ರೈತರ ಹಿತಕ್ಕಾಗಿ ಸರ್ವರ ಸಭೆ ಕರೆಯಿರಿ : ಸಿವಿಸಿ

Get real time updates directly on you device, subscribe now.

Koppal ಈ ಭಾಗದ ಜೀವನದಿ ತುಂಗಭದ್ರಗೆ ಕಟ್ಟಿರುವ ಆಣೆಕಟ್ಟಿನ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿರುವ ಘಟನೆ ದುರದೃಷ್ಟಕರ. ಈ ಘಟನೆಯನ್ನು ತಡೆಯಬಹುದಿತ್ತು. ಈ ಹಿಂದೆ ಇದೇ ರೀತಿಯ ಘಟನೆಯಿಂದ ಪಾಠ ಕಲಿಯದೆ ಇರುವುದು ಆಕ್ಷೇಪಾರ್ಹ ಎಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ  ಸಿವಿ ಚಂದ್ರಶೇಖರ್ ಅವರು ಹೇಳಿದ್ದಾರೆ.‌ ಅವರು ಅಣೆಕಟ್ಟೆಗೆ ಭೇಟಿ ನೀಡಿ ಮಾತನಾಡಿದರು.
ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷತೆ ಈ ದುರಂತದಲ್ಲಿ ಎದ್ದು ಕಾಣುತ್ತಿದೆ. ಆದರೆ ಇದು ಆರೋಪ ಮಾಡುವ ಸಂದರ್ಭ ಅಲ್ಲ. ಈ ಕೂಡಲೇ ಈ ಭಾಗದ ರೈತರು, ವಿವಿಧ ಸಂಘಟನೆಗಳು, ಎಲ್ಲಾ ಪಕ್ಷಗಳ ಮುಖಂಡರ ಸಭೆಯನ್ನು ಕರೆದು ರೈತರ ಹಾಗೂ ಬೆಳೆಗಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಿರುವ ಕ್ರಮಗಳನ್ನು ಅಂತಿಮಗೊಳಿಸಬೇಕು. ಮುಂದಿನ ದಿನಗಳಲ್ಲಿ ನೀರಿಲ್ಲದೆ ರೈತರಿಗೆ ನಷ್ಟವಾಗುವಂತಿದ್ದರೆ ಅದಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮರೋಪಾದಿಯಲ್ಲಿ ಕ್ರಸ್ಟ್ ಗೇಟ್ ಅಳವಡಿಸಬೇಕು. ನೆನೆಗುದಿಗೆ ಬಿದ್ದಿರುವ ನವಲಿ ಸಮಾನಾಂತರ ಜಲಾಶಯದ ನಿರ್ಮಾಣದ ಭೂಮಿ ಪೂಜೆ ಕೆಲವೇ ದಿನಗಳಲ್ಲಿ ನಡೆಯಬೇಕು. ತಮ್ಮ ಕ್ಷೇತ್ರದಲ್ಲಿ ಈ ಯೋಜನೆಗಳು ಬರುವುದನ್ನು ಹಾಗೂ ಆಗಿರುವ ದುರಂತವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಸಚಿವರು ವರ್ಗಾವಣೆ ದಂಧೆಯನ್ನು ಕೈ ಬಿಟ್ಟು ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸಹಕರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಜಿಲ್ಲೆಯಲ್ಲಿ ಬಹುತೇಕ ಎಲ್ಲರೂ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಕೊಪ್ಪಳ ಜಿಲ್ಲೆಯವರೇ. ಇವರೆಲ್ಲರೂ ಸರಕಾರದ ಮೇಲೆ ಒತ್ತಡ ತರಲಿ. ಹಾಗೂ ತಮ್ಮ ಬದ್ಧತೆಯನ್ನು ಪ್ರದರ್ಶಿಸಿ ಈ ಭಾಗದ ಹಿತ ಕಾಯಲಿ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ  ಈಶಪ್ಪ ಮಾದಿನೂರ, ಮಲ್ಲನಗೌಡ್ರ ಕೋನನಗೌಡ್ರ, ವಿರೇಶಗೌಡ ಚಿಕ್ಕಬಗನಾಳ, ಶರಣಪ್ಪ ಜಡಿ, ಮೂರ್ತೆಪ್ಪ ಗಿಣಗೇರಿ, ಯಮನಪ್ಪ ಕಟಿಗಿ, ಮಹಮ್ಮದ್ ಹುಸೇನ್ ಬಲ್ಲೆ, ಶ್ರೀನಿವಾಸ ಪೂಜಾರ, ಮಹೇಶ ಅಗಳಕೇರಾ, ಮಾರ್ಕೆoಡೆಪ್ಪ ಗಿಣಗೇರಿ ಸೇರಿದಂತೆ ಉಭಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: