ಸಂತ ಸೇವಾಲಾಲ್ ಮಹಾನ್ ಸಮಾಜ ಸುಧಾರಕ-ಮಾರುತಿ ಮ್ಯಾಗಳಮನಿ
ಕೊಪ್ಪಳ:-
ನಗರದ ಸರದಾರಗಲ್ಲಿ(ಕನ್ನಡ) ಶಾಲೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಹದಿನೆಂಟನೇ ಶತಮಾನದ ಬಂಜಾರ ಸಮುದಾಯದ ಮಹಾನ್ ಸಂತ ಸಮಾಜದಲ್ಲಿ ಇರುವಂತಹ ಮೂಡನಂಬಿಕೆಗಳನ್ನು ಹೋಗಲಾಡಿಸಿದರು, ಪುರುಷರು ಮಹಿಳೆಯರು ಎಲ್ಲರೂ ಸಮಾನರೆಂದು ತೋರಿಸಿಕೊಟ್ಟ ಸಂತರು, ಸತ್ಯ,ತ್ಯಾಗ,ದಯೆ, ಅನುಕಂಪ,ಅಹಿಂಸೆ ಹಾಗೂ ಯೋಗ ಸಾಧಕರಾಗಿದ್ದರು ಇಂಥ ಸಂತರ ಅನೇಕ ಸಾಮಾಜಿಕ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ 12ನೇ ಶತಮಾನದಲ್ಲಿ ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಅಳವಡಿಸಿಕೊಂಡು ಬದುಕಿದಂತಹ ಮಹಾನ್ ಸಂತರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಬಸವರಾಜ ಹೊಸಮನಿ,ಶ್ರೀಮತಿ ರತ್ನಮ್ಮ,ನರಸಿಂಗರಾವ್ ಕುಲಕರ್ಣಿ, ಶ್ರೀಮತಿ ಈರಮ್ಮ, ಕುಮಾರಿ ದೀಪ ಸಮೀರ ಹಾಗೂ ಎಲ್ಲಾ ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.