ಕುಷ್ಟಗಿ ದ್ಯಾಮವ್ವ ದೇವಿ ಜಾತ್ರೆ ಕಾನೂನು ಉಲ್ಲಂಘನೆಯಾಗದಂತೆ ಶಾಂತಿಯುತವಾಗಿ ಆಚರಿಸಬೇಕು;  ರೇಶ್ಮಾ ಹಾನಗಲ್  

Get real time updates directly on you device, subscribe now.


ಕುಷ್ಟಗಿ.ಏ.02; ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆಯು ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕು ಎಂದು ಸಹಾಯಕ ಚುನಾವಣಾ ಅಧಿಕಾರಿ ರೇಶ್ಮಾ ಹಾನಗಲ್ ಸಮಿತಿ ಸದಸ್ಯರಿಗೆ ಸಲಹೆ ನೀಡಿದರು.
ಚುನಾವಣಾ ಇಲಾಖೆ ವತಿಯಿಂದ ಬುಧವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
ಕುಷ್ಟಗಿ ಪಟ್ಟಣದ ಸರ್ವ ಸಮಾಜದವರು ಒಗ್ಗಟ್ಟಾಗಿ ಸೇರಿ 64 ವರ್ಷಗಳ ನಂತರ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆ ಮಾಡುತ್ತಿರುವದು ತುಂಬಾ ಸಂತೋಷದ ವಿಷಯ ಜಾತ್ರಾ ಸಮಿತಿಯವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾಯ್ದೆ ಜಾರಿಯಲ್ಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಾತ್ರೆಯಲ್ಲಿ ಯಾವುದೇ ರೀತಿಯ ಚುನಾವಣಾ ಚಟುವಟಿಕೆ ನಡೆಯಬಾರದು ಎಂದು ಜಾತ್ರಾ ಸಮಿತಿ ಸದಸ್ಯರಿಗೆ ಜಾಗೃತಿ ಮೂಡಿಸಿದರು.
ಜಾತ್ರೆಯಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರು ಪ್ರಚಾರ ಸಾಮಗ್ರಿಗಳೊಂದಿಗೆ ಸಭೆ ನಡೆಸುವುದು ಮತ್ತು ಗುಂಪಾಗಿ ಸೇರುವುದು ನೀತಿ ಸಂಹಿತೆ ಕಾಯ್ದೆ ಉಲ್ಲಂಘನೆಯಾಗುತ್ತದೆ.
ಕಡ್ಡಾಯವಾಗಿ ಪೊಲೀಸ್ ಇಲಾಖೆ ವತಿಯಿಂದ ಮೈಕ್ ಪರವಾನಗಿ ಪಡೆದುಕೊಳ್ಳಬೇಕು.
ರಾತ್ರಿ 10 ಗಂಟೆ ಮೇಲ್ಪಟ್ಟ ಮೈಕ್ ಉಪಯೋಗಿಸಬೇಡಿ ಎಂದು ಸಲಹೆ ನೀಡಿದರು.
ಪಶು ವೈದ್ಯಾಧಿಕಾರಿ ಡಾ.ಆನಂದ ದೇವರನಾವದಗಿ ಮಾತನಾಡಿ ಜಾತ್ರೆ ಹೆಸರಿನಲ್ಲಿ ಕುರಿ, ಕೋಣ ಹಾಗೂ ಇನ್ನಿತರೆ ಪ್ರಾಣಿಗಳನ್ನು ಬಲಿ ನಿಷೇಧವಿದೆ.
ಪ್ರಾಣಿಗಳ ಬಲಿ ಮಾಡಿ ಎಲ್ಲೆಂದರಲ್ಲಿ ಬಿಸಾಡಿದರೆ ಇದರಿಂದ ಅನೇಕ ರೋಗರೂಜಿನಗಳು ಬರುತ್ತವೆ ಜಾಗೃತಿವಹಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ ರವಿ ಎಸ್ ಅಂಗಡಿ ಮಾತನಾಡಿ ಲೋಕಸಭಾ ಚುನಾವಣೆ ಪ್ರಯುಕ್ತ ಜಾತ್ರೆ ಹಾಗೂ ಚುನಾವಣೆ ಎರಡು ಏಕಕಾಲಕ್ಕೆ ಇರುವ ಕಾರಣ ಶಾಂತಿ ಸಭೆ ಕರೆಯಲಾಗಿದೆ ಜಾತ್ರೆ ಆಚರಣೆ ಮಾಡಲು ಯಾವುದೇ ಅಡ್ಡಿಯಿಲ್ಲ ಕಾರಣ ಪಕ್ಷದ ಪ್ರಚಾರಕ್ಕೆ ಜಾತ್ರೆ ಯನ್ನು ಬಳಿಸಿಕೊಳ್ಳದೇ ಸಮಿತಿಯವರು ಕಟ್ಟು ನಿಟ್ಟು ಪಾಲಿಸಬೇಕು ಎಂದು ಹೇಳಿದರು.
ಜಾತ್ರಾ ಆವರಣದಲ್ಲಿ ವಿವಿಧ ಪಕ್ಷದ ಸಾಮಗ್ರಿ ಗಳು ಕಂಡು ಬರದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷ ರವಿಕುಮಾರ ಹಿರೇಮಠ ಮಾತನಾಡಿ ಸುಮಾರು 64 ವರ್ಷಗಳ ಬಳಿಕೆ ಧಾರ್ಮಿಕ ವಿಧಿ ವಿಧಾನಗಳಿಂದ ಗ್ರಾಮ ದೇವತೆ ಜಾತ್ರೆ ಆಚರಿಸಲಾಗುತ್ತಿದೆ.
ಕುಷ್ಟಗಿ ಪಟ್ಟಣದ ಎಲ್ಲಾ ವರ್ಗದ ಜಾತಿಯವರು ಹಾಗೂ ಪಕ್ಷದವರು ಸೇರಿ ಲೋಕ ಕಲ್ಯಾಣಕ್ಕಾಗಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ಆಚರಣೆ ಮಾಡಲಾಗುತ್ತಿದೆ ಪೊಲೀಸ್ ಹಾಗೂ ಚುನಾವಣಾ ಇಲಾಖೆ ಅಧಿಕಾರಿಗಳ ಸಹಕಾರ ಬಹುಮುಖ್ಯ ಎಂದು ಹೇಳಿದರು.
ಜಾತ್ರೆಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ರಾಜಕೀಯ ಚಟುವಟಿಕೆ ನೆಡೆಸಲು ಅನುಮತಿ ಕೊಡುವುದಿಲ್ಲ ಇಲಾಖೆ ನಿಯಮಗಳುನ್ನು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಮುದ್ದುರಂಗಸ್ವಾಮಿ, ತಾಲೂಕು ಪಂಚಾಯಿತಿ ಇಓ ನಿಂಗಪ್ಪ ಮಸಳಿ, ಗ್ರೇಡ್-2 ತಹಶೀಲ್ದಾರ ಮುರಳೀಧರ ಮುಕ್ತೇದಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಚಂದ್ರ ಸಂಗನಾಳ, ಶರಣಯ್ಯ, ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ, ಪುರಸಭೆ ಮಾಜಿ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ, ಉಮೇಶ ಮಂಗಳೂರು, ಮರಸಣ್ಣ ತಾಳದ, ಪುರಸಭೆ ಸದಸ್ಯ ಜೆ.ಜೆ ಆಚಾರ್ಯ, ಅನ್ವರ್ ಅತ್ತಾರ, ನಾಗರಾಜ ಹಜಾಳ, ರಮೇಶ ಮೇಲಿನಮನಿ, ನರಸಿಂಹ ಕಾರಟಗಿ, ರಮೇಶ ಕೋನಸಾಗರ, ಮಹಾಂತಯ್ಯ ಅರಳಲೆಮಠ, ಸುರೇಶ ಮಂಗಳೂರು, ಚಂದ್ರಕಾಂತ ವಡಗೇರಿ, ಬಾಹುದ್ದೀನ್ ಬಾವಖಾನ ಹಾಗೂ ಕುಷ್ಟಗಿ ಪಟ್ಟಣದ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: