ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಕಟ್ಟುತ್ತಿರುವ ಎಸ್. ಯು. ಸಿ. ಐ (ಕಮ್ಯುನಿಸ್ಟ್) ಪಕ್ಷವನ್ನು ಗೆಲ್ಲಿಸಿ -ಶರಣು ಗಡ್ಡಿ 

Get real time updates directly on you device, subscribe now.

ಗಂಗಾವತಿ ತಾಲೂಕು ವೆಂಕಟಗಿರಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುವ ಕಾರ್ಮಿಕರನ್ನು ಉದ್ದೇಶಿಸಿ  ಮಾತನಾಡಿ ಮತ ಹಾಕಲು ಮನವಿ ಮಾಡಿದ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣು ಗಡ್ಡಿ.
 ಉದ್ಯೋಗ ಖಾತ್ರಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರನ್ನು ಉದ್ದೇಶಿಸಿ   ಮಾತನಾಡಿ ಇಂದು ದೇಶದಲ್ಲಿ ಹಲವಾರು ರಾಜ್ಯಗಳು ಮತ್ತು ಕರ್ನಾಟಕದ ಬಹುತೇಕ  ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಭೀಕರ ಬರಗಾಲವಿದ್ದು ಕೇಂದ್ರ ಸರ್ಕಾರ ಬರಗಾಲ ಕಾಮಗಾರಿ ಮತ್ತು ಪರಿಹಾರ ನೀಡುವ ಭರವಸೆಯನ್ನು ಸುಳ್ಳು ಮಾಡಿದೆ.   ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು 200  ದಿನಕ್ಕೆ ಹೆಚ್ಚಿಸಿ, ಕನಿಷ್ಠ ಕೂಲಿಯನ್ನು ರೂ.600 ಹೆಚ್ಚಿಸಬೇಕೆಂದು ನಮ್ಮ ಪಕ್ಷ ನಿರಂತರವಾಗಿ ಕಾರ್ಮಿಕರ ಪರ  ಹೋರಾಟ ಕಟ್ಟುತ್ತಿದೆ.
 ಆದರೆ ಕೇಂದ್ರ ಸರ್ಕಾರ  ಉದ್ಯೋಗ ಖಾತ್ರಿಗೆ ಮೀಸಲಿಟ್ಟ ಹಣವನ್ನು  ಕಡಿತಗೊಳಿಸುತ್ತ ಬಂದಿದೆ.ಇದು ದುಡಿಯುವ ಕಾರ್ಮಿಕರ ವಿರೋಧಿ ನಡೆಯಾಗಿದೆ.
 ಇನ್ನೊಂದೆಡೆ ಜನಸಾಮಾನ್ಯರು ದಿನನಿತ್ಯ ಖರೀದಿಸುವ ಅಗತ್ಯ ವಸ್ತುಗಳ ಬೆಲೆ  ಗಗನಕೇರುತ್ತಿದೆ.  ಬೆಲೆಗೆ ತಕ್ಕ ಕೂಲಿ ಇಲ್ಲ, ದುಡಿತಕ್ಕೆ ತಕ್ಕ ವೇತನವಿಲ್ಲ.
ಇನ್ನೊಂದೆಡೆ  ಶಿಕ್ಷಣ, ಆರೋಗ್ಯ  ದಿನನಿತ್ಯ ದುಬಾರಿಯಾಗುತ್ತಿದೆ.  ಉದ್ಯೋಗ ಹರಿಸಿ ಬರುತ್ತಿರುವ ನಿರುದ್ಯೋಗಿ ಯುವಜನರಿಗೆ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲ.  ವರ್ಷಕ್ಕೆ ಎರಡು ಕೋಟಿ ಉದ್ಯೋಗ,ರೈತರಿಗೆ ಬೆಂಬಲ ಬೆಲೆ, ಅಚ್ಚೆ ದಿನ್, ಬೇಟಿ ಬಚಾವೋ ಬೇಟಿ ಪಡಾವೋ, ಸಬಕಾ ಸಾತ್ ಸಬಕಾ ವಿಕಾಸ್, ಭಾರತ ವಿಕಾಸವಾಗುತ್ತಿದೆ ಎಂಬ  ಅಬ್ಬರದ ಘೋಷಣೆಗಳು, ಪೊಳ್ಳು ಭಾಷಣಗಳಾಗಿವೆ.  ಎಸ್ ಯು ಸಿ ಐ  ಕಮ್ಯುನಿಸ್ಟ್ ಪಕ್ಷ ನಿರಂತರ ಜನ ಹೋರಾಟವನ್ನು ಕಟ್ಟುತ್ತಾ ಈ ಪಾರ್ಲಿಮೆಂಟರಿ(ಲೋಕಸಭಾ )ಚುನಾವಣೆಯನ್ನು ಹೋರಾಟದ ಭಾಗ ಎಂದು ಭಾವಿಸಿದೆ.ಈ ಲೋಕಸಭಾ ಚುನಾವಣೆಯಲ್ಲಿ ಕೂಡ ಕರ್ನಾಟಕದಲ್ಲಿ 19 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಜನರ ಜ್ವಲಂತ ಸಮಸ್ಯೆಗಳನ್ನು ಈ ಚುನಾವಣೆ ಸಂದರ್ಭದಲ್ಲಿ ಧ್ವನಿ ಎತ್ತುತ್ತಿದೆ.
 ಕಾರ್ಮಿಕರ, ದುಡಿಯುವರ, ಬಡವರ ಪಕ್ಷ ವನ್ನು ಎಲ್ಲ ವರ್ಗದ ಜನ ಬೆಂಬಲಿಸಿ, ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
 ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣು ಪಾಟೀಲ್, ಸುರೇಶ್,ಗಣೇಶ್, ಶರಣಪ್ಪ,ನಾಗಪ್ಪ, ಬೆಂಬಲಿಗರಾದ ಹನುಮಂತ, ಬಸವರಾಜ್ ಬಂಡ್ರಾಳ್,ನೀಲಮ್ಮ,ಹುಲಿಗೆಮ್ಮ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!