ಶಿಕ್ಷಕ, ವಿದ್ಯಾರ್ಥಿಗಳ ಸಂಬಂಧ ವರ್ಣಿಸಲಾಗದು-ವೆಂಕಟೇಶ‌ ರಾಮಚಂದ್ರಪ್ಪ

Get real time updates directly on you device, subscribe now.

ಕನಕಗಿರಿ: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ‌ ಸಂಬಂಧವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ‌ ರಾಮಚಂದ್ರಪ್ಪ ತಿಳಿಸಿದರು.
ಇಲ್ಲಿನ‌ ಸರ್ಕಾರಿ‌ ಕಿರಿಯ ಪ್ರಾಥಮಿಕ ದ್ಯಾಮವ್ವನಗುಡಿ ಶಾಲೆಯ 2010ನೇ ಸಾಲಿನ 5ನೇ ತರಗತಿ ವಿದ್ಯಾರ್ಥಿಗಳು ಶುಕ್ರವಾರ ಆಯೋಜಿಸಿದ್ದ ಗುರುವಂದನೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ, ಸ್ನೇಹ ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ‌ ದೊರೆಯುತ್ತಿದೆ, ಪಾಲಕರು ಸರ್ಕಾರ ನೀಡುವ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನು ತಮ್ಮ‌ ಮಕ್ಕಳಿಗೆ ಕೊಡಿಸಿ ಉತ್ತಮ ಶಿಕ್ಷಣ‌ ಪಡೆಯುವಂತೆ ನೋಡಿಕೊಳ್ಳಬೇಕೆಂದು‌ ಹೇಳಿದರು.
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರತಿಯೊಬ್ಬರ ಶ್ರಮವಿದೆ, ಈ ನಿಟ್ಟಿನಲ್ಲಿ ಪಾಲಕರು ಶಿಕ್ಷಕರ ಕೈ ಬಲಪಡಿಸಬೇಕೆಂದು ಹೇಳಿದರು.
ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಗೌಡ, ಮುಖ್ಯಶಿಕ್ಷಕ ಬಸವರಾಜ‌ ಮೂಗುತಿ ಮಾತನಾಡಿ ಶಿಕ್ಷಕರಿಗೆ ನಿಜವಾದ ಅಸ್ತಿ ಎಂದರೆ ವಿದ್ಯಾರ್ಥಿಗಳೆ ಆಗಿದ್ದಾರೆ ಶಿಸ್ತು, ಸಂಯಮ, ಸಹನೆ, ತಾಳ್ಮೆಗಳಂತ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಸಾಧನೆ ಮಾಡಬೇಕೆಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ರಾಜಾಸಾಬ ನಂದಾಪುರ ಮಾತನಾಡಿ ಕ್ರಿಯಾಶೀಲತೆಗೆ
ದ್ಯಾಮವ್ವನಗುಡಿ ಶಾಲೆ ತಾಲ್ಲೂಕಿಗೆ ಮಾದರಿಯಾಗಿದೆ, ಗುಣಮಟ್ಟದ ಶಿಕ್ಷಣವನ್ನು ಶಾಲೆಯಲ್ಲಿ ನೀಡಲಾಗುತ್ತಿದೆ ಎಂದರು.
ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹೊನ್ನೂರುಹುಸೇನ. ಸುಳೇಕಲ್,
ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ,
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ,
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗಂ, ವರ್ಗಾವಣೆಗೊಂಡ ಶಿಕ್ಷಕರಾದ ನಾಗರತ್ನ ಪ್ರವೀಣಕುಮಾರ, ಹೇಮಾ ರಾಠೋಡ್, ಅಕ್ಕಮಹಾದೇವಿ ಕಲಾದಗಿ, ವಿದ್ಯಾರ್ಥಿಗಳಾದ ಕವಿತಾ, ಅನುಷಾ ಮಾತನಾಡಿದರು.
ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಷರೀಫ್ ಸಾಬ, ಹಜರತಬೀ, ರೇಷ್ಮಾ, ಹುಸೇನಬೀ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ತುಳಜಾ‌ನಾಯಕ್, ಶೇಖರಯ್ಯ, ಸುನೀತಾ ಪತ್ತಾರ, ಜಗದೀಶ ಕಿತ್ತೂರು, ಶೋಭಾ ಮೂಗುತಿ, ಇತರರು ಭಾಗವಹಿಸಿದ್ದರು.
ಕವಿತಾ ಕಮ್ಮಾರ ಪ್ರಾರ್ಥಿಸಿದರು.‌ ಹೊನ್ನುರುಹುಸೇನ ಹಾಗೂ ಅಕ್ಷತಾ ಸ್ವಾಗತಿಸಿದರು. ಹರ್ಷಿಯಾ ನದಾಪ್ ನಿರೂಪಿಸಿದರು‌.

Get real time updates directly on you device, subscribe now.

Comments are closed.

error: Content is protected !!