ಹೆಂಡತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ
ಕೊಪ್ಪಳ :ಹೆಂಡತಿಯನ್ನು ಕೊಂದ ಗಂಡ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಬುಡಶೇಟನಾಳbಗ್ರಾಮದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು ಕುಡಿತಕ್ಕೆ ಬಲಿಯಾಗಿದ್ದ ನಿಂಗಪ್ಪ ಪದೇ ಪದೇ ದುಡ್ಡಿಗಾಗಿ ಪತ್ನಿ ಲಕ್ಷ್ಮವ್ವಳನ್ನು ಸತಾಯಿಸುತ್ತಿದ್ದ ಎನ್ನಲಾಗಿದೆ. ಕಳೆದ ಹಲವಾರು ದಿನಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಹೆಂಡತಿಯನ್ನು ಕೊಲೆ ಮಾಡಿರುವಂತಹ ಗಂಡ ನಿಂಗಪ್ಪ ಹೊಲದಲ್ಲಿ ತಾನು ನೇಣಿಗೆ ಶರಣಾಗಿದ್ದಾನೆ.
ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾಸ್ಥಳಕ್ಕೆ ಇಂದು ಎಸ್ಪಿ ಶ್ರೀಮತಿ ಯಶೋಧ ಒಂಟಗೋಡಿ ಸಿಪಿಐ ಸುರೇಶ್ ಡಿ ಹಾಗೂ ಗ್ರಾಮೀಣ ಠಾಣೆಯ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments are closed.