ಜೂನ್ 16 ರಂದು ವಿದ್ಯುತ್ ವ್ಯತ್ಯಯ
: ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110/33/11 ಕೆ.ವಿ ವಿದ್ಯುತ್ ಕೇಂದ್ರ ಕೊಪ್ಪಳ ಹಾಗೂ 33/11 ಕೆ.ಎ ವಿದ್ಯುತ್ ಉಪ-ಕೇಂದ್ರ ಕಿನ್ನಾಳದಲ್ಲಿ ಮೊದಲನೇಯ ತ್ರೈಮಾಸಿಕ ಕೆಲಸ ನಡೆಸುತ್ತಿರುವ ಪ್ರಯುಕ್ತ, 110/33/11 ಕೆ.ವಿ ವಿದ್ಯುತ್ ಕೇಂದ್ರ ಕೊಪ್ಪಳದಿಂದ ಸರಬರಾಜು ಆಗುವ ಹಾಗೂ 33/11 ಕೆ.ವಿ ವಿದ್ಯುತ್ ಉಪ-ಕೇಂದ್ರ ಕಿನ್ನಾಳದಿಂದ ಸರಬರಾಜು ಆಗುವ ಎಲ್ಲಾ 11 ಕೆ.ವಿ ಮಾರ್ಗಗಳಿಗೆ ಒಳಪಡುವ ನಗರ ಪ್ರದೇಶ ಮತ್ತು ಎಲ್ಲಾ ಗ್ರಾಮಗಳಿಗೆ ಜೂನ್ 16 ರ ಭಾನುವಾರದಂದು ಮುಂಜಾನೆ 10 ಗಂಟೆಯಿAದ ಸಾಯಾಂಕಾಲ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಮೇಲಿನ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರಿಯಾಗುವುದಿಲ್ಲ ಎಂದು ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.