ಕನಕಗಿರಿ ಉತ್ಸವ: ವಿವಿಧ ಕ್ರೀಡಾ ಸ್ಪರ್ಧೆಗಳ ಫಲಿತಾಂಶ ಪ್ರಕಟ

Get real time updates directly on you device, subscribe now.

 

— 
ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಹನುಮಸಾಗರ, ಹನುಮಸಾಗರ-ಎ ತಂಡಕ್ಕೆ ಪ್ರಥಮ ಸ್ಥಾನ
 : ಕನಕಗಿರಿ ಉತ್ಸವ-2024ರ ಅಂಗವಾಗಿ ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರದಂದು ನಡೆದ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪಲಿತಾಂಶ ಪ್ರಕಟವಾಗಿದೆ.
*ಪುರುಷ ವಿಭಾಗದ ಫಲಿತಾಂಶ:* ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷ ವಿಭಾಗದಲ್ಲಿ ಹನುಮಸಾಗರದ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕೊಪ್ಪಳ ತಂಡವು ದ್ವಿತೀಯ ಸ್ಥಾನ ಪಡೆದರೆ, ಹನುಮಸಾಗರದ ಮತ್ತೊಂದು ತಂಡ ತೃತಿಯ ಸ್ಥಾನವನ್ನು ಪಡೆದುಕೊಂಡಿದೆ.
*ಮಹಿಳಾ ವಿಭಾಗದ ಫಲಿತಾಂಶ:* ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಹನುಮಸಾಗರ-ಎ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಹನುಮಸಾಗರ-ಬಿ ತಂಡವು ದ್ವಿತೀಯ ಸ್ಥಾನ ಪಡೆದರೆ, ಗಂಗಾವತಿಯ ವೈಜೆಆರ್ ವಿದ್ಯಾನಗರ ತಂಡವು ತೃತಿಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕನಕಗಿರಿ ಉತ್ಸವದ ಕ್ರೀಡಾ ಸಮಿತಿ ಪ್ರಕಟಣೆ ತಿಳಿಸಿದೆ.

ಕಬಡ್ಡಿ ಸ್ಪರ್ಧೆ: ಯರಡೋಣಾ, ಗಂಗಾವತಿ ತಂಡಕ್ಕೆ ಪ್ರಥಮ ಸ್ಥಾನ

  ಕನಕಗಿರಿ ಉತ್ಸವ-2024ರ ಅಂಗವಾಗಿ ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರದಂದು ನಡೆದ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾವಳಿಯ ಪಲಿತಾಂಶ ಪ್ರಕಟವಾಗಿದೆ.
*ಪುರುಷ ವಿಭಾಗದ ಫಲಿತಾಂಶ:* ಕಬಡ್ಡಿ ಸ್ಪರ್ಧೆಯ ಪುರುಷ ವಿಭಾಗದಲ್ಲಿ ಯರಡೋಣಾ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಹೊಸಜೂರಟಗಿ ತಂಡವು ದ್ವಿತೀಯ ಸ್ಥಾನ ಪಡೆದರೆ, ರ‍್ಹಾಳ ತಂಡ ತೃತಿಯ ಸ್ಥಾನವನ್ನು ಪಡೆದುಕೊಂಡಿದೆ.
*ಮಹಿಳಾ ವಿಭಾಗದ ಫಲಿತಾಂಶ:* ಕಬಡ್ಡಿ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಗಂಗಾವತಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಯಲಬುರ್ಗಾದ ಕರಮುಡಿಯ ತಂಡವು ದ್ವಿತೀಯ ಸ್ಥಾನ ಪಡೆದರೆ, ತಾವರಗೇರಾ ತಂಡವು ತೃತಿಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕನಕಗಿರಿ ಉತ್ಸವದ ಕ್ರೀಡಾ ಸಮಿತಿ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: