ಶ್ರೀ ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ

Get real time updates directly on you device, subscribe now.


ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಮರುದಿನವೇ ಶ್ರೀ ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ಪುರಪ್ರದಕ್ಷಿಣೆ ನೆರವೇರಿತು. ನಾಡಿನ ಎಲ್ಲಾ ಭಕ್ತಾದಿಗಳಿಗೂ ದರ್ಶನ ಆಶಿರ್ವಾದ ಕರುಣಿಸುವುದು. ಜನ ಬಳಕೆಯಲ್ಲಿ ಇದನ್ನು ಸಿದ್ಧೇಶ್ವರ ಮೂರ್ತಿ ಮೆರವಣಿಗೆ ಎಂದೇ ಕರೆಯಲಾಗುತ್ತದೆ. ಪುರ ಪ್ರದಕ್ಷಿಣೆ ತರುವಾಯದಲ್ಲಿ ಶ್ರೀ ಮಠಕ್ಕೆ ಆಗಮಿಸುವ ಪೂರ್ವದಲ್ಲಿ ಜಾತ್ರಾ ಮಹೋತ್ಸವ ಜರುಗುವ ಬಲಭಾಗದ ಗುಡ್ಡದಲ್ಲಿ ದಶಮಿ ದಿಂಡನ್ನು ಮುಹೂರ್ತಗೊಳಿಸಲಾಯಿತು. ಗವಿಮಠದ ಮಧ್ಯ ಭಾಗದಲ್ಲಿ ಇರುವ ಬಣ್ಣದ ಗದ್ದುಗೆಯಲ್ಲಿ ವಿರಾಜಮಾನ ಮಾಡಲಾಯಿತು. ನಂತರ ತಾಯಂದಿರು ಆ ಮೂರ್ತಿಯನ್ನು ತೊಟ್ಟಿಲಲ್ಲಿ ಮೂಹೂರ್ತಗೊಳಿಸಿ ಶ್ರೀ ಗವಿಸಿದ್ಧೇಶ್ವರ ಜೋಗುಳ ಪದಗಳನ್ನ ಮನತುಂಬಿ ಹಾಡಿದರು. ಸಿದ್ಧೇಶ್ವರ ಮೂರ್ತಿಯ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!