6 ದಿನಗಳ ಕಾಲ ನಡೆದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ – 2024 ರ ಫಲಶೃತಿ
ತೋಟಗಾರಿಕೆ ಅಭಿಯಾನ-2024 ರಲ್ಲಿ 10 ಲಕ್ಷಕ್ಕೂ ಹೆಚ್ಚಿನ ಮೊತ್ತದ ವಿದೇಶ ಸಸಿಗಳ ಖರೀದಿಗೆ ರೈತರು ಮುಂಗಡವಾಗಿ ನೊಂದಾಯಿಸಿರುತ್ತಾರೆ ಹಾಗೂ 20 ಲಕ್ಷಕ್ಕೂ ಹೆಚ್ಚಿನ ಮೊತ್ತದ ಮಾವು, ಪೇರಲ, ತೆಂಗು, ನುಗ್ಗೆ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಿಸಿದ ತರಕಾರಿ ಸಸಿಗಳು, ಹೂವಿನ, ಅಲಂಕಾರಿಕ ಸಸಿಗಳು, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಎರೆಜಲ ಹಾಗೂ ವಿವಿಧ ಪರಿಕರಗಳನ್ನು ಖರೀದಿಸಲು ರೈತರು ಹಾಗೂ ಸಾರ್ವಜನಿಕರು ಬೇಡಿಕೆಯನ್ನು ಸಲ್ಲಿಸಿರುತ್ತಾರೆ. 30 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ಮಾಡುವ ಮೂಲಕ ಸಸ್ಯಸಂತೆಯು ಮುಕ್ತಾಯವಾಗಿರುತ್ತದೆ.
ಈ ಕಾರ್ಯಕ್ರಮದ ಫಲಶೃತಿ:
ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2024 ಕಾರ್ಯಕ್ರಮವನ್ನು ವಿದೇಶಿ ಹಣ್ಣುಗಳ ಸಸಿಗಳ ಪರಿಚಯ ಮಾಡುವ ಮೂಲಕ ಉದ್ಘಾಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹೊರ ಜಿಲ್ಲೆಯ ಹಾಗೂ ಸ್ಥಳೀಯ ರೈತರು ಭಾಗವಹಿಸಿ 64 ಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ ಸಸಿಗಳನ್ನು ಪರಿಚಯ ಮಾಡಿಕೊಂಡು ತಾವು ಸಹ ತಮ್ಮ ತೋಟದಲ್ಲಿ ಬೆಳೆಯುವ ಬಗ್ಗೆ ಆಸಕ್ತಿ ತೋರಿದರು. ಈ ಕಾರ್ಯಕ್ರಮದಲ್ಲಿ ವಿದೇಶಿ ಸಸಿಗಳಲ್ಲಿ ಮುಖ್ಯವಾಗಿ ಮಿಯಾಜಾಕಿ ಮಾವಿನ ಸಸಿಗೆ ಸಾಕಷ್ಟು ಬೇಡಿಕೆ ಬಂದು ಜನರು ತಮ್ಮ ತೋಟದಲ್ಲಿ ಹಾಗೂ ಮನೆಯ ಹತ್ತಿರ ಬೆಳೆಯಲು 4000 ಕ್ಕೂ ಹೆಚ್ಚಿನ ಗಿಡಗಳನ್ನು ಖರೀದಿಸಲು ತಮ್ಮ ಹೆಸರು ನೋಂದಾಯಿಸಿದರು. ಹಾಗೂ ಈ 2000 ಕ್ಕೂ ಹೆಚ್ಚಿನ ಅವಕಾಡೋ ಹಣ್ಣಿನ ಗಿಡಗಳನ್ನು ಖರೀದಿಸಲು ತಮ್ಮ ಹೆಸರು ನೊಂದಾಯಿಸಿದರು. ಈ ಮೇಳದಲ್ಲಿ ಮೆಕಡೋಮಿಯಾ, ಮ್ಯಾಂಗೋಸ್ಟಿನ್, ಲಿಚ್ಚಿ, ವಿದೇಶಿ ಹಲಸು, ಚರಿ ಮುಂತಾದ ವಿದೇಶಿ ಹಣ್ಣಿನ ತಳಿಗಳ ಸಸಿಗಳು ಸೇರಿ 10 ಸಾವಿರಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ 10.00 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಸಿಗಳನ್ನು ತಮ್ಮ ತೋಟ ಮನೆಯ ಮುಂದೆ ನಾಟಿ ಮಾಡಲು ರೈತರು ಹಾಗೂ ಸಾರ್ವಜನಿಕರು ಸಸಿಗಳನ್ನು ಖರೀದಿಸಲು ನೊಂದಾಯಿಸಿರುತ್ತಾರೆ.
