Sign in
Sign in
Recover your password.
A password will be e-mailed to you.
ಕೊಪ್ಪಳ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಅವರು ಪ್ರಚಾರ ಕಾರ್ಯ ಕೈಗೊಂಡು ವ್ಯಾಪಾರಸ್ಥರನ್ನು, ಕಾರ್ಮಿಕ ಸಮುದಾಯವನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೃಷಿ ಆರ್ಥಿಕತೆಗೆ ಉತ್ತೇಜನ, ಪ್ರಯಾಸ ಪಡುವ ಕಾರ್ಮಿಕರ ಜೀವನಕ್ಕೆ ಅನೇಕ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ ಎಂದರು.
ನಿಮ್ಮ ಬೆಂಬಲವಿರಲಿ ಎಂದಾಗ, “ನೀವು ಗೆಲ್ತೀರಿ, ಮೋದಿನೂ ಗೆಲ್ತಾರೆ, ನಮ್ಮ ಓಟು ನಿಮಗ” ಎಂಬ ಕಾರ್ಮಿಕರ ಮಾತುಗಳು ಗೆಲುವಿನ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಕಾರ್ಮಿಕ ಶ್ರೆಯೋಭಿವೃದ್ಧಿಯೇ ನನ್ನ ಸಂಕಲ್ಪವಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಎಲ್ಲ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜೊತೆಗಿದ್ದರು.
Get real time updates directly on you device, subscribe now.
Comments are closed.