ಗಂಗಾವತಿ : ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ತಕ್ಷಣ ಬಂಧಿಸಲು ಒತ್ತಾಯಿಸಿ ಜೆಡಿಎಸ್ ಮೌನ ಪ್ರತಿಭಟನೆ ನಡೆಸಿತು. ಗಂಗಾವತಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವ ಸಲ್ಲಿಸಿದ ತಾಲೂಕ ಅಧ್ಯಕ್ಷ ಶೇಖ್ ನಭಿ ನೇತೃತ್ವದ ಗಂಗಾವತಿ ತಾಲೂಕ ಜೆಡಿಎಸ್ ಘಟಕದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಗರ ಘಟಕ ಪದಾಧಿಕಾರಿಗಳು ಶ್ರೀರಂಗಪಟ್ಟಣದಲ್ಲಿ ಹನುಮಮಾಲಾ ದಿನದಂದು ಕಲ್ಲಡ್ಕ ಪ್ರಭಾಕರ ಭಟ್ ಭಾಷಣದಲ್ಲಿ ಮುಸ್ಲಿಂ ಮಹಿಳೆಯರಿಗೆ ಲೈಂಗಿಕ ಶಬ್ದ ಬಳಸಿ ಮಹಿಳಾ ಜಾತಿಗೆ ಅಗೌರವ ತೋರಿ ನಮ್ಮ ದೇಶದ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವ ಶಬ್ದವನ್ನು ಬಳಸಿ ಮತ್ತು ಮುಸ್ಲಿಂ ಸಮುದಾಯಕ್ಕೆ ನಿಂದನೆ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಣ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ .ದುರ್ಗಾಪ್ರಸಾದ. ಲೂಬೀನಾ ಯೂಸುಫ್. ಅಮೀನಬೇಗಂ ಸಿರೀನ ಶಂಶಾದಬೇಗಂ ಯೂಸುಫ್ ತಾಜುದ್ದೀನ್ ಚಂದ್ರಶೇಖರ ಅಯ್ಯೂಬ್ ಸಿಂಗಾರಿ ಅನ್ವರ್ ತಾರೀಖು ಪಟೇಲ್ ಬಾಷಾ ಗೌಸ್ ರುಬೀನಾ ಭಿಮಮ್ಮ ಶಾಹೀನ ಶುಕೂರ ಸಾಬ್ ಖೂದ್ದೂಸ ರಿಯಾಜ್ ನೂರು ಮೆಹೇರಾಜ್ ಸಮೀರ ಶಾಹೀದ್ ಖಾದರಬಿ ಹುಸೇಬಿ ಚಾಂದಬಿ ರಶೀದ್ ಖಾಸಿಂ ಬ ಸೇರಿದಂತೆ ಇತರರು ಭಾಗವಹಿಸಿದ್ದರು.
Sign in
Sign in
Recover your password.
A password will be e-mailed to you.
Comments are closed.