ನಗರಸಭೆಯಿಂದ ನಿವೇಶನಗಳ ಹಂಚಿಕೆ ಆಗಲಿ: ಭಾರಧ್ವಾಜ್
.
ಗಂಗಾವತಿ: ಕಳೆದ ೧೦ ವರ್ಷಗಳಿಂದ ಬಡವರಿಗೆ ತಾವು ಸ್ವಾಧೀನದಲ್ಲಿರುವ ನಿವೇಶನಗಳ ಹಂಚಿಕೆಯಾಗದೆ ಕಾರ್ಮಿಕರಿಗೆ ವಂಚನೆ ಮಾಡುತ್ತಿರುವ ಪೌರಾಡಳಿತ ಇಲಾಖೆ ಕೂಡಲೇ ಕಾರ್ಮಿಕರು ಸ್ವಾಧೀನದಲ್ಲಿರುವ ನಿವೇಶನಗಳನ್ನು ಅರ್ಜಿದಾರರಿಗೆ ಮಂಜೂರು ಮಾಡಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಒತ್ತಾಯಿಸುತ್ತಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಗಂಗಾವತಿ ನಗರದಲ್ಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ನಿವೇಶನಗಳ ಹಂಚಿಕೆ ಆಗಿರುವುದಿಲ್ಲ. ಮೂರು ಬಾರಿ ಅರ್ಜಿ ಸಲ್ಲಿಸಿದರೂ ನಗರಸಭೆಯವರು ಯಾವುದೇ ನಿವೇಶನಗಳನ್ನು ಮಂಜೂರು ಮಾಡುತ್ತಿಲ್ಲ.
ಗಂಗಾವತಿ ಜನರ ದುರ್ದೈವವೆಂದರೆ ಬಳ್ಳಾರಿಯ ಗಣಿಧಣಿ ಶಾಸಕರಾಗಿರುವುದು. ಇವರು ಬಳ್ಳಾರಿಯಲ್ಲಿಯೂ ಕೂಡಾ ಯಾವುದೇ ಬಡವರಿಗಾಗಿ ನಿವೇಶನಗಳನ್ನು ಮಂಜೂರು ಮಾಡಿಸಿರುವುದಿಲ್ಲ. ಶೀಘ್ರದಲ್ಲಿಯೇ ನಿವೇಶನಗಳಿಗೆ ಅರ್ಜಿ ಹಾಕಿದವರೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ದಿನಾಂಕ ನಿಗದಿಪಡಿಸುತ್ತೇವೆ. ಶಾಸಕರು ಕೂಡಲೇ ನಿವೇಶನಗಳ ಹಂಚಿಕೆ ಬಗ್ಗೆ ಗಮನಹರಿಸಿ ಕ್ರಮಜರುಗಿಸಬೇಕು. ಇಲ್ಲದಿದ್ದಲ್ಲಿ ಶಾಸಕರ ವಿರುದ್ಧ ಹೋರಾಟ ಮಾಡಲಾಗುವುದೆಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
Comments are closed.