ಡಿಸೆಂಬರ್ 30ರವರೆಗೆ ತುಂಗಭದ್ರಾ ಡ್ಯಾಮನಿಂದ ನದಿಗೆ ನೀರು
—
ಕೊಪ್ಪಳ : ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ತಿಮ್ಮಾಪುರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಿರುವ ಪ್ರಯುಕ್ತ ಡಿಸೆಂಬರ್ 27 ರಿಂದ ಡಿಸೆಂಬರ್ 30ರವರೆಗೆ 0.20 ಟಿ.ಎಂ.ಸಿಯಷ್ಟು ನೀರನ್ನು ನದಿಗೆ ಬಿಡಲಾಗುವುದು, ಪ್ರಯುಕ್ತ ತುಂಗಭದ್ರಾ ಜಲಾಶಯದ ಕೆಳಭಾಗದ ಗ್ರಾಮಸ್ಥರು ನದಿ ಹತ್ತಿರ ಓಡಾಡಬಾರದು. ಜಾನುವಾರುಗಳನ್ನು ಸಹ ನದಿಯ ಹತ್ತಿರ ಓಡಾಡದಂತೆ ಮುಂಜಾಗ್ರತೆ ವಹಿಸಲು ಕೋರಲಾಗಿದೆ.
ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರ ನಿರ್ದೇಶನದಂತೆ ನದಿಗೆ ನೀರು ಬಿಡಲಾಗುತ್ತಿದೆ ಎಂದು ಅಧೀಕ್ಷಕ ಅಭಿಯಂತರರು, ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್ ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಎಲ್ ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.