ಅಭಿನಂದನಾ ಗ್ರಂಥ ಲೇಖನಗಳ ಆಹ್ವಾನ
ಲೇಖನಗಳ ಆಹ್ವಾ
ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಾರಡ್ಡಿ ಮೇಟಿಯವರು ಜುಲೈ 31ರಂದು ಸರ್ಕಾರಿ ಸೇವಾ ನಿವೃತ್ತಿ ಹೊಂದಲಿದ್ದು, ಅವರ ಬದುಕಿನ, ವೃತ್ತಿ ಜೀವನದ ವಿವಿಧ ಹಂತ, ಬೆಳವಣಿಗೆಗಳ ಕುರಿತಂತೆ ಅಭಿನಂದನಾ ಗ್ರಂಥ ಹೊರತರಲಾಗುತ್ತಿದೆ ಎಂದು ಗ್ರಂಥ ಪ್ರಕಟಣಾ ಸಮಿತಿ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯವರು, ಅಭಿನಂದನಾ ಗ್ರಂಥಕ್ಕೆ ಅವರ ಪರಿಚಯಸ್ಥರು, ಬಂಧು-ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಅವರ ಕುರಿತಂತೆ ಲೇಖನಗಳನ್ನು ಆಹ್ವಾನಿಸಿದ್ದಾರೆ. 500 ಪದಗಳ ಮಿತಿಯ ಲೇಖನಗಳನ್ನು ನುಡಿ ಇಲ್ಲವೇ ಯುನಿಕೋಡ್‌ನಲ್ಲಿ ಟೈಪ್ ಮಾಡಿ [email protected] ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಜುಲೈ 2ರ ಸಂಜೆ 5-30ರೊಳಗೆ ಲೇಖನಗಳನ್ನು ಕಳುಹಿಸಲು ಕೋರಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಬಸವರಾಜ ಕರುಗಲ್ (9380605892), ಪ್ರಕಾಶಗೌಡ (9980910533), ಮಂಜುನಾಥ್ ಆರೆಂಟ್ನೂರು (9972363064), ಮಹಾಂತೇಶ ನೆಲಾಗಣಿ (9964811198), ಡಾ.ಪ್ರಕಾಶ್ ಬಳ್ಳಾರಿ (9481440085) ಇವರನ್ನು ಸಂಪರ್ಕಿಸಬಹುದು.
Comments are closed.