ಇಲಾಖಾ ಸಸ್ವಾಗಾರದಲ್ಲಿ ಉತ್ಪಾದಿಸಿದ ಹಣ್ಣು, – ಹಣ್ಣು ಸಸಿಗಳಾದ ಮಾವು (ಕೇಸರ್) 15000, ಲಿಂಬೆ 4000, 30% 5000, 220 25-49 3000, $ 2 1000, ៨៦ ដល់ 8000. 2 9000, ಕರಿಬೇವು 1000, ಡಾಗ್ ರಿಡ್ಜ್ 2000, ಆಲಂಕಾರಿಕ ಸಸಿಗಳಾದ ಗುಲಾಬಿ 5000, ರಾಯಲ್ ಪಾಮ್ 1500, 600. 700, ໖ 250, 800, ដ 2500, 0 700, 800, ৩৯ 400, ໖໐ ໘ 2500 700, 2 ಮತ್ತು ಇತರೇ ಸಸಿಗಳು 3200 ಒಟ್ಟಾರೆ 230000 ಸಸಿಗಳು ಮಾರಾಟವಾಗಿರುತ್ತವೆ. ಹಾಗೂ ಮಾವು ಕೇಸರ್, ಹೈಬ್ರಿಡ್ ಲಿಂಬೆ, ಪೇರಲ ಎಲ್ 49 ಮತ್ತು ತೈವಾನ್ ಪಿಂಕ್ ಮತ್ತು ಅರ್ಕಾ ಕಿರಣ್, ನುಗ್ಗೆ, ತೆಂಗು ಅರಸೀಕೆರೆ ಟಾಲ್ ಮತ್ತು ಹೈಬ್ರಿಡ್ ತಳಿಗಳು, ತರಕಾರಿ ಸಸಿಗಳಾದ ಮೆಣಸಿನಕಾಯಿ, ಟೊಮ್ಯಾಟೋ, ಬದನೆ ಕ್ಯಾಪ್ಟಿಕಮ್, ಹೂ ಕೋಸು ಎಲೆಕೋಸು, ಹೂ ಸಸಿಗಳಾದ ಚೆಂಡು ಹೂ, ಸೇವಂತಿಗೆ ಬೇಡಿಕೆ ಬಂದಿರುತ್ತವೆ. ಇವುಗಳಲ್ಲದೇ ಅಲಂಕಾರಿಕ ಸಸಿಗಳಾದ ದಾಸವಾಳ ಹೈಬ್ರಿಡ್, ಡೈಸಿನಾ ರೆಡ್, ಫೈಕಸ್ ಸ್ಟಾರ್ ಲೈಟ್, ದೇವಕಣಗಿಲೆ, ನಂದಿಬಟ್ಟಲು. ಮಿನಿಕ್ರೋಟಾನ್ಸ್, ಕಲ್ಯಾಂಚೊ. ಅರೆಲಿಯಾ, ಮನಿಪ್ಲಾಂಟ್, ಸಿಂಗೋನಿಯಾ, ಪಾರಿಜಾತಾ, ಟಿಕೊಮಾ, ಒಕ್ಕೋರಾ, ಬೆಟ್ಟದ ನೆಲ್ಲಿ ಹಾಗೂ ಔಷಧಿ ಸಸ್ಯಗಳಾದ ಇನ್ಸೂಲಿನ್, ಚಕ್ರಮುನಿ, ಆಲಗ್ರೆಸ್, ರೋಜ್ ಮೇರಿ, ಸಸಿಗಳ ಬೇಡಿಕೆ ಇದ್ದು ಒಟ್ಟು 4.50 ಲಕ್ಷ ಸಸಿಗಳ ಮುಂಗಡ ಬೇಡಿಕೆ ಕೊಪ್ಪಳ ಮತ್ತು ಇತರೆ ಜಿಲ್ಲೆಗಳ ರೈತರಿಂದ ಪಡೆಯಲಾಗಿರುತ್ತದೆ, ಹಾಗೂ ಎರೆಹುಳು ಗೊಬ್ಬರ 10 . 2ພ 3000 ಲೀ. ಮತ್ತು ಬೇವಿನ ಪುಡಿ 4000 ಕೆ.ಜಿ. ಮಾರಾಟ ಮಾಡಲಾಯಿತು. ಹಾಗೂ 500 ಕೆ.ಜಿ. ಜೈವಿಕ ಪರಿಕರ ಮಾರಾಟ ಮಾಡಲಾಯಿತು
ಸದರಿ ಕಾರ್ಯಕ್ರಮದಲ್ಲಿ ಈ ಕೆಳಗಿನ ಪ್ರಾತ್ಯಕ್ಷಿಕೆಗಳನ್ನು ಸಾವಿರಾರು ರೈತರು ವೀಕ್ಷಿಸಿ ಮಾಹಿತಿ ಪಡೆದಿರುತ್ತಾರೆ.
> ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ
> “ರೈತ ಸಮಗ್ರ ಕೃಷಿ ಚೇತನ” ಪ್ರಾತ್ಯಕ್ಷಿಕೆಯಲ್ಲಿ ಇಸ್ರೇಲ್ ಮಾದರಿ ಮತ್ತು ಸಮಗ್ರ ಕೃಷಿ ಅಭಿವೃದ್ಧಿ ಪಡಿಸಿದ ನಿಡಶೇಷಿ ತೋಟಗಾರಿಕೆ ಕ್ಷೇತ್ರದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಹನಿ ನೀರಾವರಿ ಮತ್ತು ರಸಾವರಿ ಪದ್ಧತಿ, ಮೀನುಗಾರಿಕೆ, ಹೈನುಗಾರಿಕೆ, ಕುರಿ ಸಾಗಾಣಿಕೆ, ಜೇನು ಸಾಕಾಣಿಕೆ, ಮಳೆ ನೀರು ಕೊಯ್ದು, ಮಾದರಿ, ಎರೆಹುಳು ಮತ್ತು ಎರೆಜಲ ಉತ್ಪಾದನಾ ಘಟಕ
> ಮಾದರಿ ಕೈತೋಟ, ತಾರಸಿ ತೋಟಿ, ವರ್ಟಿಕಲ್ ಗಾರ್ಡನ್ ಮತ್ತು ಹೈಡೋಫೋನಿಕ್ಸ್ ಪ್ರಾತ್ಯಕ್ಷಿಕೆಗಳನ್ನು ಮಾಡಲಾಯಿತು.
> ಆಲಂಕಾರಿಕ ಸಸಿಗಳ, ಬೋನ್ಸಾಯ್, ಇಂಡೋರ್ ಸಸಿಗಳ, ಕ್ಯಾಕ್ಟಸ್ ಮತ್ತು ಸೆಕ್ಯುಲೆಂಟ್ಸ್ ಸಸಿಗಳ ವಿವಿದ ವಿನ್ಯಾಸಗಳ ಜೋಡಣೆಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ರೈತರಿಗೆ ಭೂದೃಶ್ಯ (ಲಾನ್) ಹಾಸು ಹುಲ್ಲಿನ ಬಗ್ಗೆ (ಬರ್ಮೊಡಾ) ಮಾಹಿತಿ ನೀಡಲಾಯಿತು.
ನಿರ್ಮಿಸಿದರ ಬಗ್ಗೆ ಮತ್ತು ವಿವಿಧ > ವಿವಿಧ ಮಾದರಿಯ ಮನೆಯಲ್ಲಿಯ ದೊರೆಯುವ ಅನುಪಯುಕ್ತ ಪ್ಲಾಸ್ಟಿಕ್, ರಬ್ಬರ್, ಕಬ್ಬಿಣ ಹಾಗೂ ಇತರೇ ವಸ್ತುಗಳಿಂದ ತಯಾರಿಸಿದ ಕುಂಡಲಗಳಲ್ಲಿ ಆಲಂಕಾರಿಕ ಮತ್ತು ತರಕಾರಿ ಸಸ್ಯಗಳನ್ನು ಬೆಳೆಯುವ ವಿಧಾನವನ್ನು ಪ್ರದರ್ಶಿಸಲಾಯಿತು. ಇದರಿಂದ ಅನೇಕ ಜನ ಮೆಚ್ಚುಗೆ ವ್ಯಕ್ತಪಡಿಸಿದರು.
> ರೈತರಿಗೆ ತಾಳೆಬೆಳೆ ಬೆಳೆಯುವ ಕುರಿತು ಮೆಗಾಡ್ರೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 200 ಕ್ಕೂ ಹೆಚ್ಚಿನ ರೈತರು ತಾಳೆಬೆಳೆ ಬೆಳೆಯುವ ಬಗ್ಗೆ ಆಸಕ್ತಿ ತೋರಿ ತಮ್ಮ ಹೆಸರು ನೊಂದಾಯಿಸಿರುತ್ತಾರೆ.
> ರೈತರಿಗಾಗಿ ಗಿಣಗೇರಾ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯದ ವತಿಯಿಂದ ರೈತರಿಗೆ ಮಣ್ಣು ಮತ್ತು ನೀರು ಪರೀಕ್ಷೆ ಕುರಿತು ಮಾಹಿತಿ ನೀಡಲಾಯಿತು.
> ರೈತರಿಗೆ ಅನುಕೂಲವಾಗಲು ವಿವಿಧ ಸಂಸ್ಥೆಗಳಿಂದ ಮಳಿಗೆಗಳನ್ನು ಆಯೋಜಿಸಲಾಗಿದ್ದು, ಅವುಗಳಲ್ಲಿ ವಿವಿಧ ಬ್ಯಾಂಕ್ ಗಳಿಂದ ಆಗಮಿಸಿದ ಅಧಿಕಾರಿಗಳು ಸಾಲ ಸೌಲಭ್ಯಗಳ ಕುರಿತು 3000 ರೈತರಿಗೆ ಸಲಹೆ
ನೀಡಿರುತ್ತಾರೆ.
ವಿಮಾ ಕಂಪನಿ ಅಧಿಕಾರಿಗಳು ಬೆಳೆ ವಿಮೆ ಬಗ್ಗೆ 3400 ರೈತರಿಗೆ ಮಾಹಿತಿ ನೀಡಲಾಯಿತು. ಅಭಿನವಶ್ರೀ ರೈತ ಉತ್ಪಾದಕ ಕಂಪನಿ, ಕೊಪ್ಪಳ ರವರಿಂದ ಕಂಪನಿಯಲ್ಲಿ ರಿಯಾಯಿತಿ ದರದಲ್ಲಿ ಸಿಗುವ ಪರಕರಗಳ ಕುರಿತು 3200 ರೈತರಿಗೆ ಮಾಹಿತಿ ನೀಡಲಾಯಿತು. ಫ್ಲೋರೆಜಿನ್ ಆರ್ಗ್ಯಾನಿಕ್ಸ್ ರವರಿಂದ ಹಲಸು ಬೆಳೆಯ ಬಗ್ಗೆ 2500 ರೈತರಿಗೆ ಸಾವಯವ ಕೃಷಿಯಲ್ಲಿ ಪದ್ಧತಿ
ಮತ್ತು ದೃಢೀಕರಣ ಪಡೆಯುವ ಬಗ್ಗೆ ಮಾಹಿತಿ ನೀಡಲಾಯಿತು. > ಕಾರ್ಬನ್ ಕ್ರೆಡಿಟ್ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
> ಹನಿ ನೀರಾವರಿ ಕಂಪನಿಗಳಾದ ಬಿ.ಎನ್.ಎಸ್. ಇರಿಗೇಷನ್, ಕೆ.ಬಿ. ಇರಿಗೇಷನ್ ರವರು ಒಟ್ಟು 1000
ರೈತರ ಹನಿ ನೀರಾವರಿ ಅಳವಡಿಸಲು ಮನವರಿಕೆ ಮಾಡಿ ರೈತರಿಂದ ಅರ್ಜಿಗಳನ್ನು ಪಡೆಯಲಾಯಿತು. > ಹೊಸದಾಗಿ ತೋಟಗಾರಿಕೆ ಮಾಡುವ 3000 ರೈತರಿಗೆ ಇಲಾಖೆಯ ಅಧಿಕಾರಿಗಳು ಯೋಜನೆಗಳ ಕುರಿತು ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಲಾಯಿತು.
ಇಲಾಖೆಯ ಯೋಜನೆಗಳು ಹಾಗೂ ವಿವಿಧ ವಿದೇಶಿ ಹಣ್ಣಿನ ಬೆಳೆಗಳ ಬೇಸಾಯ ಕ್ರಮಗಳ ತಾಂತ್ರಿಕ ಮಾಹಿತಿ ಬಗ್ಗೆ ಅಲ್ಲದೇ ರೈತರು ನಿರಂತರವಾಗಿ ಕೃಷಿಯಲ್ಲಿ ಆದಾಯ ಪಡೆಯುವುದರ ಬಗ್ಗೆ ಮತ್ತು ತಮ್ಮ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ 100 ಕ್ಕೂ ಹೆಚ್ಚಿನ ಫೋಕ್ಸ್ ಗಳನ್ನು ಅಳವಡಿಸಿ ಮಾಹಿತಿ ನೀಡಲಾಯಿತು.
ತೋಟಗಾರಿಕೆಯಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಇಂದಿನ ಅವಶ್ಯಕವಾಗಿದ್ದು, ರೈತರ ಆದಾಯ ದ್ವಿಗುಣಗೊಳಿಸಲು “ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ” ಕುರಿತು ರೈತತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಒಟ್ಟಾರೆ 6 ದಿನಗಳ ಕಾಲ ನಡೆದ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನವು ಅಂದಾಜು 8000 ಕ್ಕೂ ಹೆಚ್ಚಿನ ಸ್ಥಳೀಯ ಹಾಗೂ ಹೊರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾಹಿತಿಯನ್ನು ಪಡೆದಿರುತ್ತಾರೆ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ
Comments are closed.