ಜಾಜಿ ಮಲ್ಲಿಗೆ ಕವಿ ಪಾತ್ರೋಟಗೆ ಕಜಾಪ ಸನ್ಮಾನ

Get real time updates directly on you device, subscribe now.


ಕೊಪ್ಪಳ: ಇಲ್ಲಿನ ತಾ. ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪ್ರೇಮ ಕವಿ, ಜಾಜಿಮಲ್ಲಿಗೆ ಖ್ಯಾತಿಯ ಡಾ. ಸತ್ಯಾನಂದ ಪಾತ್ರೋಟ ಅವರನ್ನು ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳ ಸಂಕೋಲೆಯಲ್ಲಿಯೇ ದಲಿತರಿಗೆ ಒಂದು ಆಶಾಜ್ಯೋತಿಯಂತೆ ಕಂಡವರು, ನಿಂತರ ಪರಿಶ್ರಮ ಮತ್ತು ಸಾಧನೆ ಮೂಲಕ ಶಿಕ್ಷಣ ಮತ್ತು ಸಾಹಿತ್ಯದಲ್ಲೂ ಉತ್ತಮ ಮನ್ನಣೆ ಪಡೆಯಬಹುದು ಎಂಬುದನ್ನು ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ.
ಪಾತ್ರೋಟ ಅವರ ಆತ್ಮಕಥನ “ಜಾಲಿಮರದಲ್ಲೊಂದು ಜಾಜಿಮಲ್ಲಿಗೆ” ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ ಅವರ ನೇತೃತ್ವದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಾನಪದ ಅಕಾಡಮಿ ಸದಸ್ಯ ಮೆಹಬೂಬ ಕಿಲ್ಲೇದಾರ್, ಪತ್ರಕರ್ತ ಕವಿ ಸಿರಾಜ್ ಬಿಸರಳ್ಳಿ, ಪ್ರಭುರಾಜ ಜಾಹಗೀರದಾರ್, ಮಾಲಾ ಬಡಿಗೇರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!