ಹನುಮ ಸಂಭ್ರಮ: ವಿದ್ಯುದೀಪಗಳಿಂದ ಅಲಂಕಾರಗೊಂಡ ಅಂಜನಾದ್ರಿ
: ಡಿಸೆಂಬರ್ 23 ಮತ್ತು ಡಿಸೆಂಬರ್ 24 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದೆ.
ಹಿಂದೆಂದಿಗಿಂತಲೂ ಈ ಭಾರಿ ಹೆಚ್ಚಿನ ರೀತಿಯಲ್ಲಿ ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ ಕಾಣಬೇಕು. ಜನರಿಗೆ ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಹಲವಾರು ಬಾರಿ ಸಭೆಯಲ್ಲಿ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಲಂಕಾರ ಸಮಿತಿಯನ್ನು ರಚಿಸಿ ಬೆಟ್ಟದ ಅಲಂಕಾರಕ್ಕು ಸಹ ಅಷ್ಟೇ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮೇಲಿಂದ ಮೇಲೆ ನಿರ್ದೇಶನ ನೀಡಿ ಮಾರ್ಗದರ್ಶನ ಮಾಡಿದ್ದರು.
ಹನುಮಮಾಲಾ ಕಾರ್ಯಕ್ರಮದ ಮುನ್ನಾ ದಿನವಾದ ಡಿಸೆಂಬರ್ 22ರಂದು ಅಂಜನಾದ್ರಿಯ ಬೆಟ್ಟವು ಬಗೆಬಗೆಯ ಬಣ್ಣದ ವಿದ್ಯೂದೀಪಗಳಿಂದ ಅಲಂಕಾರಗೊಂಡು ಜನಮನ ಸೆಳೆಯುತ್ತಿದೆ.
ಅಲಂಕಾರಕ್ಕೆ ಮೆಚ್ಚುಗೆ: ಡಿಸೆಂಬರ್ 22ರಂದು ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಬಗೆಬಗೆಯ ವಿದ್ಯುದೀಪಗಳಿಂದ ಅಲಂಕೃತಗೊಂಡು ಬಹುಚೆಂದವಾಗಿ ಕಂಡ ಅಂಜನಾದ್ರಿ ಬೆಟ್ಟದ ಸೊಬಗನ್ನು ಕಂಡು ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
Comments are closed.