ಶ್ರೀ ಗವಿಮಠಕ್ಕೆ ಹರಿದು ಬಂದ ಭಕ್ತಸಾಗರ
ಶ್ರೀ ಗವಿಮಠದ ದಾಸೋಹದಲ್ಲಿ ೧೫ ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪ್ರಸಾದ ಸೇವನೆ
ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ದಿನಾಂಕ ೨೧.೦೧.೨೦೨೪ರಿಂದ೦೯.೦೨.೨೦೨೪ವರೆಗೆನಡೆದ ಶ್ರೀ ಮಠದಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸವಿದಿದ್ದಾರೆ. ಆರುಎಕರೆ ಪ್ರದೇಶ ವಿಸ್ತಾರಗೊಂಡ ಮಹಾದಾಸೋಹದಲ್ಲಿಸಾವಿರಾರುಭಕ್ತಾದಿಗಳು ಏಕಕಾಲದಲ್ಲಿ ಪ್ರಸಾದ ಸೇವಿಸಲು ಮಹಾದಾಸೋಹ ಸಜ್ಜಾಗಿತ್ತು.ಜನದಟ್ಟಣೆಯಾಗದಂತೆಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಾಗೂ ಹಿರಿಯನಾಗರಿಕರಿಗೆ ಪ್ರತ್ಯೇಕವಾದ ಮಾರ್ಗ ವ್ಯವಸ್ಥೆಯುಕೂಡ ಮಾಡಲಾಗಿತ್ತು.
ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್‌ಗಾರ್ಡನ್‌ನಲ್ಲಿ ಇರುವ ಮಹಾದಾಸೋಹವು ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆಕೊಠಡಿ, ತರಕಾರಿ ಸಂಗ್ರಹಣೆಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲುಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿತ್ತು.
ರೊಟ್ಟಿಜಾತ್ರೆಯೆಂದೇ ಪ್ರಸಿದ್ಧ ಅಜ್ಜನಜಾತ್ರೆಯಲ್ಲಿ ಬೃಹಾದಾಕಾರದ ೪೫*೫೦ ವಿಸ್ತೀರ್ಣದಕಟ್ಟಡದಲ್ಲಿ ನಾಡಿನ ಹಳ್ಳಿಗಳಿಂದ ಭಕ್ತರು ಭಕ್ತಿಪೂರ್ವಕವಾಗಿ ಸಲ್ಲಿಸಿದ ಎರಡುರೊಟ್ಟಿ ಸಂಗ್ರಹಣಾ ಕೋಣೆಗಳಿದ್ದವು. ಸಂಗ್ರಹವಾದ ಲಕ್ಷಾಂತರ ರೊಟ್ಟಿಗಳನ್ನು ಭಕ್ತರು ಸವಿದರು. ಪ್ರಸಾದ ವಿತರಣೆಗೆ ೭೬ ಕೌಂಟರಗಳನ್ನು ನಿರ್ಮಿಸಲಾಗಿತ್ತು.ಅದರಲ್ಲಿ ೪೦ ಕೌಂಟರಗಳು ಅನ್ನ ಸಾರು, ೩೬ ಕೌಂಟರಗಳು ಸಿಹಿ ಪದಾರ್ಥ ವಿತರಣೆಗೆ ಮೀಸಲಾಗಿದ್ದವು.
ಉತ್ತರಕರ್ನಾಟಕದ ಪ್ರಸಿದ್ಧ ಸಿಹಿ ಖಾದ್ಯವಾದ ಮಾದಲಿ ಜಾತ್ರೆಯ ವಿಶೇಷವೂ ಹೌದು.ಸುರಕ್ಷತೆ ಹಾಗೂ ಹೆಚ್ಚುದಿನ ಉಪಯುಕ್ತವಾಗಿ ಬಡಿಸಲುಅನುಕೂಲಕ್ಕಾಗಿಯೇ ೧೬*೬ ಅಡಿ ವಿಸ್ತೀರ್ಣದ ೩, ೨೦*೬ ಅಡಿ ವಿಸ್ತೀರ್ಣದ ೩ ಕಟ್ಟೆಗಳುಇದರಂತೆಒಟ್ಟು ೬ ಮಾದಲಿ ಕಟ್ಟೆಗಳು ನಿರ್ಮಾಣಗೊಂಡು ಸುಮಾರು ೫೦೦ಕ್ವಿಂಟಾಲ್‌ನಷ್ಟುಮಾದಲಿ ಪ್ರಸಾದಭಕ್ತರಿಗೆ ಪ್ರಸಾದ ವಿತರಣೆಯಾಗಿದೆ.
ಈ ಜಾತ್ರೆಯಮಹಾದಾಸೋಹದಲ್ಲಿ ಹಸಿದು ಬಂದ ಭಕ್ತರಿಗೆ ಸಂತೃಪ್ತಿಯಾಗುವಂತಹರೊಟ್ಟಿ, ಪಲ್ಯ, ಅನ್ನ, ಸಾಂಬರ್, ಕಡ್ಲಿಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿಚಟ್ನಿಉಪ್ಪಿನಕಾಯಿ, ಸಿಹಿ ಪದಾರ್ಥಗಳಾದ ಹುಗ್ಗಿ, ಸಿಹಿ ಬೂಂದಿ, ಶೇಂಗಾ ಹೋಳಿಗಿ, ಖರ್ಜಿಕಾಯಿ, ಮೈಸೂರು ಪಾಕ್, ರವೆಉಂಡಿ ಮುಂತಾದವುಗಳನ್ನು ಪ್ರಸಾದದಲ್ಲಿ ವಿತರಿಸಲಾಗಿತ್ತು.
ಕೊಪ್ಪಳ ಜಿಲ್ಲಾಡಳಿತ ಹಾಗೂ ನಗರಸಭೆಯ ಸಹಾಯದಿಂದ೭೦ ನೀರಿನ ಕೊಳಾಯಿ(ನಲ್ಲಿ) ಇರುವಎರಡು ನೀರಿನ ಕಟ್ಟೆಗಳು, ೫೦ ನೀರಿನ ಕೊಳಾಯಿ(ನಲ್ಲಿ)ಇರುವಒಂದುಕಟ್ಟೆಯನ್ನು ಸಿದ್ಧಗೊಳಿಸಲಾಗಿತ್ತು. ೨೫೦-೩೦೦ ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆಕಲ್ಪಿಸಲಾಗಿದ್ದು ವಿಶೇಷ.ಇದರೊಂದಿಗೆಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರತಿದಿನ ದಾಸೋಹದ ಪ್ರಸಾದವನ್ನುಆಹಾರಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗುತ್ತಿತ್ತು. ದಾಸೋಹ ಸಿದ್ಧಪಡಿಸುವ ಬಾಣಸಿಗರಿಗೆ ಸೂಕ್ತ ವಸತಿ ಹಾಗೂ ಸ್ನಾನ ಗೃಹ, ಶೌಚಾಲಯದ ಸೌಲಭ್ಯಕಲ್ಪಿಸಲಾಗಿತ್ತು. ಮಹಾದಾಸೋಹದಲ್ಲಿಎಲ್ಲಾಕಡೆಯಲ್ಲಿ ಸಿಸಿ ಕ್ಯಾಮರಾಗಳನ್ನು, ಉಚಿತಆರೋಗ್ಯತಪಾಸಣೆ ವ್ಯವಸ್ಥೆಕಲ್ಪಿಸಲಾಗಿತ್ತು.
ಇದೊಂದುಶಾಂತವಾಗಿ, ಅಷ್ಟೇ ಭಕ್ತಿಯಿಂದ,ಗದ್ದಲವಿಲ್ಲದೆಪ್ರಸಾದ ಸೇವಿಸುವ ಅಪರೂಪದದಾಸೋಹ. ದಿನಾಂಕ ೨೧.೦೧.೨೦೨೪ರಿಂದ ೦೯.೦೨.೨೦೨೪ ಅಮಾವಾಸ್ಯೆಯವರೆಗೆ ನಡೆದ ಈ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಸ್ವಯಂ ಶಿಸ್ತನ್ನು ಕಾಪಾಡಿಕೊಂಡು ಪ್ರಸಾದ ಸೇವಿಸಿರುವುದು ಈ ಜಾತ್ರೆಯ ವೈಶಿಷ್ಟ್ಯತೆ ಮತ್ತು ಪವಾಡವೇ ಸರಿ.
ಪ್ರತಿ ವರ್ಷದಂತೆ ಈ ವರ್ಷವೂ ಲಕ್ಷಾಂತರ ಭಕ್ತರಿಗೆ ಮಹಾದಾಸೋಹದಲ್ಲಿ ಮಿರ್ಚಿ ಸೇವೆ, ಹಳ್ಳಿ ಹಾಗೂ ನಗರಗಳಿಂದ ಆಗಮಿಸಿದ ಶ್ರೀ ಮಠದ ಸದ್ಭಕ್ತರು ವಿವಿಧರೀತಿಯ ಸೇವೆಗಳಾದ ತರಕಾರಿ ಹೆಚ್ಚುವ ಸೇವೆ, ಪ್ರಸಾದ ಬಡಿಸುವ ಸೇವೆ, ಸ್ವಚ್ಛತಾ ಸೇವೆ ಹೀಗೆ ವಿವಿಧ ಸೇವೆಗಳಲ್ಲಿ ತೊಡಗಿಕೊಂಡು, ಮಹಾದಾಸೋಹದತಯಾರಿಕೆಯಲ್ಲಿಕಟ್ಟಿಗೆಒಡೆಯುವ ಮೂಲಕ ಸೇವೆಗೈಯುವುದು, ಶ್ರೀ ಮಠದಆವರಣ, ಜಾತ್ರಾ ಮೈದಾನ, ಮಹಾರಥೋತ್ಸವ ಬೀದಿಹೀಗೆ ವಿವಿಧ ಸ್ಥಳಗಳಲ್ಲಿ ದೀಪದಅಲಂಕಾರ, ಬೆಳಕಿನ ವ್ಯವಸ್ಥೆ ಹೀಗೆ ಹಲವು ವಿಭಾಗಗಳಲ್ಲಿ ಭಕ್ತರುತಮ್ಮತಮ್ಮ ಶಕ್ತ್ಯಾನುಸಾರತನುಮನಧನ ಪೂರ್ವಕ ಸೇವೆ ಗೈದಿದ್ದು ಪ್ರಸ್ತುತ ವರ್ಷದಜಾತ್ರೆ ವಿಶೇಷವಾಗಿತ್ತು.ಕಣ್ಣೆದುರುಕಾಣುವ, ಸೇವೆಗೈಯುವ ಕೈಗಳಿಗಿಂತ ಕಾಣದೇಇರುವದೂರದಿಂದಲೇತಮ್ಮ ಭಕ್ತಿಯನ್ನು ವಿವಿಧ ರೂಪಗಳಲ್ಲಿ ಸಮರ್ಪಿಸುವತನ್ಮೂಲಕ ಮಹಾಮಹಿಮ ಶ್ರೀ ಗವಿಸಿದ್ಧೇಶ್ವರರ ಕೃಪೆಗೆ ಪಾತ್ರವಾಗುವ ಭಕ್ತರ ಸಂಖ್ಯೆ ಹೆಚ್ಚಿದೆ. ಇಂತಹ ಸದ್ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದೂಈ ಜಾತ್ರೆಯ ವೈಶಿಷ್ಟ್ಯತೆ ಮತ್ತು ಪವಾಡವೇ ಸರಿ.
