ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೊದಲ ವರ್ಷದ ವಾರ್ಷಿಕೋತ್ಸವದ
ಬಳ್ಳಾರಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೊದಲನೇ ವರ್ಷದ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಡಿಸೆಂಬರ್ 25ಕ್ಕೆ ಮೊದಲನೇ ವಸಂತ ಸಂಪೂರ್ಣವಾಗಿದೆ, ಈ ಶುಭ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕರು ಹಾಗೂ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ಅರುಣಾರವರ ಮಾರ್ಗದರ್ಶನದಂತೆ ರಾಜ್ಯ ಪದಾಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ನಗರದ ಸ್ವಚ್ಛತೆ ಮತ್ತು ನಮ್ಮ ಪರಿಸರದ ಸ್ವಾಸ್ಥತೆ ಕಾಪಾಡುವ ಪೌರ ಕಾರ್ಮಿಕ ತಾಯಂದಿರಿಗೆ ಸೀರೆ ವಿತರಣೆ ಮಾಡಿದರು.
ಪಕ್ಷದ ಮೊದಲ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಡಿ. ವಿಜಯಕುಮಾರ್ ರವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರ್ಪಡೆಯಾದರು.
ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿಗಳಾದ ರಾಜಶೇಖರಗೌಡರವರ ನೇತೃತ್ವದಲ್ಲಿ, ರಾಜ್ಯ ಉಪಾಧ್ಯಕ್ಷರಾದ ಮುನ್ನಾಬಾಯ್ ರವರು, ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಭೀಮಾಶಂಕರ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಆಚಾರ್, ಹುಂಡೇಕರ್ ರಾಜೇಶ್, ಜಿಲ್ಲಾ ಉಪಾಧ್ಯಕ್ಷರಾದ ದರೂರು ಶಾಂತನಗೌಡ, ಉಮಾರಾಜ್, ಪ್ರಭುಶೇಖರ್ ಗೌಡ, ಗೌಳಿ ಚಂದ್ರ, ಪಿ.ವಿ ಶ್ರೀನಿವಾಸುಲು, ಜೆ.ತಿಮ್ಮಪ್ಪ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷರಾದ ರೋಸಿರೆಡ್ಡಿ, ಜಿಲ್ಲೆ ಖಜಾಂಚಿ ಸತೀಶ್, ಕಾರ್ಯದರ್ಶಿಗಳಾದ ಗೋವಿಂದರಾಜು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶೇಕ್ ದಾದಾಪೀರ್, ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಬಿ.ರಾಘವೇಂದ್ರ, ಹಿಂದುಳಿದ ವರ್ಗಗಳ ಶಕ್ತಿ ಘಟಕದ ಅಧ್ಯಕ್ಷರಾದ ಕೊಳಗಲ್ ಆಂಜಿನಿ, ಓಬಿಸಿ ಪ್ರಧಾನ ಕಾರ್ಯದರ್ಶಿ ಉಪ್ಪಾರ್ ಹನುಮೇಶ್, ನರಸಿಂಹ ಬಾಬು, ಕಾರ್ಯಾಲಯ ಕಾರ್ಯದರ್ಶಿ ವೀರಶೇಖರ್ ರೆಡ್ದಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
Comments are closed.