ಸ್ಕೌಟ್ ಮಾಸ್ಟರ್ ಗೈಡ್ಸ್ ಕ್ಯಾಪ್ಟನ್‌ಗಳ ಮೂಲ ತರಬೇತಿ ಶಿಬಿರಕ್ಕೆ ಚಾಲನೆ
ಜಿಲ್ಲಾಮಟ್ಟದ
—-
ಕೊಪ್ಪಳ, : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆ ವತಿಯಿಂದ ತಾಲ್ಲೂಕಿನ ಗುನ್ನಳ್ಳಿಯ ಜಿಲ್ಲಾ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಜುಲೈ 30ರಿಂದ ಆಗಸ್ಟ್ 05ರ ವರೆಗೆ ಕೊಪ್ಪಳ ಜಿಲ್ಲಾಮಟ್ಟದ ಸ್ಕೌಟ್ ಮಾಸ್ಟರ್ ಗೈಡ್ಸ್ ಕ್ಯಾಪ್ಟನ್‌ಗಳ ಮೂಲ ತರಬೇತಿ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಕೊಪ್ಪಳ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಟಿ.ಶಂಕರಯ್ಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಜಿಲ್ಲಾ ತರಬೇತಿ ಆಯುಕ್ತರು ಹಾಗೂ ಶಿಬಿರದ ನಾಯಕರಾದ ಶ್ರೀಕಾಂತ್ ಮಾಸಗಟ್ಟಿ ಅವರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾ ಮುಖ್ಯ ಆಯುಕ್ತರಾದ ಎಚ್.ಎಂ ಸಿದ್ದರಾಮ ಸ್ವಾಮಿ ಅವರು, ಎಲ್ಲ ಶಿಬಿರಾರ್ಥಿಗಳಿಗೆ ಶುಭ ಕೋರಿ ಶಾಲೆಯಲ್ಲಿ ಕಡ್ಡಾಯವಾಗಿ ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ತೆರೆದು ರಾಜ್ಯ ರಾಷ್ಟ್ರಮಟ್ಟದ ಶಿಬಿರಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ, ಚಳುವಳಿ ಬೆಳೆಸುವಲ್ಲಿ ಮುಖ್ಯ ಪಾತ್ರರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಜಿಲ್ಲಾ ಆಯುಕ್ತರಾದ ಮಲ್ಲಿಕಾರ್ಜುನ್ ಚೌಕಿಮಠ, ಶಿಕ್ಷಣ ಇಲಾಖೆಯ ಪಂಪಾಪತಿ, ಕುಕುನೂರು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅಂದಪ್ಪ ಚನ್ನಳ್ಳಿ, ಕೊಪ್ಪಳ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ, ಗಂಗಾವತಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹುಸೇನಸಾಬ ಮಕಾಂದಾರ, ರಾಜ್ಯ ಸ್ಕೌಟ್ ಪ್ರತಿನಿಧಿ ವೀರನಗೌಡ ಪೊ.ಪಾಟೀಲ್ ಸೇರಿದಂತೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ್ ಅವರು ಸ್ವಾಗತಿಸಿದರು. ಕೊಪ್ಪಳ ಎ.ಎಸ್.ಓ.ಸಿ ಆದ ಎಸ್.ಹೆಚ್.ಹತ್ತಿಮತ್ತೂರ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಸಹಾಯಕ ಬೀರಪ್ಪ ಕಡ್ಲಿಮಟ್ಟಿ ಅವರು ವಂದಿಸಿದರು.
*ಶಿಬಿರದಲ್ಲಿ 85 ಶಿಬಿರಾರ್ಥಿಗಳು:* ಸ್ಕೌಟ್ಸ್ ವಿಭಾಗದಲ್ಲಿ ಶಿಬಿರದ ನಾಯಕರಾಗಿ ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಕಾಂತ್ ಮಾಸಗಟ್ಟಿ, ಸಹಾಯಕ ನಾಯಕರಾಗಿ ಹುಸೇನ್ ಸಾಬ್ ಮಕಾಂದಾರ್, ಹಸನ್ ಸಾಬ್ ರಾಹುತ್, ವೀರನಗೌಡ ಪೊಲೀಸ್ ಪಾಟೀಲ್, ಬೀರಪ್ಪ ಕಡ್ಲಿಮಟ್ಟಿ, ಮಲ್ಲಪ್ಪ ಗುಡದಣ್ಣವರ್, ಅನ್ನಪೂರ್ಣ, ಬಸವಣ್ಣಮ್ಮ ಮೆಟಗುಡ್ಡ, ಚತ್ರಪ್ಪ ತಂಬೂರಿ ಅವರು ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಿಬಿರದಲ್ಲಿ ಸ್ಕೌಟ್ಸ್ ವಿಭಾಗದಲ್ಲಿ 38, ಗೈಡ್ಸ್ ವಿಭಾಗದಲ್ಲಿ 47 ಸೇರಿ ಒಟ್ಟು 85 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.

Comments are closed.