ಕಳೆದ ವರ್ಷ ಮಹಾದಾಸೋಹದಲ್ಲಿ ಪ್ರಾರಂಭದಿಂದ ಮುಕ್ತಾಯದವರೆಗೆಖರ್ಚಾಗಿರುವಸಾಮಾಗ್ರಿಗಳ ಅಂದಾಜು ವಿವರಣೆ ಈ ಕೆಳಗಿನಂತಿದೆ.
೧. ರೊಟ್ಟಿ ಸುಮಾರು ೧೫ ರಿಂದ ೧೬ ಲಕ್ಷ
೨. ಶೇಂಗಾ ಹೋಳಿಗಿ ೧೦ಲಕ್ಷ
೩. ಮಿರ್ಚಿ ೫ಲಕ್ಷ
೪. ಅಕ್ಕಿ ೧೨೦೦ಕ್ವಿಂಟಾಲ್
೫. ಸಿಹಿ ಪದಾರ್ಥಗಳು ೯೦೦ ಕ್ವಿಂಟಾಲ್
೬. ತರಕಾರಿ ೪೦೦ ಕ್ವಿಂಟಾಲ್
೭. ದ್ವಿದಳ ಧಾನ್ಯಗಳು ೩೫೦ ಕ್ವಿಂಟಾಲ್
೮. ಹಾಲು ೧೫ ಸಾವಿರ ಲೀಟರ್
೯. ತುಪ್ಪ ೧೦೦೦ಕೆ.ಜಿ.
೧೦. ಉಪ್ಪಿನಕಾಯಿ ೫೦೦೦ ಕೆ.ಜಿ.
೧೧. ಪುಠಾಣಿಚಟ್ನಿ ೧೫ ಕ್ವಿಂಟಾಲ್.
೧೨. ಕೆಂಪು ಚಟ್ನಿ ೫ ಕ್ವಿಂಟಾಲ್
೧೩. ೨೦ ಕ್ವಿಂಟಾಲ್ ಕಡ್ಲೇಬೇಳೆ ಮಿರ್ಚಿ
ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಖ್ಯಾತವಾಗಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ದಿನಾಂಕ ೨೭.೦೧.೨೦೨೪ ರಂದು ಮಹಾರಥೋತ್ಸವಜರುಗಿತು.ಇಂದು ದಿನಾಂಕ: ೦೯.೦೨.೨೦೨೪ ರಂದುಅವರಾತ್ರಿಅಮವಾಸ್ಯೆಯ ನಿಮಿತ್ಯ ಲಕ್ಷಾಂತರಭಕ್ತರುಗದ್ದುಗೆದರ್ಶನ, ಮಹಾರಥೋತ್ಸವದರ್ಶನ, ಪರಮಪೂಜ್ಯರದರ್ಶನ ಮಾಡಿಕೊಂಡು ಮಹಾಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಶ್ರೀ ಗವಿಮಠದಆವರಣ, ಜಾತ್ರಾ ಮೈದಾನದಆವರಣ, ಜಾತ್ರಾಮಳಿಗೆಗಳ ಆವರಣ, ಮಹಾದಾಸೋಹದಆವರಣ, ಕೈಲಾಸ ಮಂಟಪ, ಧ್ಯಾನ ಮಂದಿರ ಹೀಗೆ ಎಲ್ಲೆಡೆಯೂ ಭಕ್ತಸಾಗರತುಂಬಿ ತುಳುಕುತ್ತಿತ್ತು. ಬೆಳಿಗ್ಗೆ ೬.೦೦ ಗಂಟೆಯಿಂದಲೇ ಶ್ರೀ ಮಠದಕರ್ತೃಗದ್ದುಗೆಯದರ್ಶನಕ್ಕೆ ಆಗಮಿಸಿದ ಭಕ್ತಸಮೂಹದದರ್ಶನರಾತ್ರಿ ೧೦.೦೦ ಗಂಟೆಯವರೆಗೂ ನಿರಂತರವಾಗಿತ್ತು.
Comments are closed.