ಸಮಾಜದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ: ನಾಗೇಶ ಕುಮಾರ
ಬಣ ಬಡಿದಾಟವಿಲ್ಲ: ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ
ಕೊಪ್ಪಳ: ಚುನಾವಣೆವರೆಗೂ ಮಾತ್ರ ಬಣ್ಣ ಬಡಿದಾಟವಿದ್ದು, ಈಗ ಚುನಾವಣೆ ಮುಗಿದಿದೆ. ನಮ್ಮ ಸಮಾಜದ ಅಭಿವೃದ್ಧಿಗೆ ಎಲ್ಲಾ ಬಣಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ವಿಶ್ವಕರ್ಮ ಸಮಾಜದ ಕೊಪ್ಪಳ ಜಿಲ್ಲಾ ಘಟಕದ ನೂತನ ಅಧ್ಯಕ್ಷ ನಾಗೇಶ ಕುಮಾರ ಗಂಗಾವತಿ ಹೇಳಿದರು.
ನಗರದ ಶಿರಸಪ್ಪಯ್ಯನಮಠದ ಆವರಣದಲ್ಲಿ ಮಂಗಳವಾರ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿ, ವಿಶ್ವಕರ್ಮ ಸಮಾಜದ ಸಾಂಸ್ಕೃತಿಕ ಪರಂಪರೆ ಅತ್ಯುನ್ನತವಾದದ್ದು. ಇಡೀ ವಿಶ್ವಕ್ಕೆ ಮಾದರಿಯಾದದ್ದು.
ಆದರೆ ನಮ್ಮಲ್ಲಿನ ಸಂಘಟನೆ ಕೊರತೆ, ಶೈಕ್ಷಣಿಕ ಹಿನ್ನೆಲೆಯು ಎಲ್ಲಾ ರಂಗದಲ್ಲಿ ಹಿಂದುಳಿಯುವಂತೆ ಮಾಡಿದೆ. ನಮ್ಮಕ್ಕಿಂತಲೂ ಸಣ್ಣ ಸಮಾಜಗಳು ಇಂದು ಮುಖ್ಯವಾಹಿನಿಯಲ್ಲಿವೆ. ಹೀಗಾಗಿ ನಮ್ಮ ಬಣ ಬಡಿದಾಟ ಪಕ್ಕಕ್ಕಿಟ್ಟು ಸಮಾಜ ಸಂಘಟನೆ, ಜಾಗೃತಿಗೊಳಿಸುವ ಕೆಲಸ ಮಾಡೋಣ.
ನಮ್ಮ ಘಟಕದ ಎಲ್ಲಾ ಪದಾಧಿಕಾರಿಗಳು ಅಧ್ಯಕ್ಷ ಸ್ಥಾನದ ಸರಿಸಮಾನರು. ಹೀಗಾಗಿ ಸಮಾಜದ ಸಂಘಟನೆಯೇ ನಮ್ಮ ಮುಖ್ಯಗುರಿಯಾಗಿರಬೇಕು. ವಿಶ್ವಕರ್ಮ ಸಮಾಜದ ಕೊಪ್ಪಳ ಜಿಲ್ಲಾ ಘಟಕಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದು ಪದಾಧಿಕಾರಿಗಳು ಕ್ರಮಬದ್ಧವಾಗಿ ಆಯ್ಕೆಯಾಗಿದ್ದಾರೆ.
ಬಹುಶಃ ಇಡೀ ರಾಜ್ಯದ ಇತಿಹಾಸದಲ್ಲಿ ಚುನಾವಣೆ ಮೂಲಕ ಕ್ರಮ ಬದ್ಧವಾಗಿ ಆಯ್ಕೆಯಾಗಿರುವ ಜಿಲ್ಲಾ ಘಟಕ ಯಾವುದಾದರೂ ಇದ್ದರೆ ಅದು ಕೇವಲ ಕೊಪ್ಪಳ ಮಾತ್ರ. ನಮ್ಮ ಕೊಪ್ಪಳ ಘಟಕವು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.
ಕೊಪ್ಪಳ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ಕೆಪಿಟಿಸಿಎಲ್ ನ ನಿವೃತ್ತ ನೌಕರ ಎ.ಪ್ರಕಾಶ್, ಗೌರವಾಧ್ಯಕ್ಷ ಈಶಪ್ಪ ಬಡಿಗೇರ, ಉಪಾಧ್ಯಕ್ಷರಾದ ರಾಮಚಂದ್ರ ಬಡಿಗೇರ ಕುಷ್ಟಗಿ, ಅಮರೇಶ ಕನಕಗಿರಿ, ವೀರೇಶ ಪತ್ತಾರ ಕಾರಟಗಿ ಸಹಕಾರ್ಯದರ್ಶಿ ಯಮನೂರಪ್ಪ, ಸಂಘಟನಾ ಕಾರ್ಯದರ್ಶಿ ಕಾಳಪ್ಪ ಪತ್ತಾರ, ಖಜಾಂಚಿ ಸ್ಥಾನಕ್ಕೆ ಮಂಜುನಾಥ ಪತ್ತಾರ ಮಾತನಾಡಿದರು.
ಪ್ರಮುಖರಾದ ಬಸವರಾಜ ಕೊಡೇಕಲ್, ಮಹಾದೇವಪ್ಪ ಕಮ್ಮಾರ್, ದೇವೇಂದ್ರಪ್ಪ ಬಡಿಗೇರ, ದೇವೇಂದ್ರಪ್ಪ ಕುಕನೂರು (ವಟಪರ್ವಿ) ರುದ್ರಪ್ಪ ಬಡಿಗೇರ, ಪ್ರಭಾಕರ ಬಡಿಗೇರ, ಗಂಗಾವತಿ ಸುನಿಲ್ ಕುಮಾರ ಪತ್ತಾರ, ಮಂಜುನಾಥ, ಓಂಕಾರ ಆಚಾರ, ಚಿದಂಬರ್, ಹನುಮೇಶ, ಶಶಿಧರ, ಸುರೇಶ ಅಕ್ಕಸಾಲಿ ಕಾರಟಗಿ ಇತರರು ಈ ಸಂದರ್ಭದಲ್ಲಿ ಇದ್ದರು.
Comments are closed.