ಕಟ್ಟಡ ಕಾರ್ಮಿಕರ ಬೇಡಿಕೆ ದಿನದ ಅಂಗವಾಗಿ ಜಿಲ್ಲಾ ಆಡಳಿತ ಭವನದ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ

Get real time updates directly on you device, subscribe now.

.
ಕೊಪ್ಪಳ : ಫೆಬ್ರುವರಿ 29ರ ಕಟ್ಟಡ ಕಾರ್ಮಿಕರ ಬೇಡಿಕೆ ದಿನದ ಅಂಗವಾಗಿ ಜಿಲ್ಲಾ ಆಡಳಿತ ಭವನದ ಮುಂದೆ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ.ನಗರ. ಗ್ರಾಮೀಣ ಬಡಾವಣೆ ಘಟಕಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
    ಮನವಿಯಲ್ಲಿ ಅಖಿಲ ಭಾರತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಒಕ್ಕೂಟ (ಎಐಸಿಬಿಸಿಡಬ್ಲ್ಯೂ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಬೆಂಗಳೂರಿನ ಎಂ.ಸಿ.ನರಸಿಂಹನ್‌ ಸಭಾಂಗಣ (ಎಐಟಿಯುಸಿ) ರಾಜ್ಯ ಕೇಂದ್ರ ಕಛೇರಿ, ಶೇಷಾದ್ರಿಪುರಂ, ಬೆಂಗಳೂರಲ್ಲಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಕಾ॥ ಹೆಚ್.ಜಿ. ಉಮೇಶ್ ಅವರಗೆರೆ, ಕಾ॥ ವೆಂಕಟಸುಬ್ಬಯ್ಯ ಹಾಗೂ ಕಾ॥ ಶಂಕರ್‌ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 1 ಮತ್ತು 2, 2024 ರಂದು ನಡೆದ ಸಭೆಯಲ್ಲಿ ದೇಶದ ಹಲವು ರಾಜ್ಯಗಳಿಂದ ನಮ್ಮ ಸಂಘಟನೆಯ ನಾಯಕರುಗಳು ಭಾಗವಹಿಸಿ.ರಾಷ್ಟ್ರದಲ್ಲಿ ನಡೆಯುತ್ತಿರುವ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗೂ ಆಯಾ ರಾಜ್ಯಗಳ ರಾಜ್ಯ ಸರ್ಕಾರದ ನೀತಿಗಳ ಬಗ್ಗೆ. ಎರಡು ದಿನಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿ ಫೆಬ್ರುವರಿ 29, 2024ನೇ ದಿನವನ್ನು ಕಟ್ಟಡ ಕಾರ್ಮಿಕರ ಬೇಡಿಕೆ ದಿನವನ್ನಾಗಿ ಆಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ದಿನ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಲು ನಿರ್ಧರಿಸಿದಂತೆ ರಾಜ್ಯದಾದ್ಯಂತ ನಡೆದಂತೆ   ಕೊಪ್ಪಳ ಜಿಲ್ಲಾ ಆಡಳಿತ ಭವನದ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಲಾಯಿತು.1996ರ ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಮತ್ತು ಈ ಕಾಯ್ದೆಯನ್ನು ಕಾರ್ಮಿಕರ ವಿರುದ್ದವಾಗಿ ತಿದ್ದುಪಡಿಯಾಗದಂತೆ ನೋಡಿಕೊಳ್ಳುವುದು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಯೋಜನೆಗಳಿಗೆ ರಾಷ್ಟ್ರದ ಯಾವುದೇ ರಾಜ್ಯಗಳು ವಿನಿಯೋಗಿಸಬಾರದು. ನಿಜವಾಗಿ ಬೆವರು ಸುರಿಸಿ ದುಡಿದ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಮೀಸಲಿಡುವುದು.1996ರ ಮೂಲ ಸೆಸ್ ಕಾಯ್ದೆ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಈಗ ಇರುವ ಶೇ 1% ಸೆಸ್‌ನ್ನು ಶೇ 2% ಕ್ಕೆ ಹೆಚ್ಚಳ ಮಾಡುವುದು. ಹೆಚ್ಚಳ ಮಾಡಿದ ಸೆಸ್ ಹಣವನ್ನು ಕಾರ್ಮಿಕರ ಯೋಗ ಕ್ಷೇಮಕ್ಕೆ ಹೆಚ್ಚು ಗಣನೀಯವಾಗಿ ಆರ್ಥಿಕ ಬೆಂಬಲ ವೃದ್ಧಿಸಲು ಬಳಕೆಯಾಗಬೇಕು. ಪ್ರಸ್ತುತ ಇರುವ ಖಾಸಗೀ ಸೆಸ್ 10 ಲಕ್ಷ, ವಾಣಿಜ್ಯ ಸೆಸ್ 5 ಲಕ್ಷ ಸೆಸ್ ಸಂಗ್ರಹದ ಮಿತಿಯನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಮತ್ತು ಒಳಾಂಗಣ ಅಲಂಕಾರಕ್ಕೂ ಸೆಸ್ ಸಂಗ್ರಹಿಸಬೇಕು. ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಸೆಸ್ ಹಣ ಸಂಗ್ರಹಿಸಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಜಮಾ ಮಾಡಲು ಕಠಿಣ ಕ್ರಮ ಕೈಗೊಳ್ಳಬೇಕು.ಎಲ್ಲಾ ರಾಜ್ಯಗಳು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನನ್ನು ಮತ್ತು ಸೌಲಭ್ಯಗಳನ್ನು ಸಮಾನ ರೀತಿಯಲ್ಲಿ ವಿತರಿಸಬೇಕು. ಈಗ ನಮ್ಮ ರಾಜ್ಯದಲ್ಲಿರುವ ತಿಂಗಳ 3000 ಪಿಂಚಣಿಯನ್ನು ಕನಿಷ್ಠ 6000 ಸಾವಿರಕ್ಕೆ ಹೆಚ್ಚಳ ಮಾಡಬೇಕು.ಕಾರ್ಮಿಕ ಇಲಾಖೆಯ ಆಯುಕ್ತರ ಕಛೇರಿಯಲ್ಲಿ (ಎಐಸಿಬಿಸಿಡಬ್ಲ್ಯೂ) ನಮ್ಮ ಸಂಘಟನೆಯ ಸದಸ್ಯರನ್ನು ಎಲ್ಲಾ ರಾಜ್ಯದಲ್ಲಿ ಮಂಡಳಿ ಸದಸ್ಯರನ್ನಾಗಿ ನೇಮಿಸುವುದು. ಹಾಗೂ ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣು-ಗಂಡು ಎಂಬ ಭೇದ-ಭಾವವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು.ನಿರ್ಮಾಣ ಕಾರ್ಮಿಕರ ಬಾಕಿ ಇರುವ ಸೌಲಭ್ಯಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಮಂಡಳಿಯ ಅಧಿಕಾರಿಗಳು ಕೂಡಲೇ ವಿಲೇವಾರಿ ಮಾಡಬೇಕು. ರಾಷ್ಟ್ರೀಯ ಹಬ್ಬದ ದಿನವಾದ ದೀಪಾವಳಿಯ ಉಡುಗೊರೆಯಾಗಿ ಪ್ರತಿ ವರ್ಷ ₹ 10,000 ಸಾವಿರ ಬೋನಸ್ ನೀಡುವುದು, (ಈಗಾಗಲೇ ಈ ಸೌಲಭ್ಯ ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಯಲ್ಲಿದೆ.) ಕಟ್ಟಡ ಕಾರ್ಮಿಕರ ಮಂಡಳಿಯನ್ನು ಕಾರ್ಮಿಕ ಕಾನೂನುಗಳು ತಿದ್ದುಪಡಿಯಾಗಿರುವ 4 ಕೋಡ್‌ಗಳಿಗೆ ವಿಲೀನ ಮಾಡಬಾರದು.ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಈ ಹಿಂದೆ ಇದ್ದ ಹಾಗೆ ಮುಂದುವರಿಸುವುದು ಮತ್ತು ಕಡಿಮೆ ಮಾಡಿರುವುದನ್ನು ಮತ್ತೆ ವಾಪಸ್ ಪಡೆಯಬೇಕು.ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಖಾಸಗಿ ಆಸ್ಪತ್ರೆಗಳ ಆರೋಗ್ಯ ತಪಾಸಣೆಯನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರಿ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ನಡೆಸಬೇಕು ಮಂಡಳಿಯ ಹಣದಲ್ಲಿ ಯಾವುದೇ ರೀತಿಯ ಕಿಟ್‌ ಗಳನ್ನು ಖರೀದಿಸಬಾರದು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ.ತಾಲೂಕಾ ಸಂಚಾಲಕ ನೂರ್ ಸಾಬ್ ಹೊಸಮನಿ.ನಗರ ಸಂಚಾಲಕ ಮೌಲಾ ಹುಸೇನ್ ಹಣಗಿ.ನಗರ ಸಂಚಾಲಕ ಜಾಫರ್ ಕುರಿ. ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ಗೈಬು ಸಾಬ್ ಮಾಳೆಕೊಪ್ಪ.
ಗಿಣಿಗೇರಾ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ ಚೌಹಾಣ್. ಜಬ್ಬಲ್ ಗುಡ್ಡ ಗ್ರಾಮ ಘಟಕದ ಅಧ್ಯಕ್ಷ ಸುರೇಶ್ ಈಳಿಗೇರ. ಮದ್ದನೆಪ್ಪ .ಯಮನೂರಪ್ಪ. ನಾಗರಾಜ್ ಯಾದವ್. ಗಂಗಾಧರ ಪೂಜಾರ್. ಕವಲೂರ ಗ್ರಾಮ ಘಟಕದ ಮುಖಂಡ ಪಾನಿ ಶಾ ಮಕಾಂದಾರ್. ಶರಣಯ್ಯ ರಾಮಗೇರಿ ಮಠ. ಅಶೋಕ ಎಲಿಗಾರ. ಮಂಜುನಾಥ್ ವಡ್ಡರ್. ಶಿವನಗೌಡ ಪಾಟೀಲ್ ಓಜನಹಳ್ಳಿ. ಶ್ರೀದೇವಿ ಹೆಬ್ಬಾಳ. ರೇಣವ್ವ ಎಮ್. ಅಡ್ಡದೋಲಿ ಹೊಸ ಕನಕಪೂರ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: