23 ಶುಕ್ರವಾರ ದಿಂದ 27 ರವರೆಗೆ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಪಂ, ರಘುಪ್ರೇಮಾಚಾರ್ಯ ಮುಳಗುಂದ ಇವರಿಂದ “ಶ್ರೀ ಭಾಗವತ ಪ್ರವಚನ” ಜರುಗಲಿದೆ.
ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ 26ರಂದು ಸೋಮವಾರದಂದು ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ಮಹಾಭೀಷೇಕ – ವಿಷ್ಣು ಸಹರ್ಸನಾಮ ಪಾರಾಯಣ ಅಲಂಕಾರ ಜರುಗಲಿದ್ದು, ಸಂಜೆ ಶ್ರೀಕೃಷ್ಣ ದೇವರಿಗೆ ಬೆಣ್ಣೆ ಅಲಂಕಾರ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳಿಂದ ವೇಷಭೂಷಣ ಪ್ರದರ್ಶನ, ರಾತ್ರಿ ಶ್ರೀ ಕೃಷ್ಣ ದೇವರಿಗೆ ಅರ್ಘ್ಯ ಪ್ರಧಾನ ಜರುಗಲಿದೆ.
೨೭ರಂದು ಮಂಗಳವಾರ ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ತೋಟ್ಟಿಲು ಸೇವೆ, ಪಂಚಾಮೃತ ಅಭಿಷೇಕ ನೈವೇದ್ಯ, ಮಹಾಮಂಗಳಾರತಿ ಪಾರಣಿ ತೀರ್ಥ ಪ್ರಸಾದ ಜರುಗಲಿದೆ, ಸಂಜೆ ೪ಕ್ಕೆ ಪಂಡಿತರಿAದ ಪ್ರವಚನ ಸೇವಾಕರ್ತರಿಗೆ ಫಲ ಮಂತ್ರಾಕ್ಷತೆ, ಗ್ರಾಮ ಪ್ರದಕ್ಷಿಣೆ, ಗೋಪಾಲ ಕಾವಲಿ, ಪಲ್ಲಕ್ಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
Comments are closed.