ಬೇವೂರನಲ್ಲಿ ಯಲಬುರ್ಗಾ ಹೋಬಳಿ ವಿಸ್ತರಣಾ ಕೇಂದ್ರದ ನೂತನ ಕಚೇರಿ ಲೋಕಾರ್ಪಣೆ

Get real time updates directly on you device, subscribe now.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರ ವಿಶೇಷ ಪ್ರಯತ್ನದಿಂದಾಗಿ ಬೇವೂರಿನಲ್ಲಿ ಕಂದಾಯ ಇಲಾಖೆಯ ವಿಸ್ತರಣಾ ಕೇಂದ್ರವನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡುವಂತಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಹೇಳಿದರು.

ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರ ಗ್ರಾಮದಲ್ಲಿ ಯಲಬುರ್ಗಾ ಹೋಬಳಿ ವಿಸ್ತರಣಾ ಕೇಂದ್ರದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವರಾಜ ರಾಯರೆಡ್ಡಿ ಅವರು ಕೆಲಸಕ್ಕಾಗಿ ಮಾತು ಕೊಡುವ ವ್ಯಕ್ತಿತ್ವ ಹೊಂದಿದವರು. ಬೇವೂರನಲ್ಲಿ ನೂತನವಾಗಿ ವಿಸ್ತರಣಾ ಕೇಂದ್ರ ಮಾಡೇ ಮಾಡುತ್ತೇನೆಂದು ಮಾನ್ಯ ರಾಯರೆಡ್ಡಿ ಅವರು ಮಾತು ಕೊಟ್ಟಿದ್ದರು. ಅವರು ಜನರಿಗೆ ಮಾತು ಕೊಟ್ಟಿರುವುದನ್ನು ನಾವು ಉಳಿಸಬೇಕು. ಹಿರಿಯ ಶಾಸಕರಾದ ರಾಯರೆಡ್ಡಿ ಅವರು ಹೇಳಿರುವುದಕ್ಕೆ ಇಲ್ಲ ಎನ್ನಲಾಗುವುದಿಲ್ಲ. ಅದು ಗೌರವದ ಸಂಕೇತ ಎಂದು ಭಾವಿಸಿ ಮತ್ತು ರಾಯರೆಡ್ಡಿ ಅವರ ಒತ್ತಾಯಕ್ಕೆ ಮಣಿದು ಮಾನ್ಯ ಮುಖ್ಯಮಂತ್ರಿಗಳು ವಿಶೇಷ ವಿನಾಯಿತಿ ನೀಡಿ ಬೇವೂರನಲ್ಲಿ ವಿಸ್ತರಣಾ ಕೇಂದ್ರದ ಆರಂಭಕ್ಕೆ ಸಮ್ಮತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಈಗ ವಿಸ್ತರಣಾ ಕೇಂದ್ರಕ್ಕೆ ಗುರುತಿಸಿದ ಕಟ್ಟಡವು ಬಹಳಷ್ಟು ಸುಸಜ್ಜಿತವಾಗಿದೆ. ಒಂದು ತಾಲೂಕು ಕೇಂದ್ರದಷ್ಟು ಈ ಕೇಂದ್ರವು ಸುಸಜ್ಜಿತವಾಗಿದೆ. ಶಾಸಕರೇ ವಿಶೇಷ ಮುತುವರ್ಜಿ ವಹಿಸಿ ಈ ವಿಸ್ತರಣಾ ಕೇಂದ್ರದ ಉದ್ಘಾಟನೆಗೆ ಕಾರಣೀಕರ್ತರಾಗಿದ್ದಾರೆ. ಹಲವಾರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಇರುವ ಮಾನ್ಯ ರಾಯರೆಡ್ಡಿ ಅವರಿಗೆ ಸಾಕಷ್ಟು ಅನುಭವವಿದೆ. ಅವರ ಅನುಭವಕ್ಕೆ ಮತ್ತು ಹಿರಿತನದ ಬಗ್ಗೆ ಮುಖ್ಯಮಂತ್ರಿಗಳಿಗೆ ವಿಶೇಷ ಗೌರವವಿದೆ. ಯಾವುದೇ ಇಲಾಖೆಗಳ ಬಗ್ಗೆ ಯಾವುದೇ ವಿಷಯದ ಬಗ್ಗೆ ರಾಯರೆಡ್ಡಿ ಅವರಿಗೆ ಆಳವಾದ ಜ್ಞಾನವಿದೆ. ರಾಜ್ಯದಲ್ಲಿ ಆಡಳಿತ ಅಂದ್ರೆ ಏನು ಎಂಬುದರ ಬಗ್ಗೆ ಯಾರಿಗಾದರು ಮನವರಿಕೆ ಮಾಡುವಷ್ಟು ಅನುಭವ ಮತ್ತು ಸಾರ‍್ಥö್ಯವನ್ನು ರಾಯರೆಡ್ಡಿ ಅವರು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಯಲಬುರ್ಗಾ ತಾಲೂಕಿನಲ್ಲಿ ವಿನೂತನ ಯೋಜನೆಗಳು ಅನುಷ್ಠಾನವಾಗುತ್ತಿವೆ. ಇದಕ್ಕೆ ಬೇವೂರಿನಲ್ಲಿ ಇಂದು ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಒಳ್ಳೆಯ ರಾಜಕೀಯ ಪರಂಪರೆ ಇರುವ ನಾಡು ನಮ್ಮದು. ಆಡಳಿತದಲ್ಲಿ ಇಡಿ ದೇಶಕ್ಕೆ ಮಾದರಿಯಾದ ರಾಜ್ಯ ನಮ್ಮದು. ಕಾಲಾನಂತರದಲ್ಲಿ ಕೆಲವು ಬದಲಾವಣೆಗಳಾಗಿವೆ. ರಾಜಕೀಯ ವಾತಾವರಣ ನೋಡಿದರೆ ಮೊದಲು ಇದ್ದಂತ ಘನತೆ ಗೌರವ ಈಗ ಕಡಿಮೆ ಆಗಿದೆ. ರಾಜಕೀಯ ವ್ಯಕ್ತಿಗಳಲ್ಲಿ ಇದ್ದಂತಹ ಗುಣ ನಡತೆಗಳು ಸಹ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗಿವೆ. ಇದೆಲ್ಲದರ ನಡುವೆಯೂ ಸಾರ್ವಜನಿಕ ಜೀವನದಲ್ಲಿ ನಮ್ಮ ಕೆಲಸವನ್ನು ನಾವು ಮುಂದುವರೆಸಿಕೊAಡು ಹೋಗಲೇಬೇಕಿದೆ. ರಾಜಕೀಯ ಜೀವನದಲ್ಲಿ ಅನೇಕ ಹಿರಿಕರೊಡನೆ ರಾಯರೆಡ್ಡಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ರಾಜಕೀಯ ಜೀವನಕ್ಕೆ ಕರ್ನಾಟಕದಲ್ಲಿ ಮಾನ್ಯ ಬಸವರಾಜ ರಾಯರೆಡ್ಡಿ ಅವರು ಆಸ್ತಿ ಎಂದು ಕೃಷ್ಣ ಭೈರೇಗೌಡ ಅವರು ರಾಯರೆಡ್ಡಿ ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ರಾಜ್ಯದಲ್ಲಿ ಈ ರೀತಿಯಲ್ಲಿ ಹೊಸ ಹೋಬಳಿಯನ್ನಾಗಿ ಮಾಡಬೇಕು ಎಂದು ಸಾಕಷ್ಟು ಕಡೆ ಬೇಡಿಕೆ ಇದೆ. ಹೊಸ ತಾಲೂಕುಗಳ ಹೊಸ ಜಿಲ್ಲೆಗಳ ಬೇಡಿಕೆ ಇದೆ. ಆದರೆ ಈ ಹಿಂದೆ ಘೋಷಿಸಿದ ಕೆಲವ ತಾಲೂಕುಗಳಿಗೆ ಸಹ ಮೂಲಭೂತ ಸೌಕರ್ಯ ಕಲ್ಪಿಸುವುದು ಇನ್ನೂ ಬಾಕಿ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಬರೀ ಹೊಸ ತಾಲೂಕು ಘೋಷಣೆ ಮಾಡಿದರೆ ಸಾಲದು ಅದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದರ ಬಗ್ಗೆ ಯೋಚಿಸಿ ಘೋಷಣೆ ಮಾಡುವುದು ಸೂಕ್ತ ನ್ಯಾಯ ಎಂಬುದಾಗಿ ಮುಖ್ಯಮಂತ್ರಿಗಳು ನಿಲುವು ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಬೇವೂರಿನಲ್ಲಿ ಒಂದು ಹೋಬಳಿ ಕೇಂದ್ರವಾಗಿ ಜನತೆಗೆ ಕಂದಾಯ ಇಲಾಖೆಯ ಸೇವೆ ಸಿಗಲಿ ಎನ್ನುವ ಒತ್ತಾಯ ಈ ಭಾಗದಲ್ಲಿ ಎರಡ್ಮೂರು ವರ್ಷಗಳಿಂದ ಇತ್ತು. ಈ ಹಿಂದೆ ಬೇವೂರ ಗ್ರಾಮಸ್ಥರಿಗೆ ಮಾತು ಕೊಟ್ಟಂತೆ ಗ್ರಾಮಸ್ಥರ ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಕೇಳಿದ್ದೆ. ಬೇವೂರಿನ 11 ಹಳ್ಳಿಗಳು ಯಲಬುರ್ಗಾದಲ್ಲಿಯೇ ಉಳಿದಿದ್ದರಿಂದ ಇವರೆಲ್ಲರೂ ಯಲಬುರ್ಗಾ ಹೋಬಳಿಗೆ ಹೋಗುವ ಪರಿಸ್ಥಿತಿ ಇದೆ. ಜನರಿಗೆ ಅನಾನುಕೂಲತೆ ಆಗುತ್ತಿದೆ ಎಂದು ಅರಿತು ಇಲ್ಲಿ ಹೋಬಳಿ ಸೇವಾ ಕೇಂದ್ರ ತೆರೆಯುವ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿದಾಗ ಮುಖ್ಯಮಂತ್ರಿಗಳು ತಮ್ಮ ಒತ್ತಾಯದಂತೆ ಮಹತ್ವದ ಹೋಬಳಿ ಸೇವಾ ಕೇಂದ್ರದ ಆರಂಭಕ್ಕೆ ಅನುಮತಿ ನೀಡಿದ್ದರಿಂದ ಸೇವಾ ಕೇಂದ್ರವು ಕಾರ್ಯಾನುಷ್ಠಾನವಾಗುತ್ತಿರುವುದು ಸಂತಸ ತಂದಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆ ಇಲ್ಲದೇ ಒಂದು ಹೋಬಳಿ ಸೇವಾ ಕೇಂದ್ರ ಆರಂಭಿಸಿದ ಕೀರ್ತಿ ನಮಗೆ ಸಲುತ್ತದೆ. ಈ ಕೇಂದ್ರಕ್ಕೆ ಚಾಲನೆ ನೀಡಲು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದು ವಿಶೇಷ ಸಂಗತಿಯಾಗಿದೆ. ಕೃಷ್ಣ ಭೈರೇಗೌಡ ಅವರು ಉತ್ತಮ ವಿಚಾರವಂತರು; ಉತ್ತಮ ಆಡಳಿತಗಾರರು. ಬಹುಮುಖ್ಯವಾಗಿ ಅತ್ಯಂತ ಸರಳವಾಗಿರುವವರು. ಅವರ ತಂದೆ ಆರು ಬಾರಿ ಶಾಸಕರಾಗಿದ್ದರು. 1985 ರಿಂದ 1999ರವರೆಗೆ ಅವರ ತಂದೆಯವರೊAದಿಗೆ ಕೆಲವು ಕಾಲ ಶಾಸಕನಾಗಿ ಕೆಲಸ ಮಾಡಿದ ಹೆಮ್ಮೆ ನನ್ನದು. ಸಮಯಕ್ಕೆ ಅತ್ಯಂತ ಮಹತ್ವ ನೀಡುವ ಕೃಷ್ಣ ಭೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಬೇರೆ ಬೇರೆ ಬದಲಾವಣೆ ಮಾಡಿ ಒಂದು ಶಿಸ್ತನ್ನು ತರುತ್ತಿದ್ದಾರೆ. ಕೃಷ್ಣ ಭೈರೇಗೌಡ ಅವರ ಕಾರ್ಯವೈಖರಿ, ಅವರು ಆಡಳಿತ ನಡೆಸುವ ರೀತಿಯು ಭಿನ್ನತೆಯಿಂದ ಕೂಡಿದೆ ಎಂಬುದಕ್ಕೆ ಕಂದಾಯ ಇಲಾಖೆಯಲ್ಲಿ ಆಗಿರುವ ಬದಲಾವಣೆಗಳೇ ಸಾಕ್ಷಿಯಾಗಿವೆ ಎಂದು ರಾಯರೆಡ್ಡಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಭೂಮಾಪನ ಕಂದಾಯ ವ್ಯವಸ್ಥೆಯ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತರಾದ ಜೆ. ಮಂಜುನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಭೂ ದಾಖಲೆ ಇಲಾಖೆಯ ಜಂಟಿ ನಿರ್ದೇಶಕರಾದ ಈ ಪ್ರಕಾಶ, ಉಪ ನಿರ್ದೇಶಕರಾದ ದೇವರಾಜ, ಬೇವೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂದಮ್ಮ ಗವಿಸಿದ್ದಪ್ಪ ಬಳಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿಶೇಷ ಮೆರವಣಿಗೆ: ಶಾಸಕರಾದ ಬಸವರಾಜ ರಾಯರೆಡ್ಡಿ ಅವರೊಂದಿಗೆ ಸಚಿವರಾದ ಕೃಷ್ಣ ಭೈರೇಗೌಡ ಅವರ ಬೇವೂರ ಗ್ರಾಮಕ್ಕೆ ಆಗಮಿಸಿದಾಗ ಬೇವೂರ ಗ್ರಾಮಸ್ಥರು ಗ್ರಾಮದ ಬಸ್ ನಿಲ್ದಾಣದಲ್ಲಿ ಆತ್ಮೀಯತೆಯಿಂದ ಸ್ವಾಗತಿಸಿದರು. ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳ ಮೂಲಕ ಸಚಿವರು ಮತ್ತು ಶಾಸಕರನ್ನು ವೇದಿಕೆ ಕರೆ ತಂದರು. ರಿಬ್ಬನ್ ಕತ್ತರಿಸುವ ಮೂಲಕ ಸಚಿವರು ಮೊದಲಿಗೆ ವಿಸ್ತರಣಾ ಕೇಂದ್ರದ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ವಿಸ್ತರಣಾ ಕೇಂದ್ರದ ಅಂಗಳದಲ್ಲಿ ಸಸಿ ನೆಟ್ಟರು. ಆ ಬಳಿಕ ವೇದಿಕೆಯ ಕಾರ್ಯಕ್ರಮ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: