ತುಂಗಾಭದ್ರ ಅಣೆಕಟ್ಟಿನ 19ನೇ ಗೇಟಿನ ಚೈನ್ ಕಟ್ಟಾಗಿರುವ ದುರ್ಘಟನೆಗೆ ಸರ್ಕಾರದ ನಿರ್ಲಕ್ಷವೇ ಕಾರಣ-AIKKMS

Get real time updates directly on you device, subscribe now.

Koppal  ತುಂಗಾಭದ್ರ ಅಣೆಕಟ್ಟಿನ 19ನೇ ಗೇಟಿನ ಚೈನ್ ಕಟ್ಟಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ರಾಜ್ಯ ಸಮಿತಿಯು, ಈ ದುರ್ಘಟನೆಗೆ ಕಾರಣವಾದ ನಿರ್ಲಕ್ಷವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ರಾಜ್ಯ ಅಧ್ಯಕ್ಷರಾದ ಕಾ.ಎಂ.ಶಶಿಧರ್ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಬಿ.ಭಗವಾನ್ ರೆಡ್ಡಿಯವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ತುಂಗಾಭದ್ರ ಜಲಾಶಯವು ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಲಕ್ಷಾಂತರ ರೈತರ ಜೀವನಕ್ಕೆ ಅಸರೆಯಾಗಿರುವ ಜಲಾಶಯವಾಗಿದೆ. ಇದರ ನೀರನ್ನು ಒಂದು ಕೃಷಿಗೆ ಬಳಸಿದರೆ ಮತ್ತೊಂದು ಕುಡಿಯುವ ನೀರಿಗೆ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದರಿಂದಾಗಿ ಸಾವಿರಾರು ಜನ ಜೀವನ ಕಟ್ಟಿಕೊಂಡಿದ್ದರು.
ಈಗ ಜಲಾಶಯದ 19ನೇ ಗೇಟಿನ ಚೈನ್ ಕಟ್ಟಾಗಿರುವುದಕ್ಕೆ ಸರ್ಕಾರ ಮತ್ತು ಅಧಿಕಾರಿಗಳ ದಿವ್ಯನಿರ್ಲಕ್ಷವೇ ಕಾರಣವಾಗಿದೆ. ಯಾಕೆಂದರೆ ಪ್ರತಿವರ್ಷ ಜಲಾಶಯಕ್ಕೆ ನೀರು ಬರುವ ಮುಂಚಿತವಾಗಿಯೇ ಅದರ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿ, ಪ್ರತಿಯೊಂದು ಘಟಕವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಏನಾದರೂ ಸಮಸ್ಯೆ ಕಂಡು ಬಂದಲ್ಲಿ ಅದನ್ನು ಸರಿಪಡಿಸಲು ಗಂಭೀರವಾದ ಪ್ರಯತ್ನಗಳು ಆಗಿದ್ದಲ್ಲಿ, ಈ ರೀತಿಯ ದುರ್ಘಟನೆಗಳು ಸಂಭವಿಸುತ್ತಿರಲಿಲ್ಲ, ಆದರೆ ಇದಕ್ಕೆ ಬೇಕಾಗಿರುವ ಯಾವುದೇ ರೀತಿಯ ಪರೀಕ್ಷೆಗಳು ನಡೆದಿದ್ದವೇ ಎಂಬುದು ಈಗ ಸಂಶಯವಾದ ವಿಷಯವಾಗಿದೆ. ಈ ದುರ್ಘಟನೆಯಿಂದ ಸಂಭವಿಸಬಹುದಾದ ಪ್ರಾಣ ಹಾನಿಯಾಗಲಿ, ಬೆಳೆ ನಷ್ಟ ಸೇರಿದಂತೆ ಇತರೆ ಎಲ್ಲಾ ರೀತಿಯ ಅನಾಹುತಗಳನ್ನು ಸರ್ಕಾರವೇ ಜವಾಬ್ದಾರಿ ಎಂದು ಭಾವಿಸಿ, ಅದರ ಸಂಪೂರ್ಣ ನಷ್ಟವನ್ನು ಭರಿಸಬೇಕು, ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ದರಾಗಬೇಕಾಗುತ್ತದೆ. ಜೊತೆಗೆ ಆದಷ್ಟು ಬೇಗ ಜಲಾಶಯದ ನೀರು ವ್ಯರ್ಥವಾಗಿ ನದಿ ಪಾಲಾಗದಂತೆ ಎಚ್ಚರವಹಿಸಿ, ಕಟ್ಟಾಗಿರುವ ಚೈನ್ ಅನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!