ಗದಗಿನಲ್ಲಿ ಭಾಗ್ಯನಗರದ ಮೂವರು ಸೇರಿದಂತೆ ನಾಲ್ವರ ಹತ್ಯೆ : ನಾಲ್ಕು ವಿಶೇಷ ತಂಡಗಳ ರಚನೆ
ಗದಗ : ದಾಸರ ಓಣಿಯಲ್ಲಿ ಈ ಭೀಕರ ಘಟನೆ ನಡೆದಿದ್ದು ಸುನಂದಾ ಬಾಕಳೆ ಪುತ್ರ ಕಾರ್ತಿಕ ಬಾಕಳೆ ಭಾಗ್ಯನಗರದ ಪರುಶುರಾಮ , ಲಕ್ಷ್ಮಿ ಮತ್ತು ಆಕಾಂಕ್ಷ ಕೊಲೆಯಾದ ದುದೈವಿಗಳು.
ಸುನಂದ ಬಾಕಳೆಯವರ ಪುತ್ರ ಕಾರ್ತಿಕ ಬಾಕಳೆ ಮದುವೆ ನಿಶ್ಚಯ ಕಾರ್ಯಕ್ರಮದ ನಿಮಿತ್ತ ಸಂಬಂಧಿಗಳು ಏ. 17ರಂದು ಮನೆಗೆ ಬಂದಿದ್ದರು. ಏ.18ರಂದು ರಾತ್ರಿ ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದ್ದಾಗ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾಗ್ಯನಗರದಲ ಪರಶುರಾಮ ಹಾದಿಮನಿ ಹೋಟೆಲ್ ಉದ್ಯಮಿಯಾಗಿದ್ದು ಈ ಹಿಂದೆ ಎರಡು ಬಾರಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಲಕ್ಷ್ಮಿ ಒಂದು ಬಾರಿ ನಾಮನಿರ್ದೇಶಿತ ಸದಸ್ಯೆಯಾಗಿದ್ದರು ಹಂತಕರ ಪತ್ತೆಗೆ ನಾಲ್ಕು ವಿಶೇಷ ತಂಡಗಳ ರಚನೆ ಮಾಡಲಾಗಿದೆ.
Comments are closed.