ರಾಖಿ ಸೋದರತ್ವದ ಸಂಕೇತ,ಸೌಹಾರ್ದತೆಯ ಸೂಚಕ-ಯೋಗಿನಿ ಅಕ್ಕ

Get real time updates directly on you device, subscribe now.

ಪವಿತ್ರತೆಯ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಯೂ ಇಂದು ದುಃಖದ ಬಂಧನ, ಕಷ್ಟದ ಬಂಧನ, ಚಿಂತೆಯ ಬಂಧನ, ಸಮಸ್ಯೆಗಳ ಬಂಧನ, ಕ್ರೋಧ ಈರ್ಷೆ ದ್ವೇಷಗಳ ಬಂಧನದಲ್ಲಿ ಸಿಲುಕಿದ್ದಾನೆ. ಈ ಎಲ್ಲಾ ಬಂಧನಗಳಿಂದ ಹೊರಬರುವ ದಾರಿಯನ್ನ ತೋರಿಸುವುದೇ ಆಧ್ಯಾತ್ಮ ಜ್ಞಾನ ಮಾರ್ಗ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕೈದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಯಾವುದೇ ಕೆಟ್ಟ ಕರ್ಮಕ್ಕೆ ಕಾರಣ ಮೊದಲು ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರುತ್ತವೆ ನಂತರ ಕೆಟ್ಟಕರ್ಮ ಮಾಡುತ್ತಾನೆ ಆದ್ದರಿಂದ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಸಮಾಪ್ತಿ ಮಾಡಲು ಒಳ್ಳೆಯ ಆಲೋಚನೆಗಳನ್ನೇ ಮಾಡುವ ತರಬೇತಿಯನ್ನು ಮನಸ್ಸಿಗೆ ನೀಡಬೇಕು ಒಳ್ಳೆಯ ಆಲೋಚನೆಗಳು ಬರಲು ಒಳ್ಳೆಯ ವಿಚಾರಗಳನ್ನು ಕೇಳಬೇಕು ತನ್ನ ತಪ್ಪಿನ ಅರಿವು ಮಾಡಿಕೊಳ್ಳುವವನೇ ಶ್ರೇಷ್ಠ ವ್ಯಕ್ತಿ. ನಮ್ಮ ಜೀವನದಲ್ಲಿ ಪರಿವರ್ತನೆ ಆಗಲು ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು ಅಲ್ಪಕಾಲದ ಸುಖಕ್ಕೆ ಮರುಳಾಗದೆ ಪಾಪಕರ್ಮದ ಬಗ್ಗೆ ಎಚ್ಚರಿಕೆ ಇರಬೇಕು ಎಂದರು. ಮನಸ್ಸಿದ್ದಲ್ಲಿ ಮಾರ್ಗವಿದೆ ತಪ್ಪಿನ ಅರಿವು ಮಾಡಿಕೊಂಡು ಪರಿವರ್ತನೆಯಾಗುವ ದೃಢಸಂಕಲ್ಪ ಮಾಡಿ ಎಂದು ಕರೆ ನೀಡಿದರು. ನಾವೆಲ್ಲ ಒಬ್ಬ ಪರಮಾತ್ಮನ ಮಕ್ಕಳು ಪರಸ್ಪರ ಸೋದರ ಸೋದರಿಯರು ಎಂಬ ಪವಿತ್ರ ಭಾವನೆಯನ್ನು ಇಟ್ಟುಕೊಳ್ಳಿ ಎಂದು ಶುಭ ಹಾರೈಸಿದರು. ಎಲ್ಲರಿಗೂ ಧ್ಯಾನದ ಮೂಲಕ ಶಾಂತಿಯ ಅನುಭೂತಿ ಮಾಡಿಸಿದರು.
ಜಿಲ್ಲಾ ಕಾರಾಗೃಹದ ಅಧಿಕ್ಷಕರಾದ ಅಮರೇಶ್ ಪೂಜಾರ್ ಮಾತನಾಡುತ್ತಾ ಕೈದಿಗಳ ಮನ ಪರಿವರ್ತನೆ ಆಗಲು ಆಧ್ಯಾತ್ಮ ಚಿಂತನೆ ಅತ್ಯವಶ್ಯಕ ಎಂದರು. ಬ್ರಹ್ಮಕುಮಾರಿ ಸೋದರಿಯರು ಕೈದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಉಡುಗೊರೆ ನೀಡಿ ಸಿಹಿ ವಿತರಿಸಿದರು

Get real time updates directly on you device, subscribe now.

Comments are closed.

error: Content is protected !!
%d bloggers like this: