ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಸಕ್ತ ದಿನಗಳಲ್ಲಿ ಬಹುಮುಖ್ಯವಾದ ಅವಶ್ಯಕತೆಯಾಗಿದೆ -ಸಂಕನಗೌಡರ್
Koppal : ಇಂದಿನ ದಿನಗಳಲ್ಲಿ ಅತಿಯಾದ ವಾಹನ ಓಡಾಟ, ದೂಳು, ಬಿಸಿಲು, ಗಾಳಿ ಮತ್ತು ಮಾನವನ ಅತಿಯಾದ ದುರಾಸೆಯ ಚಟುವಟಿಕೆಗಳಿಂದಾಗಿ ಮನು?ನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಹಲವಾರು ಘಟನೆಗಳು ಘಟಿಸುತ್ತಿದ್ದು ವಿ?ಧಕರ. ಅದರಲ್ಲೂ ವಿಶೇ?ವಾಗಿ ಕಣ್ಣಿಗೆ ತೊಂದರೆಯಾಗುವಂತಹ ಹಲವಾರು ಚಟುವಟಿಕೆಗಳು ಇಂದು ಸಮಾಜದಲ್ಲಿ ನಡೆಯುತ್ತಿವೆ. ಆದ್ದರಿಂದ ಕಣ್ಣನ್ನು ಶುದ್ಧವಾಗಿ, ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವುದು ಇಂದಿನ ದಿನದ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ಬಸವರಾಜ್ ಸಂಕನಗೌಡರ ಹೇಳಿದರು. ಅವರು ಓಜನಹಳ್ಳಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಂಕನಗೌಡರ್ ಎಜುಕೇಶನಲ್ , ರೂರಲ್ ಮತ್ತು ಮಲ್ಟಿಪರ್ಪಸ್ ಡೆವಲಪ್ಮೆಂಟ್ ಟ್ರಸ್ಟ್ ಹಾಗೂ ಎಂಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕೊಪ್ಪಳ ಹಾಗೂ ಗ್ರಾಮ ಪಂಚಾಯಿತಿ ಓಜನಹಳ್ಳಿ ಇವರ ಸಹಯೋಗದಲ್ಲಿ ನಡೆದ ಒಂದು ದಿನದ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವೀರಾಂಜನೇಯ ಪತ್ತಿನ ಸೌಹಾರ್ದ ಸಹಕಾರಿ ಇರಕಲಗಡದ ಅಧ್ಯಕ್ಷರಾದ ಮಹೇಶ ಸುನಗ ನೆರವೇರಿಸಿದರು. ನಂತರ ಮಾತನಾಡಿದ ಮಹೇಶ ಸುನಗ ಅವರು ಸಂಕನಗೌಡರ್ ಎಜುಕೇಶನ್ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳು ಇತ್ತೀಚೆಗೆ ನಡೆಯುತ್ತಿರುವುದು ಸ್ವಾಗತಾರ್ಹ. ವಿಶೇ?ವಾಗಿ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳಾದ ಸ್ಪರ್ಧಾತ್ಮಕ ಪರೀಕ್ಷೆಗೆ ಅರಿವು ನೀಡುವುದು ಮತ್ತು ಅವರಿಗೆ ಉಚಿತ ನೋಟ್ ಬುಕ್ ಮತ್ತು ಪುಸ್ತಕಗಳನ್ನ ವಿತರಿಸುವಂತಹ ಹಲವಾರು ಕಾರ್ಯಕ್ರಮಗಳು ಸಂಸ್ಥೆಯಿಂದ ನಡೆಯುತ್ತಿವೆ ಎಂದು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವು ಪಲ್ಲೇದ ಸದಸ್ಯರಾದ ಎರಿಯಪ್ಪ ಜಂತ್ಲಿ, ದ್ಯಾಮನಗೌಡ ಮಾಲಿಪಾಟೀಲ್, ಭಾರತಿ ನಾಯಕ್ , ಮಂಜುನಾಥ್ ಈಶ್ವರಗೌಡ್ರು, ಮತ್ತು ರಿಂದಪ್ಪ ಚುಕ್ಕನಕಲ್ ಗ್ರಾಮದ ಹಿರಿಯರಾದ ನಾಗಪ್ಪ ಹಳ್ಳಿ, ಭೋಜಪ್ಪ ಸಂಕನಗೌಡರ, ಸಿದ್ದಪ್ಪ ಮೇಟಿ , ಶಿವಪುತ್ರಪ್ಪ ಮೇಟಿ , ತಾಲೂಕ ಪಂಚಾಯತ್ ಮಾಜಿ ಸದಸ್ಯರಾದ ಸಂಕನಗೌಡ್ರು ವರಪುತ್ರಪ್ಪ, ಡಾಕ್ಟರ್ ವಾಗೀಶ್, ಬಸವಯ್ಯ ಹಿರೇಮಠ ,ಸಿದ್ದು, ಶರಣಪ್ಪ ಮಾಲಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. ಐಶ್ವರ್ಯ ಮತ್ತು ಶಿಲ್ಪ ಪ್ರಾರ್ಥನೆಗೈದರೆ, ಮಂಜುನಾಥ್ ಸ್ವಾಗತಿಸಿದರು . ಉಪನ್ಯಾಸಕರಾದ ಉದಯ್ ಕುಮಾರ್ ನಿರೂಪಿಸಿದರು ವಿದ್ಯಾರ್ಥಿನಿ ಕವನ ವಂದಿಸಿದರು.
Comments are closed.