ಸಾರ್ವಜನಿಕ ಗ್ರಂಥಾಲಯಗಳು ಶ್ರೀ ಸಾಮಾನ್ಯನ ವಿಶ್ವವಿದ್ಯಾಲಗಳು

Get real time updates directly on you device, subscribe now.

ಗ್ರಂಥಪಾಲಕರ ದಿನಾಚರಣೆ
ಕೊಪ್ಪಳ ನಗರದ ಎನ್.ಜಿ.ಓ ಕಾಲೋನಿಯಲ್ಲಿರುವ ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿ ಡಾ.ಬಿ.ಆರ್.ಅಂಬೇಡ್ಕರ್ ರೀಡಿಂಗ್ ಸೆಂಟರನಲ್ಲಿ ಸೋಮವಾರದಂದು ಸರಳವಾಗಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತೀಯ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ಅವರು ಮಾತನಾಡಿ, ಭಾರತೀಯ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ ಎಸ್.ಆರ್.ರಂಗನಾಥನ್ ಅವರ ಜನ್ಮದಿನವನ್ನೇ ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಪಂಚಸೂತ್ರಗಳು, ದ್ವಿಬಿಂದು ವರ್ಗೀಕರಣ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆ ಪರಗಣಿಸಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ. ಆಗಸ್ಟ್ 12.1892 ರಲ್ಲಿ ಜನಿಸಿದ ಇವರು ಸೆಪ್ಟಂಬರ್ 27. 1972 ರಲ್ಲಿ ಕೊನೆಯುಸಿರೆಳೆದರು. ಸಾರ್ವಜನಿಕ ಗ್ರಂಥಾಲಯಗಳು ಶ್ರೀ ಸಾಮಾನ್ಯನ ವಿಶ್ವವಿದ್ಯಾಲಯಗಳು. ಸಾರ್ವಜನಿಕಗ್ರಂಥಾಲಯ ಇಲಾಖೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ, ಭಾರತ ಸಿಂಧು ರಶ್ಮಿ, ಮೂಕಜ್ಜಿಯ ಕನಸುಗಳು ಮುಂತಾದ ಅನೇಕ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಮುಖ್ಯಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ನರಸಿಂಹಮೂರ್ತಿ, ಉಮಾ ಹಳ್ಯಾಳ, ಕೊಟ್ರಪ್ಪ ಬಿ, ವಿಜಯಲಕ್ಷ್ಮೀ ವಡ್ಡಟ್ಟಿ, ಕಾಶಿಬಾಯಿ, ಶರಣಪ್ಪ ವಡಿಗೇರಿ ಹಾಜರಿದ್ದರು. ನಾಗರಾಜನಾಯಕ ಡೊಳ್ಳಿನ ಕಾರ್ಯಕ್ರಮ ನಿರ್ವಹಿಸಿದರು.
ಗಣೇಶ ನಗರ ಶಾಖೆಯಲ್ಲಿ ಸಿಬ್ಬಂದಿ ವಿಜಯಲಕ್ಷ್ಮೀ ವಡ್ಡಟ್ಟಿ, ಕುಷ್ಟಗಿ ಶಾಖೆಯಲ್ಲಿ ಸಿಬ್ಬಂದಿ ಕಾಶಿಬಾಯಿ, ಶರಣಪ್ಪ ವಡಿಗೇರಿ ಹಾಗೂ  ವಿವಿಧ ಶಾಖಾ ಗ್ರಂಥಾಲಯದಲ್ಲಿ ಓದುಗರೊಂದಿಗೆ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

 

koppal_libraray_nagaraj_dollin

Get real time updates directly on you device, subscribe now.

Comments are closed.

error: Content is protected !!
%d bloggers like this: