ಆನೆಗೊಂದಿ ಉತ್ಸವದಲ್ಲಿ ಈ ಬಾರಿ ವೈವಿಧ್ಯಮಯ  ಕಾರ್ಯಕ್ರಮಕ್ಕೆ ಯೋಜನೆ: ಜಿ.ಜನಾರ್ಧನ ರೆಡ್ಡಿ

Get real time updates directly on you device, subscribe now.

ಕೊಪ್ಪಳ, ಆನೆಗೊಂದಿ ಉತ್ಸವವನ್ನು ಅರ್ಥಗರ್ಭಿತ ಹಾಗೂ ವಿಜೃಂಭಣೆಯಿAದ ನಡೆಸಲು ನಾನಾ ವೈವಿಧ್ಯಮಯ ಕಾರ್ಯಕ್ರಮಕ್ಕೆ ಯೋಜಿಸಲಾಗಿದೆ ಎಂದು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಹೇಳಿದರು.
ಆನೆಗೊಂದಿ ಉತ್ಸವ-2024ರ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಣದಲ್ಲಿ ಮಾರ್ಚ್ 5ರಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಆನೆಗೊಂದಿ ಉತ್ಸವವನ್ನು ಮಾರ್ಚ್ 11 ಮತ್ತು 12ರಂದು ಎರಡು ದಿನಗಳ ಕಾಲ ಆನೆಗೊಂದಿ ಹೊರಭಾಗದ ತಳವಾರ ಘಟ್ಟದ ರಸ್ತೆಯಲ್ಲಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಆಚರಿಸಲಾಗುವುದು. ಉತ್ಸವದ ಮುಖ್ಯ ವೇದಿಕೆಗೆ ಆನೆಗೊಂದಿ ಸಂಸ್ಥಾನದ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು ಅವರ ಹೆಸರಿಡಲು ನಿರ್ಧರಿಸಲಾಗಿದೆ. ಹನುಮ ಜನ್ಮಸ್ಥಳವಾದ ಐತಿಹಾಸಿಕ ಅಂಜನಾದ್ರಿ ಬೆಟ್ಟ, ಕಿಷ್ಕಿಂದೆ, ಸುಗ್ರೀವ, ರಾಮಭಕ್ತೆ ಶಬರಿಯ ಹಾಗೂ ಐತಿಹಾಸಿಕ ತಾಣಗಳನ್ನು ಹೊಂದಿರುವ ಈ ಭಾಗದ ಸಂಸ್ಕೃತಿಯನ್ನು ಕಲಾವಿದರಿಂದ ನಾಟಕ ಮತ್ತು ನೃತ್ಯ ರೂಪಕಗಳೊಂದಿಗೆ ಅನಾವರಣಗೊಳಿಸಲಾಗುವುದು. ವಿಶೇಷವಾಗಿ ಶ್ರೀರಾಮ, ಸುಗ್ರೀವ, ಆಂಜನೇಯನ ದರ್ಶನ, ಶಬರಿ, ಪಂಪಾಂಬಿಕೆಯರ ಇತಿಹಾಸ, ವಾಲಿಯ ವಧೆ ಒಳಗೊಂಡಂತೆ ರಾಮಾಯಣ ಹಾಗೂ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.
ಆನೆಗೊಂದಿ ಉತ್ಸವವದ ಮೊದಲ ದಿನದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕರಾದ ಹಂಸಲೇಖ, ನಟ ದೃವ ಸರ್ಜಾ ಸೇರಿದಂತೆ ರಾಜ್ಯದ ಮತ್ತು ಸ್ಥಳೀಯ ಖ್ಯಾತ ಕಲಾವಿದರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೇ ದಿನ ನಟ ಶ್ರೀಮುರಳಿ, ಗಾಯಕ ಅರ್ಜುನ ಜನ್ಯಾ, ನಿರೂಪಕಿ ಅನುಶ್ರೀ ಸೇರಿದಂತೆ ಇತರ ಕಲಾವಿದರು ಹಾಗೂ ಕಲಾ ತಂಡಗಳಿಂದ ಸಂಗೀತ, ನೃತ್ಯ, ಭರತನಾಟ್ಯ ಒಳಗೊಂಡಂತೆ ವಿಭಿನ್ನ ರೀತಿಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಲ್ಲದೇ ಉತ್ಸವ ಅಂಗವಾಗಿ ಕ್ರೀಡಾಕೂಟ, ವಸ್ತುಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಠಿಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೊಡಿ, ಅಪರ ಜಿಲ್ಲಾಧಿಕಾಗಳಾದ ಸಾವಿತ್ರಿ ಬಿ ಕಡಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: