ಕಾನೂನು ಚೌಕಟ್ಟಿನಲ್ಲಿ ಬೀಜ, ರಸಗೊಬ್ಬರ ವ್ಯಾಪಾರ ವಹಿವಾಟು ಮಾಡಬೇಕು: ಅಜ್ಮೀರಲಿ
ಕುಷ್ಟಗಿ.ಮೇ.22: ರೈತರಿಗೆ ಬೀಜ, ರಸಗೊಬ್ಬರ ಸಮಸ್ಯೆ ಉಂಟಾಗದಂತೆ ವ್ಯಾಪಾರ ವಹಿವಾಟು ಮಾಡಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಸಲಹೆ ನೀಡಿದರು.
ಮುಂಗಾರು ಹಂಗಾಮಿ ಪ್ರಯುಕ್ತ ರಸಗೊಬ್ಬರ, ಬೀಜ ಗಳ ಮಾರಾಟ ಮಾಡುವ ಕುರಿತು ಬುಧವಾರ ಬೆಳಿಗ್ಗೆ ಪಟ್ಟಣದ ಕೃಷಿ ಇಲಾಖೆ ಸಭಾ ಭವನದಲ್ಲಿ ಸಹಾಯಕ ನಿರ್ದೇಶಕ ಅಜ್ಮೀರಲಿ ನೇತೃತ್ವದಲ್ಲಿ ಏರ್ಪಡಿಸಿದ್ದ ಕುಷ್ಟಗಿ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು
ಎಮ್.ಆರ್.ಪಿ ದರದಲ್ಲಿ ರಸ ಗೊಬ್ಬರ ಮಾರಾಟ ಮಾಡಬೇಕು.
ಡಿ.ಎ.ಪಿ, ಯುರಿಯಾ ರಸಗೊಬ್ಬರಗಳ ಜೊತೆಗೆ ಇನ್ನೂಳಿದ ರಸಗೊಬ್ಬರಗಳು ಉತ್ತಮ ಪೌಷ್ಟಿಕಾಂಶ ಹಾಗೂ ಉತ್ತಮ ಗುಣಮಟ್ಟ ಹೊಂದಿವೆ ಅವುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಹೊಲಗಳಿಗೆ ಉಪಯೋಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಂಗಡಿಯ ಲೈಸೆನ್ಸ್ ರೈತರಿಗೆ ಕಾಣುವ ರೀತಿ ಅಳವಡಿಸಬೇಕು.
ಗೋಡಾನು ನಿರ್ಮಾಣ ಕುರಿತು ಕಡ್ಡಾಯವಾಗಿ ಕೃಷಿ ಕಚೇರಿಗೆ ಮಾಹಿತಿ ತಿಳಿಸಬೇಕು.
ರಸಗೊಬ್ಬರ ಮಾರಾಟ ಮಾಡುವ ಅಂಗಡಿ ಕಾರರು ಪಾಸ್ ಮಿಶನ್ ಕಡ್ಡಾಯವಾಗಿ ಉಪಯೋಗಿಸಿ ಲೆಕ್ಕ ಪತ್ರ ಬರೆದು ಇಡಬೇಕು.
ಬರ ಸಮಸ್ಯೆ ಇರುವುದರಿಂದ ರೈತರು ಕೃಷಿ ಇಲಾಖೆ ಮತ್ತು ತಹಶೀಲ್ದಾರ ಕಚೇರಿಗೆ ಭೇಟಿ ನೀಡುತ್ತಾರೆ ಸೌಜನ್ಯ ವರ್ತಿಸಿ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಹೇಳಿದರು.
2024-25 ನೇ ಸಾಲಿನ ಪೂರ್ವ ಸಿದ್ಧತೆ ಸಭೆಯನ್ನು ಉದ್ದೇಶಿಸಿ ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಬಸೆಟ್ಟೆಪ್ಪ ಕುಂಬಳಾವತಿ ಮಾತನಾಡಿ ಸರಕಾರದ ನೀತಿ ನಿಯಮಗಳ ಚೌಕಟ್ಟಿನಲ್ಲಿ ವ್ಯಾಪಾರ ವಹಿವಾಟು ಮಾಡಲಾಗುತ್ತದೆ ಇದರಲ್ಲಿ ಯಾವುದೇ ಸಂದೇಹವಿಲ್ಲ ತಾವುಗಳು ಯಾವಾಗಲಾದರೂ ತಪಾಸಣೆ ನಡೆಸಬಹುದು ಎಂದು ಹೇಳಿದರು.
ಕೆಲವು ಕಂಪನಿಗಳಿಂದ ರಸಗೊಬ್ಬರ, ಬೀಜಗಳ ಮಾರಾಟಕ್ಕೆ ನಮಗೆ ತುಂಬಾ ಸಮಸ್ಯೆ ಇದೆ ಇದರ ಕುರಿತು ನಿಮಗೆ ದೂರು ಸಲ್ಲಿಸುತ್ತೇವೆ ಎಂದು ಹೇಳಿದರು.
ಡಿ.ಎ.ಪಿ, ಯುರಿಯಾ ರಸಗೊಬ್ಬರಗಳನ್ನು ರೈತರು ಅತೀ ಹೆಚ್ಚು ಬಳಕೆ ಮಾಡುತ್ತಾರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.
ಕೃಷಿ ಪರಿಕರ ಮಾರಾಟಗಾರಾ ರಾಜೇಶ್ ಅರಳಲೆಮಠ ಮಾತನಾಡಿ ರಸಗೊಬ್ಬರಗಳನ್ನು ಎಂ.ಆರ್.ಪಿ ದರದಲ್ಲಿ ಮಾರಾಟ ಮಾಡಲು ತುಂಬಾ ಸಮಸ್ಯೆ ಇದೆ ಇದರಿಂದ ಮಾರಾಟಗಾರರಿಗೆ ನಷ್ಟ ಉಂಟಾಗುತ್ತದೆ ಸ್ವಲ್ಪ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತೇವೆ ಎಂದು ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಸದ್ಯದಲ್ಲೇ ಮಳೆಯಾದರೆ ಯುರಿಯಾ ರಸಗೊಬ್ಬರ ಅವಶ್ಯಕತೆ ಅನುಗುಣವಾಗಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಸಹಾಯಕ ನಿರ್ದೇಶಕ ಅಜ್ಮೀರಲಿಯವರು ಕಾಯ್ದೆ ಪ್ರಕಾರ ಬೀಜ, ರಸಗೊಬ್ಬರಗಳನ್ನು ರೈತರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟ ಮಾಡಬೇಕು.
ಅಗತ್ಯ ಅನುಗುಣವಾಗಿ ರಸಗೊಬ್ಬರ, ಬೀಜಗಳನ್ನು ಸರಬರಾಜು ಮಾಡಲಾಗುತ್ತದೆ ರೈತರ ಇಲಾಖೆ ಸಮಯದಲ್ಲಿ ಬಂದು ತೆಗೆದು ಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿ ರಾಜಶೇಖರ ನಾಯಕ, ಹನುಮಸಾಗರ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ, ಹನುಮನಾಳ ಸಹಾಯಕ ಕೃಷಿ ಅಧಿಕಾರಿ ವಿರೇಶ ಅಂತೂರ, ಕೃಷಿ ಪರಿಕರಗಳ ಮಾರಾಟಗಾರು, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸಿಇಓಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Comments are closed.