ಕ್ರೀಡೆಗಳು ನಮ್ಮದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಡಗೊಳಿಸುತ್ತವೆ-ಸಂಜಯ್ ಕೊತಬಾಳ್
,ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕರ್ನಾಟಕ ಸಹಯೊಗದೊಂದಿಗೆ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆರ್ ಜಿ ಯುಎಚ್‌ಎಸ್‌ಕಲ್ಬುರ್ಗಿ ವಿಭಾಗ ಮಟ್ಟದ ಪುರುಷ ಮತ್ತು ಮಹಿಳಾ ಷಟಲ್ ಪಂದ್ಯಾಟಗಳನ್ನು ದಿನಾಂಕ ೧೯ ಮತ್ತು ೨೦ ಅಗಸ್ಟ ೨೦೨೪ ರಂದು ಆಯೋಜಿಸಲಾಯಿತು. ನಗರದ ಜಿಲ್ಲಾಕ್ರೀಡಾಂಗಣದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಲಬುರ್ಗಿ ಹಾಗೂ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಇವರ ಸಹಯೋಗದಲ್ಲಿ ಹಮ್ಮಿಕೊಂಡ ಕಲಬುರ್ಗಿ ಮಟ್ಟದಷಟಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳೆಯರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚೇರ್ಮನ್ ಸಂಜಯ್ ಕೊತಬಾಳ್ ಮಾತನಾಡುತ್ತಆಟದಲ್ಲಿ ಸೋಲು ಗೆಲುವು ಸಹಜಆದರೆಕ್ರೀಡೆಯಲ್ಲಿ ಭಾಗವಹಿಸಿದ ಸಂತೋಷ ನಮಗಿರಬೇಕು . ನಮ್ಮ ಮಹಾವಿದ್ಯಾಲಯಇಂತಹಕ್ರೀಡಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ. ತಾವೇಲ್ಲರುಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಅಧ್ಯಯನದಜೊತೆಗೆಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ನಮ್ಮದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಡಗೊಳಿಸುತ್ತವೆ ರಾಜೀವ್‌ಗಾಂಧಿಆರೋಗ್ಯ ವಿಶ್ವವಿದ್ಯಾಲಯ ಕೇವಲ ವೈದ್ಯಕೀಯ ಚಡುವಟಿಕೆಗಳಗೆ ಅಲ್ಲದೆಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತೋಷತಂದಿದೆಎಂದು ವಿಶ್ಲೇಷಿಸಿದರು .ತಾವೆಲ್ಲರೂಅಭ್ಯಾಸದಜೊತೆಗೆಕ್ರೀಡೆಯಲ್ಲೂ ಭಾಗವಹಿಸುವ ಭಾವನೆ ಬೇಳೆಸಿಕೊಳ್ಳಬೇಕು .ಕ್ರೀಡೆಯಿಂದದೇಹ ಮತ್ತು ಮನಸಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯಎಂದರು.
ಕಾರ್ಯಕ್ರಮದಲಿ ಭಾಗವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯರಾದಡಾ ಎಂ ಎಂ ಸಾಲಿಮಠ ಮಾತನಾಡುತ್ತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡೆಯಿಂದಎಲ್ಲತೆರನಾದದೈಹಿಕ ಮಾನಸಿಕ ಸದೃಡತೆಯಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದುಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿದರು.
ರಾಜೀವ್‌ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿ ವಿಭಾಗದ ನಿಯೋಜಿತ ಸಂಯೋಜಕರಾದ ಹನುಮಂತ ಪವಾರ ಮಾತನಾಡಿಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಪುರುಷರ ವಿಭಾಗದಲ್ಲಿ – ನವೋದಯ ಮೆಡಿಕಲ್‌ಕಾಲೇಜ್‌ರಾಯಚೂರು ಪ್ರಥಮಸ್ಥಾನ ,ಶ್ರೀ ನಿಜಲಿಂಗಪ್ಪ ಮೆಡಿಕಲ್‌ಕಾಲೇಜು ಬಾಗಲಕೋಟೆ ದ್ವಿತೀಯ ಸ್ಥಾನ ,ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯತೃತೀಯ ಸ್ಥಾನ ಅಲ್‌ಅಮಿನ್ ಮೆಡಿಕಲ್‌ಕಾಲೇಜ್ ವಿಜಯಪುರ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ -ಶ್ರೀ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ , ಪ್ರಥಮಸ್ಥಾನ , ಕೊಪ್ಪಳ ವೈದಕೀಯ ಮಹಾವಿದ್ಯಾಲಯ ದ್ವಿತಿಯಸ್ಥಾನ ಶ್ರೀ ವಿಜಯಾಮಹಾಂತೇಶ್‌ಆಯುರ್ವೇದ ಮಹಾವಿದ್ಯಾಲಯ, ಇಳಕಲ್ ತೃತೀಯ ಸ್ಥಾನ , ಶ್ರೀಮತಿ ಶಾಂತಾದೇವಿ ಆಯುರ್ವೇದ ಮಹಾವಿದ್ಯಾಲಯ ಬಾಗಲಕೋಟೆ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತಾರೆ
ಒಟ್ಟು ೨೧ ಪುರುಷರ ಹಾಗೂ ೯ ಮಹಿಳೆಯರ ತಂಡಗಳು ಭಾಗವಹಿಸಿದ್ದರು ಕ್ರೀಡಾತರಬೇತುದಾರರಾದಡಾಜಗದೀಶ್ ,ಡಾ ವಿಜಯಕುಮಾರ್ ಹಿರೇಮಠ್, ಚಂದ್ರಕಾಂತ್ , ಈಶಪ್ಪದೊಡ್ಡಮನಿ ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಈ ೨ ದಿನಗಳ ಕ್ರೀಡಾಕೂಟದಲ್ಲಿಅತ್ಯಂತಉತ್ಸಾಹದಿಂದ ಪಾಲ್ಗೊಂಡಿದ್ದರು.
Comments are closed.