24 ಕೋಟಿ ಕುಟುಂಬ ಉಜ್ವಲ ಫಲಾನುಭವಿ: ಕ್ಯಾವಟರ್

Get real time updates directly on you device, subscribe now.

ಯಲಬುರ್ಗಾ: ಸೌದೆ ಮೂಲಕ ಅಡುಗೆ ಮಾಡುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮರಣ ಪ್ರಮಾಣ ಹೆಚ್ಚಾಗುತ್ತಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಈವರೆಗೆ 24 ಕೋಟಿ ಕುಟುಂಬಕ್ಕೆ ಉಜ್ಚಲ ಯೋಜನೆಯಡಿ ಗ್ಯಾಸ್ ಸಿಲಿಂಡರ್, ಸ್ಟವ್ ನೀಡಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ತಿಳಿಸಿದರು.
ಗದಗೇರಿ ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರದಿಂದ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಮಹಿಳಾ ಪರ ನಿಲುವು ಹೊಂದಿರುವುದಕ್ಕೆ ಉಜ್ವಲ ಯೋಜನೆಯೇ ಸಾಕ್ಷಿಯಾಗಿದೆ ಎಂದರು.
ದೇಶಾದ್ಯಂತ ಯಾವ ವ್ಯಕ್ತಿಯೂ ಉಪವಾಸ ಇರಬಾರದು ಎಂಬ ಉದ್ದೇಶದಿಂದ ಪ್ರತಿ ವ್ಯಕ್ತಿಗೆ ಕೇಂದ್ರ ಸರ್ಕಾರ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದೆ. 80 ಕೋಟಿ ಜನರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಇನ್ನು 52 ಕೋಟಿ ಜನರು ಜನಧನ ಖಾತೆ ಹೊಂದಿದ್ದಾರೆ ಎಂದು ತಿಳಿಸಿದರು.
ದೇಶದ ಪ್ರತಿಯೊಬ್ಬರೂ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬುದು ಕೇಂದ್ರ ಬಿಜೆಪಿ ಸರ್ಕಾರದ ಆಶಯವಾಗಿದ್ದು, ಈವರೆಗೆ ದೇಶಾದ್ಯಂತ 14 ಕೋಟಿ ಕುಟುಂಬಕ್ಕೆ ಜಲಜೀವನ ಮಿಷನ್ ನಡಿ ಕೊಳಾಯಿ ವ್ಯವಸ್ಥೆ ಮಾಡಲಾಗಿದೆ. ಭಾರತದ ರೈತರು ಕಾಲ ಕಾಲಕ್ಕೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ 11 ಕೋಟಿ ರೈತರ ಖಾತೆಗೆ ನೇರವಾಗಿ ವಾರ್ಷಿಕ ತಲಾ 6 ಸಾವಿರ ರೂ. ನೀಡುತ್ತಿದ್ದಾರೆ. ಮಹಿಳೆಯರು, ಶ್ರಮಿಕ, ರೈತರು, ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್,
ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಜಿಪಂ ಮಾಜಿ ಸದಸ್ಯ ಶಿವಶಂಕರ ದೇಸಾಯಿ, ಯಲಬುರ್ಗಾ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಕುಕನೂರು ತಾಲೂಕು ಜೆ.ಡಿ.ಎಸ್ ಅಧ್ಯಕ್ಷ ಕೆಂಚಪ್ಪ ಹಳ್ಳಿ, ಕುಷ್ಟಗಿ ಬಿಜೆಪಿ ಅಧ್ಯಕ್ಷ ಮಹಾಂತೇಶ್, ಪ್ರಮುಖರಾದ ಭೂಸನೂರಮಠ, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಸಿ ಎಚ್ ಪಾಟೀಲ್, ಅರವಿಂದಗೌಡ ಪಾಟೀಲ್, ಮಲ್ಲನಗೌಡ ಕೋನನಗೌಡ್ರ, ಕಳಕಪ್ಪ ಕಂಬಳಿ ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: