ಸಣ್ಣ ಊರಿನ ಪತ್ರಕರ್ತರ ಸಮಸ್ಯೆ ಪರಿಹಾರಕ್ಕೆ ಮೊದಲ ಆಧ್ಯತೆ: ಕೆ.ವಿ.ಪ್ರಭಾಕರ್

Get real time updates directly on you device, subscribe now.

*ಮಾಲೂರು ಪತ್ರಕರ್ತರ ಭವನದ ಶಂಕುಸ್ಥಾಪನೆ ನೆರವೇರಿಸಿದ ಕೆವಿಪಿ

ಮಾಲೂರು ಜು 9: ಸಣ್ಣ ಊರಿನ ಪತ್ರಕರ್ತರ ಸಮಸ್ಯೆ ಪರಿಹಾರಕ್ಕೆ ಮೊದಲ ಆಧ್ಯತೆ ನೀಡುತ್ತೇನೆ. ಗ್ರಾಮೀಣ ಪತ್ರಕರ್ತರ ಆರೋಗ್ಯ ವಿಮೆ, ಬಸ್ ಪಾಸ್ ವಿತರಣೆಯಲ್ಲಿದ್ದ ತಾಂತ್ರಿಕ ತೊಡಕುಗಳನ್ನು ನಿವಾರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ತಿಳಿಸಿದರು.

ಪತ್ರಿಕಾ ದಿನಾಚರಣೆಯ ಅಂಗವಾಗಿ
ಮಾಲೂರು ಪತ್ರಕರ್ತರ ಭವನಕ್ಕೆ ಭೂಮಿಪೂಜೆ ನೆರವೇರಿಸಿ, ಪತ್ರಕರ್ತರಿಗೆ ಅಭಿನಂದಿಸಿ ಮಾತನಾಡಿದರು.

ಪತ್ರಕರ್ತರಿಗೆ ತುಂಬಾ ಅವಶ್ಯಕವಿರುವ
ಆರೋಗ್ಯ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಸಿಗುವಂತಹ ಆರೋಗ್ಯ ವಿಮೆ ಈ ಹಿಂದೆಯೇ ಮಾಡಲಾಗಿತ್ತು. ಅದಕ್ಕಾಗಿ10 ಕೋಟಿ ರೂಗಳನ್ನು ಮೀಸಲಿಡಾಲಾಗಿದೆ. ಆರೋಗ್ಯ ವಿಮೆ ನೀಡಲು ಕೆಲವು ನ್ಯೂನ್ಯತೆಗಳಿದ್ದವು
ಅವುಗಳ ಸರಳೀಕರಣಕ್ಕೆ
ಇತ್ತೀಚಿಗೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅದಕ್ಕೊಂದು
ಕರಡು ನೀತಿ ರೂಪಿಸಲಾಗಿದೆ. ಅದು ಶೀಘ್ರದಲ್ಲಿ ಎಲ್ಲ ಪತ್ರಕರ್ತರಿಗೆ ಸುಲಭವಾಗಿ ಸಿಗುವಂತಾಗಲಿದೆ ಎಂದರು.

ಗ್ರಾಮೀಣ ಪತ್ರಕರ್ತರಿಗೆ
ಉಚಿತ ಬಸ್ ಪಾಸ್
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದು
ಅದರ ವಿತರಣೆಯ
ಕರಡು ನೀತಿ ಸಿದ್ದಗೊಳ್ಳುತ್ತಿದೆ.
ತಾಲ್ಲೂಕು ಪತ್ರಕರ್ತರಿಗೆ,
ಜಿಲ್ಲಾ ಪತ್ರಕರ್ತರಿಗೆ
ಮತ್ತು ಗ್ರಾಮೀಣ ಪತ್ರಿಕೆಗಳಿಗೆ ಆದ್ಯಕೆ ಮೇರೆಗೆ
ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಮಾಲೂರು ಪತ್ರಕರ್ತರ ಸಂಘದ ಪ್ರಯತ್ನದಿಂದ ಪತ್ರಕರ್ತರ ಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಷಯ.
ಭವನ ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ.
ಇದಕ್ಕೆ ಶ್ರಮಿಸಿದ ಪತ್ರಕರ್ತ ಮಿತ್ರರಿಗೂ ಮತ್ತು
ವಿಶೇಷವಾಗಿ ಕಾರಣೀಭೂತರಾದ ಶಾಸಕರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದರು.

ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಿ. ಮುಖ್ಯಮಂತ್ರಿಗಳೇ ಅದನ್ನು ಉದ್ಘಾಟಿಸುತ್ತಾರೆ ಎಂದರು.

ಭವನ ನಿರ್ಮಾಣಕ್ಕೆ ನಾನೂ ಶಕ್ತಿ ಮೀರಿ ಸಹಕಾರ ನೀಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಮಾಲೂರು ಶಾಸಕರಾದ ನಂಜೇಗೌಡರು, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿ ಕೋಲಾರ ಮತ್ತು ಮಾಲೂರು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: