೧೦ನೇ ಮೇ ಸಾಹಿತ್ಯ ಮೇಳ ಯಶಸ್ವಿ – ಭಾರಧ್ವಾಜ್

Get real time updates directly on you device, subscribe now.

ಗಂಗಾವತಿ: ಮೇ-೨೫ ಮತ್ತು ೨೬ ರಂದು ಕೊಪ್ಪಳದಲ್ಲಿ ನಡೆದ ೧೦ನೇ ಮೇ ಸಾಹಿತ್ಯ ಮೇಳ ಯಶಸ್ವಿಯಾಗಿ ಜರುಗಿತು. ಈ ಮೇಳದಲ್ಲಿ ಪಾಲ್ಗೊಂಡ ಪ್ರಗತಿಪರರಿಗೆ ಅಭಿನಂದನೆಗಳು ಎಂದು ಕ್ರಾಂತಿ ಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ತಿಳಿಸಿದರು.
೧೦ನೇ ವರ್ಷದ ಮೇ ಸಾಹಿತ್ಯ ಮೇಳದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆದು ಅಭಿಮಾನಿಗಳು ಕದಲದೇ ಕೂತಿರುವುದು ಎಡಪಂಥೀಯ ಭಾವನೆಗಳಿಗೆ ಸಂದ ಗೌರವವಾಗಿದೆ. ಎರಡು ದಿನಗಳ ಕಾಲ ಪ್ರಪಂಚವನ್ನು ಮರೆತು ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಬುದ್ಧಿಜೀವಿಗಳಿಗೆ ನನ್ನ ಕ್ರಾಂತಿಕಾರಿ ಕೆಂಪು ವಂದನೆಗಳು ಎಂದು ಹೇಳಿದರು.
ಚುನಾವಣೆ ನಂತರ ಬರುವ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಚರ್ಚೆಯಾಯಿತು. ಮೇಳದಲ್ಲಿ ರಾಜ್ಯಾಧ್ಯಂತ ಪ್ರಗತಿಪರರು, ಬುದ್ಧಿಜೀವಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ಡಿ. ವಿಜಯ್ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!