ನಗರದ ರಾಜಕಾಲುವೆ ಸರ್ವೆ ನಡೆಸಿ ತಡೆಗೋಡೆ ನಿರ್ಮಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ. 

Get real time updates directly on you device, subscribe now.

ಕೊಪ್ಪಳ : ನಗರ ಪರಮುಖ ಬಡಾವಣೆಗಳ ಹಾಗೂ ಹಸನ್ ರಸ್ತೆ ಸೇರಿದಂತೆ ನಗರ ಪೊಲೀಸ್ ಠಾಣೆ ಪಕ್ಕದಿಂದ ಭಾಗ್ಯನಗರದಲ್ಲಿ  ಹಾದು ಹೋಗಿರುವ  ರಾಜ ಕಾಲುವೆಯನ್ನು ಸರ್ವೆ ನಡೆಸಿ. ಹದ್ದುಬಸ್ತು ನಿಗದಿ ಮಾಡಿ, ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
   ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಕೊಪ್ಪಳ ನಗರದಲ್ಲಿ ಹಾಗೂ ಭಾಗ್ಯನಗರದಲ್ಲಿ ರಾಜ್ ಕಾಲುವೆಯನ್ನು ಅತಿಕ್ರಮಿಸಿ, ಕೆಲವರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಈ ಕಾರಣದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮಳೆ ನೀರು ಹರಿಯುವ ದಿಕ್ಕು ತಪ್ಪಿದ್ದರಿಂದ ಜನರು ವಾಸಿಸುವ ಮನೆಗಳಿಗೆ ನೀರು ನುಗ್ಗುತ್ತಿವೆ. ಕಳೆದ 15 ದಿನಗಳ ಹಿಂದೆ ನಗರದಲ್ಲಿ ತೀವ್ರ ಮಳೆ ಸುರಿದಾಗ ಕಲ್ಯಾಣ ನಗರ, ಕುವೆಂಪು ನಗರ ಹಾಗೂ ಇತರೆ ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ, ಮನೆಯೊಳಗಿನ ಕಾಳು-ಕಡಿ, ಬೆಲೆ ಬಾಳುವ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದಲ್ಲದೆ ಮನೆಯೊಳಗಡೆ ಹಾವು, ಇತರೆ ವಿಷ ಜಂತುಗಳು ಸೇರಿಕೊಂಡಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಿದರು.ನಗರದ ಹುಲಿಕೆರೆಯ ಗುಡ್ಡದ ಮೇಲಿನಿಂದ ಹರಿಯುವ ನೀರು ಹಲವು ವಾರ್ಡ್‌ಗಳ ಮೂಲಕ ರಾಜ್‌ ಕಾಲುವೆಯಿಂದ ಭಾಗ್ಯನಗರದ ಮೂಲಕ ಹಿರೇಹಳ್ಳ ಸೇರುತ್ತದೆ. ಕುಷ್ಟಗಿ ಮುಖ್ಯ ರಸ್ತೆಯಿಂದ ಪ್ರಾರಂಭಗೊಳ್ಳುವ ರಾಜ್‌ ಕಾಲುವೆ ಮೂಲಕ ಹರಿಯುವ ನೀರು ಭಾಗ್ಯನಗರದ ರಾಜ್ ಕಾಲುವೆಯಿಂದ ಹಿರೇಹಳ್ಳ ಸೇರುತ್ತದೆ. ಮೇಲ್ಕಾಣಿಸಿದ ಎರಡು ರಾಜ್ ಕಾಲುವೆಗಳು ಮತ್ತು ಕುವೆಂಪು ನಗರದ ರಾಜ್ ಕಾಲುವೆ ಸೇರಿದಂತೆ ಅನೇಕ ರಾಜ್ ಕಾಲುವೆಗಳನ್ನು ಅತಿಕ್ರಮಿಸಿ, ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಾರಣದಿಂದ ಮಳೆಗಾಲದ ಸಂದರ್ಭದಲ್ಲಿ ಮುಖ್ಯ ರಸ್ತೆಗಳ, ಒಳ ರಸ್ತೆಗಳ ಮೇಲೆ ನೀರು ಹಳ್ಳದಂತೆ ಹರಿಯುತ್ತದೆ. ಈ ಕಾರಣದಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ತಾವುಗಳು ಕೊಪ್ಪಳ ಮತ್ತು ಭಾಗ್ಯನಗರದ ಎಲ್ಲಾ ರಾಜ್ ಕಾಲುವೆಗಳು ಸರ್ವೆ ನಡೆಸಿ, ಹದ್ದುಬಸ್ತು ನಿಗಧಿ ಮಾಡಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ, ತಡೆಗೋಡೆ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಬಂಡಾಯ ಸಾಹಿತ್ಯ ಸಂಘಟನೆಯ ಮುಖಂಡರು ಹಾಗೂ ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು.ಕರ್ನಾಟಕ ರೈತ ಸಂಘ(ಎಐಕೆಕೆಎಸ್)
ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಐಟಿಯುಸಿ)ಯ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್.
ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಬಸವರಾಜ ನರೇಗಲ್. ಅಲೆ ಮಾರಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ. ಭಾರತೀಯ ಭೀಮ ಸೇನೆಯ ಜಿಲ್ಲಾ ಅಧ್ಯಕ್ಷ ಕಾಶಪ್ಪ ಚಲವಾದಿ. ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮುಂತಾದವರು ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: