ದೆಹಲಿ ರೈತರ ಹೋರಾಟ ಬೆಂಬಲಿಸಿ ಪಂಜಿನ ಮೆರವಣಿಗೆ
ಕೊಪ್ಪಳ: ದೆಹಲಿಯಲ್ಲಿ ನಡೆದಿರುವ ರೈತ ಚಳವಳಿಯ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ಪ್ಯಾಸಿಸ್ಟ್ ದಾಳಿಯನ್ನು ಖಂಡಿಸಿ, ಭಾರತ ಡಬ್ಲ್ಯೂ.ಟಿ.ಓ.ದಿಂದ ಹೊರ ಬರಲು ಒತ್ತಾಯಿಸಿ ಮಂಗಳವಾರ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದರಿಂದ ಸಂಯುಕ್ತ ಹೋರಾಟ ಕರ್ನಾಟಕ ಎಸ್.ಕೆ.ಎಮ್ ಕರೆಯ ಮೆರೆಗೆ ಕೊಪ್ಪಳ ನಗರದಲ್ಲಿ ಮಂಗಳವಾರ ಸಂಜೆ ಪಂಜಿನ ಪ್ರತಿಭಟನಾ ಮೆರವಣಿಗೆಯಲ್ಲಿ ಅಶೋಕ್ ವೃತ್ತ ದಿಂದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕನಕ ದಾಸ ವೃತ್ತದವರೆಗೆ ತೆರಳಿ ಬಹಿರಂಗ ಸಭೆ ನಡೆಸಲಾಯಿತು.
ಸಂಯುಕ್ತ ಕಿಸಾನ ಮೋರ್ಚಾದ (ಎಸ್.ಕೆ.ಎಮ್.) ಸಹಭಾಗಿಯ 300ಕ್ಕೂ ಹೆಚ್ಚಿನ ಸಂಘಟನೆಗಳ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಹೋರಾಟ 14 ನೇ ದಿನಗಳಲ್ಲಿ ಮುಂದುವರೆದಿದೆ. ರೈತ ಚಳವಳಿಯ ಮೇಲೆ ಮೋದಿ ಸರ್ಕಾರ ತೀವ್ರ ದಾಳಿ ನಡೆಸಿದೆ. ನಾಲ್ಕು ಜನ ರೈತರು ಸರ್ಕಾರದ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.ನೂರಾರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ.
2020 ರಲ್ಲಿ ನಡೆದ ಐತಿಹಾಸಿಕ ದೆಹಲಿ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, ಮೂರು ಕೃಷಿ ಕಾಯ್ದೆಗಳನ್ನು ವಾಪಸ ಪಡೆದುಕೊಂಡು ಉಳಿದ ಬೇಡಿಕೆಗೆ ಲಿಖಿತ ಭರವಸೆ ಕೊಟ್ಟಿತ್ತು. ಕೊಟ್ಟ ಮಾತು ತಪ್ಪಿ ದೇಶದ ವಿದ್ಯುತ್ತು ಕ್ಷೇತ್ರವನ್ನು ಖಾಸಗೀಕರಿಸುವ ಕಾರ್ಯ ಮಾಡಿದೆ.ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನ ಮಾಡುವ ಉದ್ದೇಶಿತ ಸಮಿತಿಯು ರೈತರೊಂದಿಗೆ ಒಂದು ಸಭೆ ಕೂಡ ನಡೆಸಿಲ್ಲ.ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ,ಎಪಿಎಂಸಿ.ತಿದ್ದುಪಡಿ ಕಾಯ್ದೆ.ಹೊಸ ಭೂ ಸುಧಾರಣೆ ಕಾಯ್ದೆಯಿಂದ ದೇಶದ ಕೃಷಿ ಅದಾನಿ.ಅಂಬಾನಿ ಪಾಲಾಗುತ್ತಿದೆ.
ದೇಶದಾದ್ಯಂತ ಅದಾನಿ ಗೋಡನಗಳಲ್ಲಿ ಸಂಗ್ರಹಗೊಂಡಿರುವ ಲಕ್ಷಾಂತರ ಮೆಟ್ರಿಕ್ ಟನ್ ಭತ್ತ ಮತ್ತು ಗೋಧಿಯ ಮಾರಾಟಕ್ಕೆ ಲಾಭ ಮಾಡುವ ಏಕೈಕ ಉದ್ದೇಶದಿಂದ ರೈತರಿಗೆ ವಂಚನೆ ಮಾಡಲಾಗುತ್ತಿದೆ.
ಈ ಕಾರಣದಿಂದಲೆ ಕೇಂದ್ರ ಸರ್ಕಾರ ಹತ್ತಿ, ಮೆಕ್ಕೆಜೋಳವನ್ನು ಮಾತ್ರ 5 ವರ್ಷ ಬೆಂಬಲ ಬೆಲೆಯಲ್ಲಿ ಖರೀದಿಸುವ ನಾಟಕದ ಮಾತುಕತೆಗೆ ಮುಂದಾಗಿದೆ.ರೈತರು ಸರ್ಕಾರದ ನಯ ವಂಚನೆಯ ರಾಜಕೀಯವನ್ನು ತಿರಸ್ಕರಿಸಿ ರಾಜಿರಹಿತ ಹೋರಾಟದಲ್ಲಿ ತೊಡಗಿದ್ದಾರೆ.
ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಪರಿಹರಿಸುವ ಮನಸ್ಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸರ್ಕಾರದ ಫ್ಯಾಸಿಸ್ಟ್ ನೀತಿಯ ವಿರುದ್ಧ ದೇಶದ ಜನರು ಬೀದಿಗಿಳಿಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ನಾಗರಾಜ್. ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್. ಕೆ.ವಿ.ಎಸ್. ರಾಜ್ಯ ಕಾರ್ಯದರ್ಶಿ ದುರ್ಗೇಶ್. ಗುರುಬಸವ. ಸುನಿಲ್ ಜೋಶಿ. ಶರಣಬಸವ. ಸಿಐಟಿಯು ತಾಲೂಕಾ ಕಾರ್ಯದರ್ಶಿ ಗೌಸ್ ಸಾಬ್ ನದಾಫ. ಕರ್ನಾಟಕ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ನರೇಗಲ್. ಅಲೆಮಾರಿ ಸಂಘದ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ. ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾಧ್ಯಕ್ಷ ನಿಂಗು ಜಿ.ಎಸ್. ಬೇಣಕಲ್. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ. ನಾಗರಾಜ್. ರಾಮಲಿಂಗಯ್ಯ ಶಾಸ್ತ್ರಿ ಮಠ ನೇತೃತ್ವದಲ್ಲಿ ಅನೇಕರು ಭಾಗವಹಿಸಿದ್ದರು.
Comments are closed.