ಜಿಲ್ಲಾಸ್ಪತ್ರೆಯ ಅವ್ಯವಸ್ಥೆ : ಆಕ್ರೋಶಗೊಂಡ ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ : ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಅಲ್ಲಿಯ ಅವ್ಯವಸ್ಥೆ ಕಂಡು ದಂಗಾದರು. ನಾಯಿ ಕಡಿತಕ್ಕೊಳಗಾಗಿದ್ದವರ ಆರೋಗ್ಯ ವಿಚಾರಿಸಿದ ಸಚಿವರು ಎಮರ್ಜೆನ್ಸಿ ವಾರ್ಡನ ಸುತ್ತಮುತ್ತ ಗಲೀಜು ಕಂಡು ಗರಮ್ಮಾದರು. ಕೂಡಲೇ ಸ್ವಚ್ಛಗೊಳಿಸುವಂತೆ ಡಿಎಚ್ ಓರಿಗೆ ತಾಕೀತು ಮಾಡಿದರು. ಅಲ್ಲಿಂದ ಮರಳಿ ಮುಖ್ಯ ದ್ವಾರದ ಕಡೆ ಬರುವಾಗಿ ಪೂರ್ಣವಾಗಿ ಕತ್ತಲು ಕಂಡು ಯಾರ್ರಿ ಮೆಂಟೆನೆನ್ಸ್ ಮಾಡೋರು ಕನಿಷ್ಠ ಒಂದು ಲೈಟ್ ಹಾಕುವುದಕ್ಕೂ ಬರುವುದಿಲ್ಲವಾ? ಗೋಡೆಗಳೆಲ್ಲಾ ಗಲೀಜಾಗಿವೆ ಸ್ಚಚ್ಛ ಮಾಡೋದಕ್ಕೆ ಬರಲ್ವಾ ? ಎಂದು ಆಕ್ರೋಶಗೊಂಡರು. ಕಿಮ್ಸ ವತಿಯಿಂದ ಬಂದಿದ್ದ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಒಳಗಿದ್ದ ಜನಸಂದಣಿಯನ್ನು ರೋಗಿಗಳ ಸಂಖ್ಯೆಯನ್ನು ಖುದ್ದಾಗಿ ನೋಡಿದ ಸಚಿವರು ಕನಿಷ್ಠ ಚೀಟಿ ಮಾಡುವುದಕ್ಕಾದರೂ ಇನ್ನೊಂದರೆಡು ಕೌಂಟರ್ ಮಾಡುವುದಕ್ಕಾಗುವುದಿಲ್ಲವಾ ? ನಾಳೆಯೊಳಗೆ ಈ ಸಮಸ್ಯೆ ಬಗೆಹರಿಯಬೇಕು ನಾನು ನಾಳೆ ಪರಿಶೀಲನೆ ಮಾಡುತ್ತೇನೆ ಎಂದು ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ರೋಗಿಗಳು ದಿನಪೂರ್ತಿ ಕ್ಯೂನಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಡಿಎಚ್ ಓ ಡಾ.ಲಿಂಗರಾಜು ಟಿ. ಸೇರಿದಂತೆ ಇತರರು ಉಪಸ್ಥಿತರಿದ್ದರು
Comments are closed.