ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ಸೂಚನೆ

Get real time updates directly on you device, subscribe now.

ಕೋವಿಶಿಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2 ಡೋಸ್ ಲಸಿಕೆ ಪಡೆದು 06 ತಿಂಗಳುಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು ಕಾರ್ಬೋವ್ಯಾಕ್ಸ್ ಲಸಿಕೆಯನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಎಚ್. ಅವರು ತಿಳಿಸಿದ್ದಾರೆ.
ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾಕರಣವನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇನ್ನೂ ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೆ ಉಳಿದಿರುವ 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಈ ಹಿಂದೆ ಕೋವಿಡ್-19 ಲಸಿಕೆಯನ್ನು ಪಡೆಯದೆ ಇರುವ ಆರೋಗ್ಯ ಕಾರ್ಯಕರ್ತೆಯರು ಕೋವಿಡ್-19 ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯದಂಚಿನಲ್ಲಿರುತ್ತಾರೆ. ಈ ಗುಂಪಿನ ಫಲಾನುಭವಿಗಳನ್ನು ಆದ್ಯತೆ ಮೇರೆಗೆ ರಕ್ಷಿಸಬೇಕಾಗಿದ್ದು, ಕೊಪ್ಪಳ ಜಿಲ್ಲೆಗೆ 520 ಡೋಸ್ ಕಾರ್ಬೋವ್ಯಾಕ್ಸ್ ಕೋವಿಡ್-19 ಲಸಿಕೆ ಸರಬರಾಜಾಗಿರುತ್ತವೆ. ಕಾರ್ಬೋವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ವಿಜಾತಿ (ಹೆಟೆರೊಲಾಗಸ್) ಮುನ್ನೆಚ್ಚರಿಕೆ ಡೋಸ್ ಆಗಿ ನೀಡಬಹುದಾಗಿರುತ್ತದೆ.
ಆದ್ದರಿಂದ ಕಾರ್ಬೋವ್ಯಾಕ್ಸ್ ಲಸಿಕೆಯು ಜಿಲ್ಲಾ ಆಸ್ಪತ್ರೆ ಕೊಪ್ಪಳ ಮತ್ತು ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಾ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಕೋವಿಶಿಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2 ಡೋಸ್ ಲಸಿಕೆ ಪಡೆದು 06 ತಿಂಗಳುಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲನುಭವಿಗಳು ಕಾರ್ಬೋವ್ಯಾಕ್ಸ್ ಲಸಿಕೆಯನ್ನು ಪಡೆಯಬಹುದಾಗಿರುತ್ತದೆ ಎಂದು ಡಿಎಚ್‌ಒ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!