ಕಿನ್ನಾಳ ಗ್ರಾಮದಲ್ಲಿ ನಡೆದ ಮಗುವಿನ ಕೊಲೆಯನ್ನು ಖಂಡಿಸಿ ಪ್ರತಿಭಟನೆ,ಮನವಿ
ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ನಡೆದ ಬಾಲಕಿಯಕೊಲೆಯ ತತ್‌ಕ್ಷಣದ ತನಿಖೆಗೆಎ.ಐ.ಎಂ.ಎಸ್.ಎಸ್ ಮತ್ತುಎ.ಐ.ಡಿ.ವೈ.ಓ ಸಂಘಟನೆಗಳು ಆಗ್ರಹ
ಇಂದು ಎ ಐ ಎಮ್‌ಎಸ್‌ಎಸ್ ಹಾಗೂ ಎ ಐ ಡಿ ವೈ ಓ ಸಂಘಟನೆಗಳ ವತಿಯಿಂದ ಜಂಟಿಯಾಗಿ ಕೊಪ್ಪಳದ ಕಿನ್ನಾಳ ಗ್ರಾಮದಲ್ಲಿ ನಡೆದ ಮಗುವಿನ ಕೊಲೆಯನ್ನು ಖಂಡಿಸಿ ತಹಸೀಲ್ದಾರ್ ಕಚೇರಿಎದುರುಗಡೆ ಪ್ರತಿಭಟನೆ ಮಾಡಿ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎ ಐ ಎಮ್‌ಎಸ್‌ಎಸ್ ನ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗೆ ಮಾತನಾಡುತ್ತಾ “ಪತ್ರಿಕೆಗಳಲ್ಲಿ ವರದಿಯಾದಂತೆ ತಾಲೂಕಿನ ಕಿನ್ನಾಳ ಗ್ರಾಮದ ೭ ವ?ದ ಬಾಲಕಿಯನ್ನು ಅಪಹರಿಸಿ, ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿರುವ ಅಮಾನವೀಯ ಘಟನೆ ನಡೆದಿದೆ.ಇದಕ್ಕೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮತ್ತುಎ.ಐ.ಡಿ.ವೈ.ಓ ಸಂಘಟನೆಗಳು ತೀವ್ರಆಘಾತ ಮತ್ತು ನೋವನ್ನು ವ್ಯಕ್ತಪಡಿಸುತ್ತವೆ. ಏಪ್ರಿಲ್ ೧೯ ರಂದು ಹೊರಗೆ ಆಟ ಆಡಲು ಹೋದ ಬಾಲಕಿ ಮನೆಗೆ ಹಿಂದಿರುಗಲಿಲ್ಲ. ಪೋ?ಕರು ಸುತ್ತಮುತ್ತ ಹುಡುಕಿದರೂ ಬಾಲಕಿ ಸಿಗಲಿಲ್ಲ. ಕೊನೆಗೆ ಎರಡು ದಿನಗಳ ನಂತರ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇದರಿಂದಾಗಿಇಡೀಗ್ರಾಮದಜನತೆ ಬೆಚ್ಚಿಬಿದ್ದುಆತಂಕಗೊಂಡಿದ್ದಾರೆ.ಜಿಲ್ಲಾಡಳಿತ ಹಾಗೂ ಸರ್ಕಾರಘಟನೆಯ ಬಗ್ಗೆ ಈ ಕೂಡಲೇ ನಿಸ್ಪಕ್ಷಪಾತತನಿಖೆ ನಡೆಸಿ ನ್ಯಾಯಒದಗಿಸಬೇಕು” ಎಂದು ಆಗ್ರಹಿಸಿದರು.
ಎ ಐ ಡಿ ವೈ ಓ ನ ಜಿಲ್ಲಾ ಕಾರ್ಯದರ್ಶಿಗಳಾದ ಶರಣು ಪಾಟೀಲ್ ಮಾತನಾಡುತ್ತಾ “ಅಪ್ರಾಪ್ತ ಹೆಣ್ಣು ಮಕ್ಕಳ ಜೀವತೆಗೆಯುವುದರಿಂದ ನಿಧಿ ಸಿಗುವುದೆಂಬ ಮೂಢ ನಂಬಿಕೆಗೆ ಬಾಲಕಿ ಬಲಿಯಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರಣ ಏನೇ ಇದ್ದರೂ ಸರ್ಕಾರ ಈ ಕೂಡಲೇಎಚ್ಚೆತ್ತುಕೊಂಡು ಬಾಲಕಿಯಕೊಲೆಯ ಬಗ್ಗೆ ತೀವ್ರಗತಿಯಲ್ಲಿತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಆ ಮೃತ ಬಾಲಕಿಗೆ ನ್ಯಾಯಒದಗಿಸಬೇಕುಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾಕಾರರಾದ ಶಾರದಗಡ್ಡಿ ,ಕಾಲೇಜು ವಿದ್ಯಾರ್ಥಿಗಳಾದ ಸರಸ್ವತಿ, ಮಹಾಲಕ್ಷ್ಮಿ, ನಿರುಪಾದಿ, ಹುಲಗಪ್ಪ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.