ಸ್. ಯು. ಸಿ. ಐ. ( ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣು ಗಡ್ದಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಚಾರ

Get real time updates directly on you device, subscribe now.

ಸ್. ಯು. ಸಿ. ಐ. ( ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣು ಗಡ್ದಿ ಅವರು ಗಂಗಾವತಿ ನಗರದ ತಾಲೂಕು ಕ್ರೀಡಾಂಗಣ,ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಚಾರ ಮಾಡಿದರು.
 ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ, ಎಸ್. ಯು. ಸಿ. ಐ. ( ಕಮ್ಯುನಿಸ್ಟ್) ಪಕ್ಷ ಯಾಕೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದು ಅಭ್ಯರ್ಥಿ ಶರಣು ಗಡ್ದಿ ಮಾತನಾಡಿದರು.
ಇವತ್ತಿನ ಚುನಾವಣೆಗಳು ಜನ ಹಿತದೃಷ್ಟಿಕೋನದಿಂದ  ನಡೆಯುತ್ತಿಲ್ಲ,ಅಧಿಕಾರ,ಜಾತಿ,ಹಣ ಬಲ,ದೇವರು ಧರ್ಮದ ಹೆಸರಲ್ಲಿ ಹಾಗೂ ಜನರ ಭಾವನಾತ್ಮಕ ವಿಚಾರದ ಹೆಸರಲ್ಲಿ ,ಎನ್.ಡಿ.ಎ.ಮತ್ತು ಇಂಡಿಯಾ ಭಾಗವಾಗಿರುವ ಪಕ್ಷಗಳು  ಚುನಾವಣಾ ಕಣದಲ್ಲಿವೆ. ಇವರು ಅಧಿಕಾರದಲ್ಲಿ ಇದ್ದಾಗ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಿಲ್ಲ.  ಚುನಾವಣೆಗಳಲ್ಲಿ ಇಂದು ಕಾಣುತ್ತಿರುವ ಅಬ್ಬರದ ಪ್ರಚಾರ,ಅಬ್ಬರದ ಘೋಷಣೆಗಳು,ಗ್ಯಾರಂಟಿ ಭರವಸೆಗಳು ಜನರ ಹಿತಾಸಕ್ತಿ ಹೊಂದಿಲ್ಲ. ಕೇವಲ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಹಿತಾಸಕ್ತಿಯನ್ನು ಮಾತ್ರ ಹೊಂದಿವೆ.
ದೇಶದಲ್ಲಿ ಶಿಕ್ಷಣ, ಅರೋಗ್ಯ ದುಬಾರಿಯಾಗಿದೆ,ಯುವಜನತೆ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ.ರೈತರ ಬೆಳೆಗೆ ಬೆಲೆ ಸಿಗದೇ ಆತ್ಮಹತ್ಯೆ ಘಟನೆ ಸರ್ವೇ ಸಾಮಾನ್ಯವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ,ಅಪರಾಧಗಳು ನಾಗರೀಕ ಸಮಾಜ ತಲೆತಗ್ಗಿಸುವಂತಿದೆ.
ಬೆಲೆಯೇರಿಕೆ,ಭ್ರಷ್ಟಚಾರ ಜನರ ಬದುಕನ್ನು  ಮುರಾಬಟ್ಟಿ ಮಾಡಿದೆ. ಈ ಎಲ್ಲಾ ಸಮಸ್ಯೆಗಳಿಗೆ ಈ ಬಂಡವಾಳಶಾಹಿ ಪಕ್ಷಗಳೇ ಕಾರಣ.
ಈ ಪಕ್ಷಗಳಿಗೆ ಎಲೆಕ್ಟ್ರಾಲ್ ಬಾಂಡ್ ಮೂಲಕ ಹಣ ಬಂದಿದೆ.ಈ ಹಣವನ್ನೇ ಈ ಪಕ್ಷಗಳು ಚುನಾವಣೆಗಳಲ್ಲಿ ಖರ್ಚು ಮಾಡುತ್ತವೆ.
ಆದರೆ ಎಸ್. ಯು. ಸಿ. ಐ. ( ಕಮ್ಯುನಿಸ್ಟ್) ಭಿನ್ನವಾದ ರಾಜಕೀಯ ನಿಲುವನ್ನು ಹೊಂದಿದ್ದು ಜನರಿಂದಲೇ ದೇಣಿಗೆ ಸಂಗ್ರಹ ಮಾಡಿ ಈ ಚುನಾವಣೆಯನ್ನು ಹೋರಾಟದ ಭಾಗವಾಗಿ ಕರ್ನಾಟದಲ್ಲಿ ಹತ್ತಂಬೊತ್ತು ಕ್ಷೇತ್ರಗಳಲ್ಲಿ ಕಣದಲ್ಲಿದೆ .
ಕೊಪ್ಪಳ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಜನ  ಹೋರಾಟದ ಕಣದಲ್ಲಿರುವ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಶರಣು ಪಾಟೀಲ್, ಸುರೇಶ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: