ಆನೆಗೊಂದಿ ಉತ್ಸವ: ಮಾರ್ಚ್ 8ರಿಂದ ಮಾ.10ರವರೆಗೆ ಕ್ರೀಡಾಕೂಟ
ಆನೆಗೊಂದಿ ಉತ್ಸವ-2024ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾರ್ಚ್ 8 ರಿಂದ ಮಾ.10ರ ವರೆಗೆ ಹಮ್ಮಿಕೊಳ್ಳಲಾಗಿದೆ.
*ಕ್ರೀಡೆಗಳ ವಿವರ:* ಮಾ.8ರಂದು ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ಜರುಗಲಿದೆ. ಮಾ.9ರ ಬೆಳಿಗ್ಗೆ 10 ಗಂಟೆಗೆ ಪುರುಷರ ಕುಸ್ತಿ, ಹಗ್ಗ-ಜಗ್ಗಾಟ, ಬಾಲ್ ಬ್ಯಾಡ್ಮಿಂಟನ್, ಮಕ್ಕಳಿಗೆ ಚಿತ್ರಕಲೆ ಹಾಗೂ ವಿಶೇಷಚೇತನರ ಕಬಡ್ಡಿ ಹಾಗೂ ಅಂದು ಸಂಜೆ 4 ಗಂಟೆಗೆ ಪುರುಷ ಮತ್ತು ಮಹಿಳಾ ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಮಾ.10ರ ಬೆಳಿಗ್ಗೆ 6.30 ಗಂಟೆಗೆ ಮ್ಯಾರಥಾನ್, ಬೆಳಿಗ್ಗೆ 10ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಪುರುಷರಿಗಾಗಿ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ನಡೆಯಲಿವೆ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
Comments are closed.