ನಾಗರಾಜ್ ಬರಗೂರು ಗೆಳೆಯರಿಂದ ತಂಗಡಗಿ ಜನುಮದಿನಕ್ಕಾಗಿ ಬೆಳ್ಳಿ ರಥೋತ್ಸವ

Get real time updates directly on you device, subscribe now.

ಒಗ್ಗಟ್ಟಿನ ಪ್ರಯತ್ನ ಪಕ್ಷಕ್ಕೆ ಬಲ ತಂದಿದೆ : ಶಿವರಾಜ್ ತಂಗಡಗಿ
ಗಂಗಾವತಿ: ಕನ್ನಡ ಮತ್ತು ಸಂಸ್ಕೃತಿ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಜನುದಿನಕ್ಕಾಗಿ ನಾಗರಾಜ್ ಬರಗೂರು ಮಿತ್ರರು ಹಾಗು ಶಿವರಾಜ್ ತಂಗಡಗಿ ಅಭಿಮಾನಿ ಬಳಗವು ನಗರದ ಶ್ರೀ ಚನ್ನಬಸವಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ತೇರು ಎಳೆಯುವ ಮೂಲಕ ಸಚಿವರಿಗೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿಯವರು, ಕೊಪ್ಪಳ ಲೋಕಸಭೆ ಹಾಗು ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡಿದ್ದು, ಜನಪ್ರತಿನಿಧಿಗಳು, ಮಾಜಿ, ಹಾಲಿಗಳು ಮುಖಂಡರು, ಕಾರ್ಯಕರ್ತರ ಶ್ರಮಿದಂದಾಗಿ ಪಕ್ಷಕ್ಕೆ ಮುನ್ನಡೆಯಾಗುತ್ತಿದ್ದು ಒಗ್ಗಟ್ಟು ಕಾಯ್ದುಕೊಂಡು ಮುಂಬರುವ ಚುನಾವಣೆಯಲ್ಲಿಯೂ ಪಕ್ಷ ಗೆಲುವು ದಾಖಲಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಂತರ ಸುಮಾರು ೫೦ ಕ್ಕು ಹೆಚ್ಚು ಶ್ರೀ ಮಠದಲ್ಲಿರುವ ವಿದ್ಯಾರ್ಥಿಗಳಿಗೆ ವಸ್ತ್ರ ನೀಡಲಾಯಿತು. ಶ್ರೀ ಶ್ರೀ ಚನ್ನಬಸವಸ್ವಾಮಿಗೆ ವಿಶೇಷ ಪೂಜೆ ಹಾಗು ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ ದಂಪತಿಗಳು, ನೇತೃತ್ವ ವಹಿಸಿದ್ದ ನಾಗರಾಜ್ ಬರಗೂರು ದಂಪತಿಗಳು, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಕಾಂಗ್ರೆಸ್ ಮುಖಂಡರಾದ ಬಳಗನೂರು ನಾಗರಾಜ್, ಶಶಿಧರಗೌಡ, ರುದ್ರಗೌಡ ನಂದಿಹಾಳ್, ಅಮರೇಶ್ ಗೋನಾಳ್, ರೆಡ್ಡಿ ಶ್ರೀನಿವಾಸ್, ಸಿದ್ದನಗೌಡ ಕಿಡದೂರು, ನಾಗರಾಜ್ ಬಳಗನೂರು, ಸಿದ್ದನಗೌಡ ಹಣವಾಳ, ಲಿಂಗಪ್ಪ ಬರಗೂರು ವಿಜಯ್ ಕೋಲ್ಕಾರ್, ಚಿನ್ನಿ ಜೆಸಿಬಿ ಹಾಗು ಕಲ್ಗುಡಿ ಪ್ರಸಾದ ಇತರರಿದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: