ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕಕ್ಕೆ ಅವಿರೋಧ ಆಯ್ಕೆ : ನಾಗೇಶ ಕುಮಾರ ಅಧ್ಯಕ್ಷ ಎ.ಪ್ರಕಾಶ ಪ್ರಧಾನ ಕಾರ್ಯದರ್ಶಿ
ಕೊಪ್ಪಳ: ವಿಶ್ವಕರ್ಮ ಸಮಾಜದ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಸಂಬಂಧ ಮಂಗಳವಾರ ಇಲ್ಲಿನ ಸಿರಸಪ್ಪಯ್ಯನ ಮಠದ ವಿಶ್ವಕರ್ಮ ವಿದ್ಯಾರ್ಥಿ ವಸತಿ ನಿಲಯದಲ್ಲಿ ನಡೆದ ಚುನಾವಣೆಯಲ್ಲಿ ಒಂಭತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ವಿಶ್ವಕರ್ಮ ಸಮಾಜದ ಕೊಪ್ಪಳ ಜಿಲ್ಲಾ ಘಟಕಕ್ಕೆ ಗಂಗಾವತಿಯ ನಾಗೇಶ ಕುಮಾರ ಅಧ್ಯಕ್ಷ, ಕೆಪಿಟಿಸಿಎಲ್‌ನ ನಿವೃತ್ತ ನೌಕರ ಎ.ಪ್ರಕಾಶ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ಈಶಪ್ಪ ಬಡಿಗೇರ ಗೌರವಾಧ್ಯಕ್ಷರಾಗಿ ಆಯ್ಕೆಯಾದರು. ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿಗೆ ಮಂಗಳವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ವೆಂಕಾರೆಡ್ಡಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಎಸ್. ಎಫ್. ಸಂಗಟಿ ಕಾರ್ಯನಿರ್ವಹಿಸಿದರು.
ಅವಿರೋಧ ಆಯ್ಕೆ: ನಾಗೇಶ ಕುಮಾರ ಅಧ್ಯಕ್ಷ, ಕೆಪಿಟಿಸಿಎಲ್‌ನ ನಿವೃತ್ತ ನೌಕರ ಎ.ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ಈಶಪ್ಪ ಬಡಿಗೇರ ಗೌರವಾಧ್ಯಕ್ಷ, ರಾಮಚಂದ್ರ ಬಡಿಗೇರ ಕುಷ್ಟಗಿ, ಅಮರೇಶ ಕನಕಗಿರಿ, ವೀರೇಶ ಹತ್ತಾರ ಕಾರಟಗಿ ಉಪಾಧ್ಯಕ್ಷ (೩ ಸ್ಥಾನ), ಎ. ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ಯಮನೂರಪ್ಪ ಸಹಕಾರ್ಯದರ್ಶಿ, ಕಾಳಪ್ಪ ಪತ್ತಾರ ಸಂಘಟನಾ ಕಾರ್ಯದರ್ಶಿ, ಹಾಗೂ ಖಜಾಂಚಿ ಸ್ಥಾನಕ್ಕೆ ಮಂಜುನಾಥ ಪತ್ತಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಮಧ್ಯಾಹ್ನ ೧ ಗಂಟೆವರೆಗೂ ಅವಕಾಶ ನೀಡಲಾಗಿತ್ತು. ನಿಗಧಿತ ಅವಧಿಯಲ್ಲಿ ನಿಯೋಜಿತ ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಕಣದಲ್ಲಿ ಉಳಿದಿದ್ದ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಸೇರಿದಂತೆ ನಿರ್ದೇಶಕರಾದ ದೇವೇಂದ್ರಪ್ಪ ಕುಕನೂರು (ವಟಪರ್ವಿ) ಅವರನ್ನು ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರುದ್ರಪ್ಪ ಬಡಿಗೇರ, ದೇವೇಂದ್ರಪ್ಪ ಬಡಿಗೇರ ಕೊಪ್ಪಳ, ಶೇಖರಪ್ಪ ಬಡಿಗೇರ, ಡಾ. ಪ್ರಭು ಕರ್ಕಿಹಳ್ಳಿ, ಹಾಲೇಶ ಬಡಿಗೇರ, ಕಲ್ಲೇಶ ಬಡಿಗೇರ, ಹಮಿಗೇಶ ಬಡಿಗೇರ, ಮಂಜುನಾಥ ಬಡಿಗೇರ ಹಲಗೇರಿ, ವಿಶ್ವಕರ್ಮ ಅಭಿವೃದ್ದಿ ನಿಗಮದ ನಾಮ ನಿರ್ದೆಶಕ ಸದಸ್ಯ ಪ್ರಭಾಕರ ಬಡಿಗೇರ, ಉಮೇಶ, ಮಂಜುನಾಥ ಬನ್ನಿಕೊಪ್ಪ, ಬಸವರಾಜ, ಗಂಗಾವತಿ ಸುನಿಲ್ ಕುಮಾರ ಪತ್ತಾರ, ಮಂಜುನಾಥ, ಓಂಕಾರ ಆಚಾರ, ಚಿದಂಬರ್, ಹನುಮೇಶ, ಶಶಿಧರ, ಸುರೇಶ ಅಕ್ಕಸಾಲಿ ಕಾರಟಗಿ,
ಬಸವರಾಜ ಕೊಡೇಕಲ್, ಮಹಾದೇವಪ್ಪ ಕಮ್ಮಾರ್, ದೇವೇಂದ್ರಪ್ಪ ಬಡಿಗೇರ ಇತರರಿದ್ದರು.
Comments are closed.