ಭಾಗ್ಯನಗರ ಪಟ್ಟಣ ಪಂಚಾಯತಿಯಿAದ ಸ್ವೀಪ್ ಜಾಗೃತಿ ಜಾಥಾ

Get real time updates directly on you device, subscribe now.

): ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾನ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಭಾಗ್ಯನಗರ ಪಟ್ಟಣ ಪಂಚಾಯತಿಯಿAದ ಮಂಗಳವಾರದAದು ಮತದಾನ ಜಾಗೃತಿ ಜಾಥಾ  ಜರುಗಿತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ 64-ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ  ಅವರು, ಮೇ-7ರಂದು ಜರುಗುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಕಾರ್ಖಾನೆಯ ಎಲ್ಲಾ ಮತದಾರರು ಚಾಚೂ ತಪ್ಪದೇ ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ಮತದಾನ ಪವಿತ್ರವಾದ ಕಾರ್ಯ. ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸೋಣ ಎಂದರು.
ಸ್ವೀಪ್ ಕಾರ್ಯಕ್ರಮದ ಜಾಥಾವು ಶಾಂತಿನಿಕೇತನ ಶಾಲೆಯಿಂದ ಆರಂಭವಾಗಿ ಎಫ್‌ಸಿಐ ಗೋದಾಮು, ಪ್ರಗತಿ ನಗರ, ಅಡವಿ ಆಂಜನೇಯ ದೇವಸ್ಥಾನ ಮಾರ್ಗವಾಗಿ ಪಟ್ಟಣ ಪಂಚಾಯತಿಯವರೆಗೆ ನಮ್ಮ ಧ್ವನಿ, ನಮ್ಮ ಮತ, ನಮ್ಮ ಮತ ನಮ್ಮ ಹಕ್ಕು, ನಮ್ಮ ಓಟು ನಮ್ಮ ಪವರ್, ನಮ್ಮ ಮತ ನಮ್ಮ ಆಯ್ಕೆ ಇತ್ಯಾದಿ ಕುರಿತು  ಬಟಿಂಗ್ಸ್ ನಲ್ಲಿರುವ ಘೋಷಣೆಗಳೊಂದಿಗೆ ಸಾಗಿ ಮುಕ್ತಾಯಗೊಂಡಿತು.
ನಂತರ ಕಡ್ಡಾಯ ಮತದಾನ ಮಾಡಲು ಎಲ್ಲಾ ನೌಕರರು, ಕಾರ್ಮಿಕರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜಾಥಾದಲ್ಲಿ 120 ಕ್ಕೂ ಹೆಚ್ಚು ನೌಕರರು, ಕಾರ್ಮಿಕರು ಮತದಾನ ಮಾಡುವಂತೆ ಮನವೊಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುರೇಶ ಬಬಲಾದ, ತಾಲೂಕ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹನಮಂತಪ್ಪ, ತಾಲೂಕ ಯೋಜನಾಧಿಕಾರಿ ರಾಜೇಸಾಬ್ ನದಾಫ್, ತಾಲೂಕ ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಟ್ಟಣ ಪಂಚಾಯತಿಯ ನೌಕರರು, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರು  ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: