ಮೂರು ದಿನಗಳ ತರಬೇತಿ ಕಾರ್ಯಾಗಾರ

Get real time updates directly on you device, subscribe now.

ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಬಿ .ಎಸ್. ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯೋಜನಾ ವರದ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮ ಈಚೆಗೆ ನಡೆಯಿತು.
ಸಮೀಪದ ದದೇಗಲ್‌ನ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿನ ಸಿಎನ್‌ಸಿ ವರ್ಕ್ ಶಾಪ್,  ಮೆಕ್ಯಾಟ್ರೋನಿಕ್ಸ್, ಪಿ ಎಲ್ ಸಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್,, ರೋಬೋಟಿಕ್ಸ್, ಲ್ಯಾಬ್, ಮೆಟೀರಿಯಲ್ ಟೆಸ್ಟಿಂಗ್ ಲ್ಯಾಬ್, ಹೈಡ್ರಾಲಿಕ್ಸ್ ಮತ್ತು ನ್ಯೂ ಮ್ಯಾಟಿಕ್  ಲ್ಯಾಬ್‌ಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ, ಅಲ್ಲಿನ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಮಾಹಿತಿ ಪಡೆದು, ದತ್ತಾಂಶಗಳನ್ನು ಸಂಗ್ರಹಿಸಿದರು.
ವಿದ್ಯಾರ್ಥಿಗಳು ಮತ್ತು ಭೌತಶಾಸ್ತ್ರ ವಿಭಾಗದ ಸಿಬ್ಬಂದಿ ಜಿಟಿಟಿಸಿ ಬಗ್ಗೆ ಉತ್ತಮವಾದ ಕಟ್ಟಡ, ಪ್ರಯೋಗಾಲಗಳು, ಹಾಗೂ ಅಲ್ಲಿನ ಎಲ್ಲಾ ಸಿಬ್ಬಂದಿ ವರ್ಗದವರ ಕಾರ್ಯಕ್ಷಮತೆ ಕುರಿತು ಪ್ರಶಂಸಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ತರಬೇತಿ ಕಾರ್ಯಕ್ರಮ ಆಯೋಜನೆ ಕುರಿತು ಪ್ರಾಂಶುಪಾಲ ಪ್ರೊ.ತಿಮ್ಮಾರಡ್ಡಿ ಮೇಟಿ ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಟಿಟಿಸಿ ಸಿಬ್ಬಂದಿ ಯುನಿಟ್ ಹೆಡ್ ಮೌನೇಶ್ ರಾಥೋಡ್, ಪ್ರಾಂಶುಪಾಲ ಪ್ರಭುರಾಜ್, ಹಿರಿಯ ಇಂಜಿನಿಯರ್ ಅಂಜನಪ್ಪ, ಶೇಕ್ಷವಲಿ, ಶ್ರೀನಿವಾಸ್ ಮತ್ತು ಮುತ್ತಣ್ಣ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸಿದ್ದಲಿಂಗೇಶ ಹಮ್ಮಿಗಿ, ಹಿರಿಯ ಉಪನ್ಯಾಸಕ ರವೀಂದ್ರ ಬಗಾಡೆ, ಪ್ರಭಾಕರ್ ಸಾಲಿಮಠ, ಶ್ರೀಮತಿ ಗಿರಿಜಾ ಮತ್ತು ಬಸಮ್ಮ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!