ಬಡ್ತಿ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ

Get real time updates directly on you device, subscribe now.


ಕೊಪ್ಪಳ: ವಿಕಲಚೇತನ ನೌಕರರಿಗೆ ಬಡ್ತಿ ನೀಡುವಲ್ಲಿ ಆಗಿರುವ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರು ಸೋಮವಾರ ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತನಾಡಿ,ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೪ ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಕೋರ್ಟ ಆದೇಶ ನೀಡಿದೆ.ಆದರೆ ಈ ಹಿಂದಿನ ಸರಕಾರವು ತರಾತುರಿಯಲ್ಲಿ ವಿಕಲಚೇತನ ನೌಕರರಲ್ಲಿ ಕೇವಲ ಸಿ ಮತ್ತು ಡಿ ದರ್ಜೇಯ ನೌಕರರಿಗೆ ಮಾತ್ರ ಆದೇಶ ಮಾಡುವ ಮೂಲಕ ಎ ಮತ್ತು ಬಿ ಹುದ್ದೆಗಳಿಗೆ ಬಡ್ತಿ ಸೌಲಭ್ಯವನ್ನು ನೀಡದೆ ವಿಕಲಚೇತನ ನೌಕರರರಲ್ಲೇ ತಾರತಮ್ಯ ಉಂಟು ಮಾಡಿದೆ.ವಿವಿಧ ಹುದ್ದೆಯಲ್ಲಿ ಕೆಲಸ ಮಾಡುವ ಎಲ್ಲಾ ವಿಕಲಚೇತನ ನೌಕರರಿಗೆ ಬಡ್ತಿ ಮೀಸಲಾತಿ ಆದೇಶ ಜಾರಿಗೆ ಮಾಡುವ ಮೂಲಕ ತಾರತಮ್ಯವನ್ನು ಹೋಗಲಾಡಿಸಬೇಕು,ವಿಕಲಚೇತನ ನೌಕರರಿಗೆ ವರ್ಗಾವಣೆ,ಬಡ್ತಿ ಸೇರಿದಂತೆ ಅನೇಕ ಪ್ರಕ್ರೀಯೆಯಲ್ಲಿ ಪದೇ ಪದೇ ಜಿಲ್ಲಾ ಆಸ್ಪತ್ರೆಯಿಂದ ತ್ರಿ ಸದಸ್ಯ ಮಂಡಳಿಯ ಅಂಗವೈಲ್ಯ ಪ್ರಮಾಣ ಪತ್ರವನ್ನು ಕೇಳುವುದನ್ನು ಬಿಟ್ಟು ಕೇಂದ್ರ ಸರಕಾರ ನೀಡಿದ ಯು.ಡಿ.ಐ.ಡಿ.ಕಾರ್ಡ ಅನ್ನು ಎಲ್ಲಾ ಇಲಾಖೆಯಲ್ಲಿ ಮಾನ್ಯ ಮಾಡುವಂತೆ ಸೂಚಿಸಬೇಕು,ಶಿಕ್ಷಕರ ವರ್ಗಾವಣೆಯಲ್ಲಿ ಸಾಮಾನ್ಯ ಶಿಕ್ಷಕರಿಗೆ ಇರುವ ನಿಯಮಗಗಳಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು,ವಿಕಲಚೇತನ ನೌಕರರಿಗೆ ಪ್ರತ್ಯೇಕ ವರ್ಗಾವಣೆಯ ನಿಯಮಗಳನ್ನು ರೂಪಿಸುವುದು ಸೇರಿದಂತೆ ಅನೇಕ ಬೇಡಿಕೆಗಳಿದ್ದು ಇವುಗಳ ಜೊತೆಯಲ್ಲಿ ಅನೇಕ ಸಮಸ್ಯೆಗಳಿದ್ದು ಆ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಜೊತೆ ಸಭೆ ಆಯೋಜನೆ ಮಾಡುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಾನವರು ಮಾತನಾಡುತ್ತಾ,ವಿಕಲಚೇತನ ನೌಕರರ ಬೇಡಿಕೆಗಳು ನ್ಯಾಯುತವಾದ ಬೇಡಿಕೆಗಳಾಗಿದ್ದು ಅವುಗಳ ಬಗ್ಗೆ ಗಮನ ಹರಿಸುವುದರ ಜೊತೆಯಲ್ಲಿ ಶೀಘ್ರದಲ್ಲೇ ಅಧಿಕಾರಿಗಳ ಜೊತೆಯಲ್ಲಿ ಸಭೆಯನ್ನು ಆಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ,ವಿಕಲಚೇತನ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!