ಧರ್ಮಗಳು ಮನುಷ್ಯರನ್ನು ಮಾನವೀಯರನ್ನಾಗಿಸುತ್ತದೆ – ಝೈನ್ ಮುಈನಿ

Get real time updates directly on you device, subscribe now.

ಕೊಪ್ಪಳ : ಧರ್ಮಗಳು ಮನುಷ್ಯರನ್ನು ಮಾನವೀಯರನ್ನಾಗಿಸುತ್ತದೆ ಎಂದು ಗಂಗಾವತಿಯ ಮಸ್ ದರ್ ಎಜು ಆ್ಯಂಡ್ ಚಾರಿಟಿ ಸಂಸ್ಥೆಯ ಉಪನ್ಯಾಸಕ ಹಾಗೂ ವಾರ್ತಾಭಾರತಿ ಪತ್ರಿಕೆಯ ಮಾಜಿ ಉಪ ಸಂಪಾದಕ ಝೈನ್ ಮುಈನಿ ಸಖಾಫಿ ಮಂಗಳೂರು ಹೇಳಿದರು.
      ಭಾಗ್ಯನಗರ ಬಳಿಯ ನವ ನಗರದಲ್ಲಿ ಸೋಮವಾರ ಇರುವಾತನು ಚರ್ಚ ಹಾಗೂ ಜಿಲ್ಲಾ ಭ್ರಾತೃತ್ವ ಸಮಿತಿ ಜಂಟಿಯಾಗಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸರ್ವ ಧರ್ಮಗಳ ಸೌಹಾರ್ದತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಂದುವರೆದು ಮಾತನಾಡಿ
 ದಯೆ ಧರ್ಮದ ಮೂಲ ತತ್ವ. ಮುಹಮ್ಮದ್ ಪೈಗಂಬರ್. ಜೀಸಸ್. ಬುದ್ಧ.ಬಸವ.ರಾಮಕೃಷ್ಣ ಪರಮಹಂಸ ರಂತಹ ಮೊದಲಾದ ದಾರ್ಶನಿಕರು ಮನುಷ್ಯರನ್ನು ಪ್ರೀತಿಸಲು ಕಲಿಸಿಕೊಟ್ಟರು‌.ಇಂತಹ ಮಹಾನುಭಾವರ ಚಿಂತನೆಯ ಬೆಳಕಿನಲ್ಲಿ ನಾವಿಂದು ಸಾಗಬೇಕಿದೆ‌.
ಭಾರತದಲ್ಲಿ ಧಾರ್ಮಿಕ ಆಚರಣೆಗಳು ದೇಶದ ಬಹುತ್ವವನ್ನು ಕಾಪಾಡಿಕೊಂಡು ಬಂದಿದೆ. ಈದ್.ದೀಪಾವಳಿ. ಕ್ರಿಸ್ ಮಸ್ ಮೊದಲಾದ ಆಚರಣೆಗಳು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗದೇ ಎಲ್ಲರ ಹಬ್ಬಗಳಾಗಿ ಆಚರಿಸಲಾಗುತ್ತದೆ. ಈ ಹಬ್ಬಗಳು ಎಲ್ಲರ ಮನಸ್ಸುಗಳನ್ನು ಬೆಸೆಯುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು‌.
           ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಪ್ರಸ್ತಾವಿಕವಾಗಿ ಮಾತನಾಡಿ ಹಿಂದೂ ಮುಸ್ಲಿಮ್ ಕ್ರೈಸ್ತರೆಲ್ಲರೂ ಪರಸ್ಪರ ಹೊಂದಿಕೊಂಡು.ಧರ್ಮಗಳ ಮಧ್ಯ ಸಂಯೋಜನೆಗೊಂಡು. ಕೂಡಿ ಬಾಳುವಂತಾಗಲಿ. ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಬೇರೆ ಅಲ್ಲ ಎಲ್ಲರೂ ಒಟ್ಟುಗೂಡಿ ಪ್ರತಿಯೊಂದು ಹಂತಗಳಲ್ಲಿ ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿಕೊಳ್ಳುವಂತೆ ಕ್ರಿಸ್ ಮಸ್ ಹಬ್ಬ ಆಚರಿಸಲಾಗುತ್ತಿದೆ. ಸೌಹಾರ್ದತೆ ಅಂದರೆ ಕೆಲವರಲ್ಲಿ ಸಂಶಯ ಮೂಡುತ್ತದೆ.ಒಂದು ಧರ್ಮದವರು ಇನ್ನೊಂದು ಧರ್ಮ ಪಾಲನೆ ಮಾಡುವುದಲ್ಲ ತಮ್ಮ ಧರ್ಮಗಳನ್ನು ಪರಿಪೂರ್ಣವಾಗಿ ಪಾಲನೆ ಮಾಡುವುದರ ಜೊತೆಗೆ ಇನ್ನೊಂದು ಧರ್ಮ.ಹಬ್ಬಗಳನ್ನು ಗೌರವಿಸುತ್ತಾ ಎಲ್ಲಾ ಧರ್ಮದವರೊ ಒಳಗೊಳ್ಳುವಂತೆ ಭ್ರಾತೃತ್ವ ಸಮಿತಿಯಿಂದ ಹಬ್ಬವನ್ನು ಆಚರಿಸುವ ಮೂಲಕ ಜನರಿಗೆ ಸೌಹಾರ್ದತೆಯ ಸಂದೇಶ ಸಾರುತಿದೆ ಎಂದು ಹೇಳಿದರು.
       ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ್ ಶೀಲವಂತರ್ ಮಾತನಾಡಿ ಯಾವುದೊಂದೆ ಧರ್ಮ ಶ್ರೇಷ್ಠವಲ್ಲ. ಎಲ್ಲಾ ಧರ್ಮಗಳೂ ಶ್ರೇಷ್ಠವಾಗಿವೆ. ಶಾಂತಿ.ನೆಮ್ಮದಿಯಿಂದ ಬದುಕುವುದು ಎಲ್ಲಾ ಧರ್ಮಗಳ ಸಾರವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ಸಾರಿದ ಯೇಸು ಕ್ರಿಸ್ತ.ಬಸವಣ್ಣ. ಅಂಬೇಡ್ಕರ್ ಅವರನ್ನು ಅರಿಯದ ಅವೇಕೆಗಳಿಂದ ಇವತ್ತು ದೇಶ. ಪ್ರಪಂಚದಾದ್ಯಂತ ಯುದ್ಧಗಳು ನಡೆಯುತ್ತಿದೆ. ಈ ಜಗತ್ತಿನಲ್ಲಿ ಶರಣರು.ಸಾಧುಗಳು.ಸಂತರು ಎಲ್ಲವನ್ನು ಬದಿಗಿರಿಸಿ ಸಮಾಜದ ಒಳಿತುಗಾಗಿ ಬದುಕಿದವರನ್ನು ನಾವು ಸ್ಮರಿಸುತ್ತಿದ್ದೇವೆ. ಸೌಹಾರ್ದತೆ. ಐಕ್ಯತೆಯ ಮಾದರಿ ಬದುಕಿನ ಸಂದೇಶವನ್ನು ನವ ನಗರದಿಂದ ಜಿಲ್ಲೆ.ರಾಜ್ಯದಾದ್ಯಂತ ರವಾನಿಸಲಿ ಎಂದು ಸಲಹೆ ನೀಡಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವ ನಗರದ ಇರುವಾತನು ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ ಯೇಸು ಅಂದರೆ ಆತನ ಮೇಲೆ ಭರವಸೆ ಉಳ್ಳವರಾಗಿ ತಮ್ಮ ತಮ್ಮ ಹೃದಯದಲ್ಲಿ ಯೇಸುವನ್ನು ಸ್ಮರಿಸಿಕೊಂಡು.ಆತನಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಅಥವಾ ತಗ್ಗಿಸಿಕೊಳ್ಳುವದಲ್ಲದೆ ಹೃದಯಪೂರ್ವಕವಾಗಿ ಯೇಸು ಸ್ವಾಮಿಯನ್ನು ಬೇಡುವ ಭಕ್ತರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಎಂದು ಯೇಸುವಿನ ಹೆಸರಿನ ಅರ್ಥ. ಯೇಸು ಸ್ವಾಮಿ ಈ ಭೂಮಿಗೆ ನರರೂಪ ತಾಳಿ ಜನಿಸಿದ ಉದ್ದೇಶ ಲೋಕಕ್ಕೆ ಪ್ರೀತಿಯನ್ನು ಸಾರಲಿಕ್ಕೆ ಬಂದನು.ಈ ಪ್ರೀತಿಯು ಹೊಟ್ಟೆಕಿಚ್ಚು ಪಡುವುದಲ್ಲ. ಹೊಗಳಿಕೊಳ್ಳುವುದಲ್ಲ. ಉಬ್ಬಿಕೊಳ್ಳುವುದಲ್ಲ. ಮರ್ಯಾದೆಗೆಟ್ಟು ನಡೆಯುವುದಲ್ಲ. ಪ್ರೀತಿಯು ಎಲ್ಲವನ್ನು ಸಹಿಸಿಕೊಳ್ಳುತ್ತದೆ.ಎಲ್ಲವನ್ನು ನಂಬುತ್ತದೆ.ಎಲ್ಲವನ್ನು ನಿರೀಕ್ಷಿಸುತ್ತದೆ ಈ ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ.ಇಂಥ ಪ್ರೀತಿಯನ್ನು ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯರಿಗೂ ತಿಳಿಸುವುದಕ್ಕಾಗಿ ಭೂಮಿಗೆ ಜನಿಸಿ ಬಂದ ದಿನವೇ ಕ್ರಿಸ್ ಮಸ್ ಹಬ್ಬವನ್ನಾಗಿ ಆಚರಿಸುತ್ತೇವೆ ಎಂದು ಹೇಳಿದರು.
                       ಏಸುಕ್ರಿಸ್ತನ ಅನುಯಾಯಿಗಳಾದ ರೇಷ್ಮಾ ಸಿ.ಅಪ್ಪಣ್ಣವರ್ ಮತ್ತು ಅನು ಕಿನ್ನಾಳ ಸಂಗಡಿಗರು ಸ್ವಾಗತ ಗೀತೆ ಹಾಡಿದರು.
      ಗಂಗಾವತಿಯ ಮಸ್ ದರ್ ಎಜು ಆ್ಯಂಡ್ ಚಾರಿಟಿ ಸಂಸ್ಥೆಯ ಅಧ್ಯಾಪಕ
ಹಾಫಿಝ್ ಮುಹ್ಸಿನ್ ಹಾಶಿಮಿ. ಇರುವಾತನು ಚರ್ಚಿನ ಸದಸ್ಯ ಬೀರಪ್ಪ ಕಿನ್ನಾಳ.ಮಂಜುನಾಥ್ ಚಿತ್ರಗಾರ. ರೂಪ. ಮೇಘಾ. ಪ್ರವೀಣ್. ಪ್ರಕಾಶ್. ಕವಿತಾ.ವಿಜಯಲಕ್ಷ್ಮಿ. ಕವನ.ನಿರೀಕ್ಷಾ.ವಿಶ್ವಾಸ್ಮಿತ್ ಮುಂತಾದವರು ಭಾಗವಹಿಸಿದ್ದರು.
      ಸ್ವಾಗತವನ್ನು ಗೀತಾ ಆರ್. ಮದಕಟ್ಟಿ ಮಾಡಿದರು.ರಾಘು ಮದಕಟ್ಟಿನಿರೋಪಿಸಿದರು.
ತುಕಾರಾಮ್ ಬಿ.ಪಾತ್ರೋಟಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: