ಸಾಲಬಾವಿ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಂದ ಅರಿವು

Get real time updates directly on you device, subscribe now.

Koppal  ವಾಂತಿ-ಭೇದಿ ಪ್ರಕರಣಗಳ ಹಿನ್ನಲೆ ಸಾಲಬಾವಿ ಗ್ರಾಮದಲ್ಲಿ ಜೂನ್ 15ರಂದು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಯಲಬುರ್ಗಾ ತಾಲೂಕಿನ ವಜ್ರಬಂಡಿ ಪ್ರಾತಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾಲಬಾವಿ ಗ್ರಾಮದಲ್ಲಿ ಕಂಡುಬಂದ ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣಗಳ ಹಿನ್ನಲೆಯಲ್ಲಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಕೈಗೊಂಡರು.
ಇದೇ ವೇಳೆ ಸಾರ್ವಜನಿಕರಿಗೆ ಕುದಿಸಿ ಆರಿಸಿದ ನೀರು ಕುಡಿಯುವ ಬಗ್ಗೆ, ಮನೆಯ ಒಳಗೂ ಮತ್ತು ಹೊರಗೂ ಸುತ್ತ-ಮುತ್ತಲೂ ಸ್ವಚ್ಛತೆ ಕಾಪಾಡುವ ಬಗ್ಗೆ, ಬಿಸಿ ಬಿಸಿಯಾದ ಆಹಾರ ಸೇವನೆ, ಕಡ್ಡಾಯವಾಗಿ ಎಲ್ಲರೂ ಶೌಚಾಲಯ ಬಳಸುವ ಬಗ್ಗೆ, ಶೌಚಾಲಯಕ್ಕೆ ಹೋಗಿಬಂದ ನಂತರ ಕೈಗಳಿಗೆ ಸೋಪು ಬಳಸಿ ಕೈತೊಳೆದುಕೊಳ್ಳುವಂತೆ ಹಾಗೂ ತೆರೆದಿಟ್ಟ ತಿಂಡಿ ತಿನಿಸುಗಳನ್ನು ತಿನ್ನದಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಗರ್ಭಿಣಿಯರು ಮತ್ತು 05 ವರ್ಷದ ಮಕ್ಕಳು ಹಾಗೂ ವೃದ್ದರು ಯಾರೇ ಆಗಲಿ ವಾಂತಿ-ಭೇದಿಯಾದರೆ ತಕ್ಷಣ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಗ್ರಾಮದ 156 ಮನೆಗಳನ್ನು ಸಮೀಕ್ಷೆ ಮಾಡಿ ಜಿಲ್ಲಾ ಮತ್ತು ತಾಲೂಕಾ ಮಟ್ಟಕ್ಕೆ ಸಲ್ಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: